Press ID & Credential Portal
Apply / Verify  ➔
LIVE TV LocalKarnatakaCrimeIndiaWorldFilmNationalLife StyleInternationalBusinessPoliticsSportsBusinessEducationTechnology
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Karnataka

ರಾಜಕೀಯಕ್ಕೆ ಸ್ಟಿಂಗ್‌ ಬಳಕೆ; ಸಿಎಂ ವರದಿಗೆ ಹೆಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆದಿರುವ ಸ್ಟಿಂಗ್‌ ಅನ್ನು ಜೆಡಿಎಸ್‌ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಹೈಕಮಾಂಡ್‌ʼಗೆ ನೀಡಿರುವ ವರದಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಸ್ಟಿಂಗ್‌ ಮಾಡಿದ್ದು ಯಾರು? ಅದರ ಮಾಸ್ಟರ್‌ ಮೈಂಡ್‌ ಯಾರು? ಅದರ ಕಿಂಗ್‌ʼಪಿನ್‌ ಯಾರು? ಶೂಟಿಂಗ್‌ ಮಾಡುವಾಗ ರಾಕೇಶ್‌ ಶೆಟ್ಟಿಗೆ ಸಹಕರಿಸಿದ ಕಾಂಗ್ರೆಸ್‌ ಪಕ್ಷದ ಮಹಿಳಾಮಣಿ ಯಾರು? ಎಂದಬುದು ಈಗಾಗಲೇ ಜಗಜ್ಜಾಹೀರಾಗಿದೆ. ಇನ್ನು ಯಾವ ಮುಖ ಇಟ್ಟುಕೊಂಡು ಮುಖ್ಯಮಂತ್ರಿ ದಿಲ್ಲಿ ನಾಯಕರಿಗೆ ವರದಿ ನೀಡುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದರು. 

ಜೆಡಿಎಸ್‌ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ  ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು; ಈ ಸ್ಟಿಂಗ್‌ ಷಡ್ಯಂತ್ರ್ಯದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರೇ ನೇರ ಶಾಮೀಲಾಗಿದ್ದಾರೆ. ಈ ಸಿಂಡಿಕೇಟ್‌ ನಲ್ಲಿ ಹಾಲಿ ಮುಖ್ಯಮಂತ್ರಿ ಇದ್ದಾರೆ. ಪಾಪ.. ಅವರು ಅಂಗೈ ಹುಣ್ಣಿಗೆ ಕನ್ನಡಿ ಹುಡುಕುತ್ತಿದ್ದಾರೆ ಎಂದು ಚಾಟಿ ಬೀಸಿದರು.

ಅಲ್ಲದೆ, ಈ ಬಗ್ಗೆ ಅಗತ್ಯವಿದ್ದರೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ತಯಾರಿದ್ದೇನೆ. ಅವರು ನಮ್ಮ ಪಕ್ಷದಲ್ಲಿದ್ದವರು, ಅವರನ್ನು ಭೇಟಿ ಮಾಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಪ್ರಶೆಯೊಂದಕ್ಕೆ ಉತ್ತರಿಸಿದರು.

