LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕಣ್ಣು ಕಾಣದ ಮೇಘನಾ ಕೆ.ಟಿ. ಅವರ ಯುಪಿಎಸ್‌ಸಿ ಯಶೋಗಾಥೆ

ಮೈಸೂರು :ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ಒಂದು ಬಾರಿ ಪಾಸಾಗುವುದೇ ಕಷ್ಟಕರ. ಹೀಗಿರುವಾಗ ಕಣ್ಣು ಕಾಣದ ವಿದ್ಯಾರ್ಥಿನಿ ಯುಪಿಎಸ್‌ಸಿನಲ್ಲಿ ಎರಡೆರಡು ಬಾರಿ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಮೈಸೂರು ಮೂಲದ ಕೆ.ಟಿ. ಮೇಘನಾ ಯಶೋಗಾಥೆ ಇಲ್ಲಿದೆ.

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ) ದೇಶದ ಅತ್ಯುನ್ನತ ನಾಗರೀಕ ಸೇವೆಗಳ ನೇಮಕಕ್ಕೆ 2022ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮೈಸೂರು ಮೂಲದ ಕೆ.ಟಿ. ಮೇಘನಾ ಅವರು 425ನೇ ರ್‍ಯಾಂಕ್‌ ಪಡೆದಿದ್ದಾರೆ.

2020ರಲ್ಲಿ ನಡೆದ ಯುಪಿಎಸ್‌ಸಿ ಪರೀಕ್ಷೆಯಲ್ಲೂ ಆಯ್ಕೆಯಾಗಿದ್ದರು. ಆದರೆ, rank ಕಡಿಮೆ ಬಂದ ಕಾರಣ ಮತ್ತೆ ಪರೀಕ್ಷೆ ಬರೆದಿದ್ದರು.ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಮೂಲದವರಾದ ಇವರು ಹಾಲಿ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿದ್ದಾರೆ.

ತಾಂಡವಮೂರ್ತಿ ಹಾಗೂ ನವನೀತ ದಂಪತಿ ಪುತ್ರಿ ಮೇಘನಾ ಅವರು ಪೂರ್ಣ ಪ್ರಮಾಣದಲ್ಲಿ ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾರೆ. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ರೆಟಿನಾ ಸಮಸ್ಯೆ ಎದುರಾಗಿ, ಶೇ.70ರಷ್ಟು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಆದರೆ ತಮಗಿರುವ ಈ ವೈಕಲ್ಯವನ್ನು ಮೆಟ್ಟಿನಿಂತು ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.

ಶಾಲಾ-ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದ್ದ ಮೇಘನಾ, 2015ನೇ ಬ್ಯಾಚ್ ನಲ್ಲಿ ಕೆಎಎಸ್ ಪರೀಕ್ಷೆಯಲ್ಲಿ 11ನೇ rank ಪಡೆದು ಪಾಸಾಗಿದ್ದು, ಸದ್ಯ ಬೆಂಗಳೂರಿನಲ್ಲಿ ಖಜಾನೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಅಂಧ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸ್ಕ್ರೈಬ್‌ ಫೆಸಿಲಿಟಿ ಲಭ್ಯವಿದೆ. ಅಂದರೆ, ಬೇರೊಬ್ಬರ ಸಹಾಯ ಪಡೆದು ಪರೀಕ್ಷೆ ಬರೆಯಬಹುದಾಗಿದೆ. ಪರೀಕ್ಷೆ ಬರೆಯಲು ಯುಪಿಎಸ್‌ಸಿಯೇ ಯಾರನ್ನಾದರೂ ನೇಮಿಸುತ್ತದೆ. ಅಥವಾ, ನಾವೇ ಯಾರನ್ನಾದರೂ ಕರೆದುಕೊಂಡು ಹೋಗಬಹುದು. ಆದರೆ, ಅವರು ಪದವಿಯನ್ನು ಪೂರ್ಣಗೊಳಿಸಿರಬಾರದು ಎನ್ನುವುದು .

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರತಿಷ್ಠಿತ ಅಪೋಲೋ ಫಾರ್ಮಸಿಗೆ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ!ಅರೇ,‌ ಉರ್ಫಿಗೇನಾಯ್ತು? ನಟಿಯ‌ ಮುಖ ಪರಚಿದ್ದು ಯಾರು?CAG report ಗ್ಯಾರಂಟಿಗಳಿಂದಾಗಿ ರಾಜ್ಯ ಸರ್ಕಾರದ ವಿತ್ತೀಯ ಕೊರತೆ ಭಾರೀ ಹೆಚ್ಚಳ: CAG ವರದಿಯಲ್ಲಿ ಮಾಹಿತಿ; ಆದಾಯ ಶೇ.1.86, ಖರ್ಚು ಶೇ.12.54ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆಆನ್‌ಲೈನ್ ಗೇಮಿಂಗ್ ತಡೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆಬೆಂಗಳೂರು ನಗರ ವಿವಿಗೆ ಡಾ. ಮನಮೋಹನ್ ಸಿಂಗ್ ಹೆಸರು - ವಿಧಾನಸಭೆಯಲ್ಲಿ ಅನುಮೋದನೆಕ್ರಿಮಿನಲ್ ಕೇಸ್‌ನಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳನ್ನು ಪದಚ್ಯುತಗೊಳಿಸುವ ಮಸೂದೆ ಇಂದು ಮಂಡನೆಮಕ್ಕಳ ನಾಪತ್ತೆ, ಅಪಹರಣ ಪ್ರಕರಣ : ನಾಲ್ಕನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಸರಣಿ ಅಪಘಾತ: ಗಾಯಾಳು ರಕ್ಷಿಸಲು ಬಂದ ಆಂಬುಲೆನ್ಸ್‌ಗೂ ಅಪಘಾತ: ಓರ್ವ ಸಾವುವಿಮಾನಗಳ ಮಾದರಿಯಲ್ಲಿ ರೈಲಿನಲ್ಲೂ ಲಗೇಜ್‌ ನಿಯಮ ಜಾರಿಗೆ ತರಲು ರೈಲ್ವೆ ಇಲಾಖೆ ಚಿಂತನೆ!