ಹಾಗೆಯೇ, ಸ್ಟಿಂಗ್‌ʼಪಿನ್‌ ರಾಕೇಶ್‌ ಶೆಟ್ಟಿಯನ್ನು ನ್ಯಾಯಾಲಯದ ಕ್ರಮದಿಂದ ಪಾರು ಮಾಡಲು ಸ್ವತಃ ಸರಕಾರದ ಉನ್ನತ ವ್ಯಕ್ತಿಗಳೇ ಪ್ರಯತ್ನ ಮಾಡುತ್ತಿದ್ದಾರೆ. ಅವನಿಗೆ ಸುಲಭವಾಗಿ ಜಾಮೀನು ಸಿಗುವಂತೆ ಮಾಡಲು ಕೆಲ ಪೊಲೀಸ್‌ ಅಧಿಕಾರಿಗಳು ಒಳಗೊಳಗೇ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಈ ಹಿಂದೆಯೂ ಈ ರಾಕೇಶ್‌ ಶೆಟ್ಟಿಯನ್ನು ಅನೇಕ ಪ್ರಕರಣಗಳಿಂದ ರಕ್ಷಣೆ ಮಾಡಲಾಗಿದೆ. ಆತನ ನಿಮ್ಮಂತೆಯೇ (ಪತ್ರಕರ್ತರು) ಕೆಲಸ ಮಾಡುತ್ತಿದ್ದ ವಿಕ್ಕಿ ಎಂಬ ಯುವಕನ ಸಾವು ಅನುಮಾನಾಸ್ಪದ. ಆರೋಪಿ ನಡೆಸುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಆ ವ್ಯಕ್ತಿ ಸ್ಟಿಂಗ್ ಕಾರ್ಯಾಚರಣೆಗಳಿಗೆ ಸಂಬಂಧಿಸಿದವರಾಗಿದ್ದರೋ ಇಲ್ಲವೋ ಎಂಬುದು ಬೇರೆ ವಿಚಾರ.  ಆ ಯುವಕನ್ನು ದುರುಪಯೋಗಪಡಿಸಿಕೊಂಡಿರಬಹುದು ಎಂದರು ಸಚಿವರು.

ಪವರ್ ಟಿವಿಯ ಸ್ಟಿಂಗ್ ವಿವಾದಕ್ಕೆ ಸಂಬಂಧಿಸಿ ಪ್ರಸಾರವಾಗದ ವೀಡಿಯೊಗಳನ್ನು ಚಿತ್ರೀಕರಿಸಿ ಇಟ್ಟುಕೊಂಡಿದ್ದ ಆರೋಪಿ ರಾಕೇಶ್‌ ಶೆಟ್ಟಿ ಜತೆ ಕೆಲಸ ಮಾಡುವವರು ಅಪಾಯದಲ್ಲಿದ್ದಾರೆ ಎಂಬುದನ್ನು ಮರೆಯಬಾರದು. 2024ರಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ ಎಂಬ ವರದಿ ಇದೆ. ಅದನ್ನು ಅಸ್ವಾಭಾವಿಕ ಸಾವು (ಯುಡಿಆರ್) ಮಾಡಿ ಮುಚ್ಚಿ ಹಾಕಲಾಗಿದೆ. ಪೊಲೀಸ್ ಅಧಿಕಾರಿಗಳು ಮತ್ತು ಸರಕಾರವಷ್ಟೇ ಅಲ್ಲದೆ, ಹಾಲಿ ಮುಖ್ಯಮಂತ್ರಿ ಕೂಡ ಸಹಕರಿಸಿದ್ದಾರೆ. ಏಕೆಂದರೆ ಸ್ಟಿಂಗ್‌ʼಪಿನ್‌ʼಗೂ ಮುಖ್ಯಮಂತ್ರಿಗೂ ಗಳಸ್ಯಕಂಠಸ್ಯ. ಆತ ಇವರಿಗೆ ಬಲಗೈಬಂಟ ಎಂದು ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ರಾಕೇಶ್ ಶೆಟ್ಟಿ ಬಳಿ ಇನ್ನೂ ಪ್ರಸಾರವಾಗದ ನೂರಾರು ಸ್ಟಿಂಗ್ ವೀಡಿಯೊಗಳಿದ್ದವು ಮತ್ತು ಅವುಗಳನ್ನು ಪೊಲೀಸ್ ಅಧಿಕಾರಿಗಳು, ಸಂವಿಧಾನ ಸಂಸ್ಥೆಗಳ ಉನ್ನತ ಹುದ್ದೆಗಳಲ್ಲಿರುವ ಗಣ್ಯರಯ ಸೇರಿ ವಿವಿಧ ಪ್ರಮುಖರನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆಗೆ ಬಳಸಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ ಎಂದ ಕೇಂದ್ರ ಸಚಿವರು, ಅದಕ್ಕೆ ಸಂಬಂಧಿಸಿದ ಮಾಧ್ಯಮ ವರದಿಯನ್ನು ಪ್ರದರ್ಶಿಸಿದರು. ಅಲ್ಲದೆ; ಸಂವಿಧಾನದ ಉನ್ನತ ಗಣ್ಯರಿಗೆ ಸಂಬಂಧಿಸಿದ ವೀಡಿಯೊ ಬಗ್ಗೆ ಕರ್ನಾಟಕ ಹೈಕೋರ್ಟ್‌ನ ಜಾಗೃತಾ ವಿಭಾಗದಲ್ಲಿ ದೂರು ದಾಖಲಾಗಿತ್ತು ಎಂದು ಸಚಿವರು ಹೇಳಿದರು.

ಈ ಎಲ್ಲಾ ಆರೋಪಗಳನ್ನು ಎದುರಿಸುತ್ತಿರವ ಕಟ್ಟ ವ್ಯಕ್ತಿಗೆ ಸುಲಭವಾಗಿ ಜಾಮೀನು ದೊರಕುವಂತೆ ಸರಕಾರದ ಒಳಮಟ್ಟದಲ್ಲಿ ಷಡ್ಯಂತ್ರ್ಯ ನಡೆಯುತ್ತಿದೆ. ಕೆಲ ಅಧಿಕಾರಿಗಳೇ ಇದೇ ದೊಡ್ಡ ಕೆಲಸ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಆ ವ್ಯಕ್ತಿಯನ್ನು ಹೊರಗೆ ಬಿಟ್ಟರೆ ಸ್ಟಿಂಗ್‌ ಗೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡುವ ಅಪಾಯವಿದೆ ಎಂದು ಸಚಿವರು ಹೇಳಿದರು.

ರಾಜಕೀಯ ದ್ವೇಷದ ಆರೋಪಕ್ಕೆ ಉತ್ತರ:

ಈ ಹಗರಣಗಳನ್ನು ಮುಂದಿಟ್ಟುಕೊಂಡು ಡಿ.ಕೆ. ಶಿವಕುಮಾರ್ ಅಥವಾ ಕಾಂಗ್ರೆಸ್ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಲು ಜೆಡಿಎಸ್ ತಂತ್ರ ರೂಪಿಸಿದೆ ಎಂಬ ಆರೋಪಗಳನ್ನು ಸಚಿವರು ತಳ್ಳಿಹಾಕಿದರು. 

ಅಲ್ಲದೆ, ನನ್ನ ಮುಖ್ಯಮಂತ್ರಿ ಎಂದು ಪರಿಗಣಿಸದ ಕುಮಾರಸ್ವಾಮಿ ನನಗೆ ಪತ್ರ ಬರೆದಿದ್ದಾರೆ ಎಂದು ಡಿಕೆಶಿ ಹೇಳಿದ್ದಕ್ಕೂ ಉತ್ತರಿಸಿದ ಕುಮಾರಸ್ವಾಮಿ ಅವರು; "ಕನಕಪುರದಲ್ಲಿ ಬಿಎಸ್‌ಪಿ ಹೋರಾಟ ವರ್ಸಸ್ ಡಿ.ಕೆ. ಶಿವಕುಮಾರ್" ಎಂಬ ಪುಸ್ತಕ ಪ್ರದರ್ಶಿಸಿ, ಈ ಪುಸ್ತಕವನ್ನು ಒಮ್ಮೆ ಓದಿ. ಆ ವ್ಯಕ್ತಿಯನ್ನು ಮುಖ್ಯಮಂತ್ರಿ ಅಂತ ಕರೆಯಲು ಆಗುತ್ತದಾ? ಇಲ್ಲವಾ? ಎಂಬುದು ಗೊತ್ತಾಗುತ್ತದೆ ಎಂದು ಸಚಿವರು.

ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದು ನನ್ನ ಉದ್ದೇಶವೇ ಹೊರತು ಇದರಲ್ಲಿ ಯಾವುದೇ ರಾಜಕೀಯ ದ್ವೇಷವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ಒಳ ರಾಜಕೀಯದ ಫಲವೇ ಸ್ಟಿಂಗ್:

ಸಿದ್ದರಾಮಯ್ಯ ಅವರ ಹೆಸರು ಕೆಡಿಸಲು ಸ್ಟಿಂಗ್ ವಿಷಯ ಎಳೆದು ತಲಾಗಿದೆ. ಆ ಮೂಲಕ ಅವರ ಗೌರವಕ್ಕೆ ಧಕ್ಕೆ ತರಲು ಯಾಕೆ ಪ್ರಯತ್ನಿಸಿದರು ಎಂದ ಕುಮಾರಸ್ವಾಮಿ ಅವರು;  ಈ ಘಟನೆ 2011ಋಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದ್ದರೆ, ಸಂಬಂಧಿಸಿದ ಮಹಿಳೆಯನ್ನು 2023ರಲ್ಲಿ ಕೂರಿಸಿಕೊಂಡು ಸ್ಟಿಂಗ್ ಕಾರ್ಯಾಚರಣೆ ನಡೆಸಿದ್ದು ಏಕೆ? ವಿಷಯ ಎರಡೂವರೆ ವರ್ಷದಿಂದ ಗೊತ್ತಿದ್ದರೆ ಇಷ್ಟು ಕಾಲ ಏಕೆ ಕ್ರಮ ಕೈಗೊಳ್ಳಲಿಲ್ಲ? ಸ್ಟಿಂಗ್‌ನಲ್ಲಿ ಕಾಂಗ್ರೆಸ್‌ನ ಮಹಿಳಾ ನಾಯಕಿಯೊಬ್ಬರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ಗೆ ಹತ್ತಿರದ ವ್ಯಕ್ತಿ ಎಂದು ಹೇಳಲಾದವರ ಬಗ್ಗೆ ಉಲ್ಲೇಖವಿದೆ. ರಾಕೇಶ್‌ ಶೆಟ್ಟಿ ಜತೆಗಿದ್ದ ಆ ಮಹಿಳೆಯನ್ನು ಬಂಧಿಸಿದ್ದಾರೆಯೇ ಅಥವಾ ವಿಚಾರಣೆಗೆ ಕರೆಸಿದ್ದಾರೆಯೇ? ಈ ಪ್ರಶ್ನೆಗೆ ಸರಕಾರ ಮತ್ತು ಕಾಂಗ್ರೆಸ್‌ ಪಕ್ಷ ಉತ್ತರ ಕೊಡಬೇಕು ಎಂದು ಸಚಿವರು ಒತ್ತಾಯಿಸಿದರು.

ಜೆಡಿಎಸ್ ಕಾರ್ಯಕರ್ತರಿಗೆ ನೋಟಿಸ್ ನೀಡಲಾಗುತ್ತಿದೆ. ಆದರೆ ಸಂಬಂಧಪಟ್ಟವರ ವಿಚಾರಣೆ ಮತ್ತು ಸ್ಟಿಂಗ್‌ನ ಸತ್ಯಾಸತ್ಯತೆ ಬಗ್ಗೆ ಸ್ಪಷ್ಟನೆ ಇಲ್ಲ ಎಂದ ಅವರು; ತಮ್ಮ ಪಕ್ಷದವರು ಡಿಜಿ ಕಚೇರಿಗೆ ಪಾದಯಾತ್ರೆ ನಡೆಸಿದಾಗ ʼಸಾಕ್ಷಿ ಕೊಡಿʼ ಎಂದು ಕೇಳಲಾಗಿದೆ. ಯಾವ ಸಾಕ್ಷಿ ನೀಡಬೇಕು, ಈ ವಿಷಯವನ್ನು ಬೀದಿಬೀದಿಗೆ ಹರಡುತ್ತಿರುವುದು ಯಾಕೆ ಎಂದು ಅವರು ಪ್ರಶ್ನಿಸಿದರು. ಸಿದ್ದರಾಮಯ್ಯನವರಿಂದಲೇ ಕಾಂಗ್ರೆಸ್ ಈ ಮಟ್ಟಕ್ಕೆ ಬಂದಿದೆ ಎಂದಾದರೆ ಅವರಿಗೆ ನೀಡುತ್ತಿರುವ ಗೌರವ ಇದೇನಾ? ಎಂದು ಅವರು ಪ್ರಶ್ನಿಸಿದರು.

ಸ್ಟಿಂಗ್ ಈಗ ರಾಜಕೀಯ ಸ್ವರೂಪ ಪಡೆದಿದ್ದು, ರಾಜ್ಯ ಕಾಂಗ್ರೆಸ್ ನಾಯಕರ ವರ್ಚಸ್ಸಿಗೆ ಧಕ್ಕೆ ತರಲು ಜೆಡಿಎಸ್ ಸಂಚು ರೂಪಿಸಿದೆ ಎಂದು ಡಿ.ಕೆ. ಶಿವಕುಮಾರ್  ಅವರು ಹೈಕಮಾಂಡ್‌ಗೆ ತಿಳಿಸಿರುವುದು ಹಾಸ್ಯಾಸ್ಪದ. ಅವರು ತಮ್ಮ ಬಗ್ಗೆ ಹೇಳಬೇಕಿತ್ತು. ಸ್ಟಿಂಗ್‌ ನಾನೇ ಮಾಡಿದ್ದು, ಏನಿವಾಗ ಎಂದು ಕೇಳಿದ್ದ ತನ್ನ ಸಹಚರನ ಬಗ್ಗೆ ಹೇಳಬೇಕಿತ್ತು. 

ಡಿ.ಕೆ. ಶಿವಕುಮಾರ್ ಸ್ಟಿಂಗ್‌ ಬಗ್ಗೆ ಕ್ಯಾಬಿನೆಟ್‌ ನಲ್ಲಿ ಚರ್ಚೆ ಮಾಡುವುದಕ್ಕಿಂತ ಮೌಂಟ್‌ ಕಾರ್ಮೆಲ್‌ ಕಾಲೇಜ್‌ ಪಕ್ಕದ ಹೋಟೆಲ್‌ ನಲ್ಲಿ ಆರೋಪಿಯನ್ನು ಭೇಟಿ ಮಾಡಿ ಏನು ಚರ್ಚೆ ನಡೆಸಿದರು? ಅಂತಹ ಕಳಂಕಿತ ವ್ಯಕ್ತಿ ಜತೆಗೆ ಮುಖ್ಯಮಂತ್ರಿಗೆ ಏನು ಸಂಬಂಧ? ಈ ವಿಷಯ ಎಲ್ಲಾ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಂದೀಪ್‌ ಸುರ್ಜೇವಾಲ ಅವರಿಗೂ ಗೊತ್ತಿರಬೇಕಲ್ಲವೇ? ತನಿಖೆ ಮಾಡುವ ಪೊಲೀಸರು ಮೊದಲು ಶಿವಕುಮಾರ್‌ʼಗೆ ಫೋನ್‌ ಕೊಡುವ ವ್ಯಕ್ತಿಗಳ ಮೊಬೈಲ್‌ ಗಳನ್ನು ಹಾಗೂ ರಾಕೇಶ್‌ ಶೆಟ್ಟಿಯ ಮೊಬೈಲ್‌ ಪರಿಶೀಲನೆ ಮಾಡಿದರೆ ಹೇಗೆ? ಎಂದು ಅವರು ಪ್ರಶ್ನಿಸಿದರು.

ಸ್ಟಿಂಗ್‌ ವಿಷಯ ಈಗ ಸಿಕ್ಕಾಪಟ್ಟೆ ಹೈಪ್‌ ಆಗುತ್ತಿದೆ. ಇನ್ನು 15 ದಿನಗಳಲ್ಲಿ ಅದನ್ನು ಮುಚ್ಚಿಹಾಕುವ ಸಾಧ್ಯತೆ ಇದೆ ಎಂಬ ಆತಂಕವನ್ನೂ ಕೇಂದ್ರ ಸಚಿವರು ವ್ಯಕ್ತಪಡಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾಜಿ ಶಾಸಕರಾದ ಕೆ.ಎ. ತಿಪ್ಪೇಸ್ವಾಮಿ, ಡಾ.ಕೆ.ಅನ್ನದಾನಿ ಹಾಗೂ ಗ್ರೇಟರ್‌ ಬೆಂಗಳೂರು ಜೆಡಿಎಸ ಅಧ್ಯಕ್ಷ ಹೆಚ್.ಎಂ. ರಮೇಶ್‌  ಗೌಡ ಮುಂತಾದವರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯೇಂದ್ರ ಸಾರಥ್ಯದಲ್ಲೇ ಮುಂದಿನ ವಿಧಾನಸಭಾ ಚುನಾವಣೆ: ಬಿಜೆಪಿ ಹೈಕಮಾಂಡ್ ಮೆಗಾ ಪ್ಲಾನ್ಮದ್ದೂರಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ; ಗ್ರಾಮಸ್ಥರು ನಿಟ್ಟುಸಿರುಸಾಗರ ತಾಲ್ಲೂಕು ಅಂತಿಮ ಮತದಾರರ ಪಟ್ಟಿ ಪ್ರಕಟ: 1.94 ಲಕ್ಷಕ್ಕೆ ಇಳಿದ ಮತದಾರರ ಸಂಖ್ಯೆಮಲ್ಲಿಕಾರ್ಜುನ ಖರ್ಗೆ ವಿರುದ್ಧದ ವೈಯಕ್ತಿಕ ದಾಳಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ: ಮಾಜಿ MLC ರಮೇಶ್ ಬಾಬು ಆಕ್ಷೇಪಮಹರ್ಷಿ ವಾಲ್ಮೀಕಿ ಆದರ್ಶಗಳು ಇಂದಿನ ಯಾಂತ್ರಿಕ ಜಗತ್ತಿಗೆ ಪ್ರಸ್ತುತ: ಮದ್ದೂರು ತಹಶೀಲ್ದಾರ್ ಶಿವಕುಮಾರ್ ಬಿರಾದಾರ್10 ಎಕರೆಯಲ್ಲಿ ಕೆಎಆರ್ ಫ್ಯೂಚರ್ ಅಕಾಡೆಮಿ ಕ್ಯಾಂಪಸ್: ನೇಗಿಲಯೋಗಿ ರೈತ ಮಾರಾಟ ಕೇಂದ್ರದ ಸ್ಥಾಪಕ ಯೋಗೇಶ್ ಅಪ್ಪಾಜಿಸ್ವ-ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಉಚಿತ ಅಣಬೆ ಬೇಸಾಯ ತರಬೇತಿಗೆ ಅರ್ಜಿ ಆಹ್ವಾನBREAKING : ಕಲ್ಬುರ್ಗಿಯಲ್ಲಿ ತಡರಾತ್ರಿ ದರೋಡೆಗೆ ಬಂದಿದ್ದ ಗ್ಯಾಂಗ್ ನಿಂದ ಫೈರಿಂಗ್ : ಇಬ್ಬರು ಅರೆಸ್ಟ್!ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಗಣಿ ಗುತ್ತಿಗೆ ಪ್ರಕರಣದ PIL ವಜಾಗೊಳಿಸಿದ ಹೈಕೋರ್ಟ್SHOCKING : ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!