ರೈತರಿಗೆ ಉಪಯುಕ್ತ ಮಾಹಿತಿ: ಮಣ್ಣಿನ ಫಲವತತ್ತೆಯನ್ನು ಹೆಚ್ಚಿಸಲು ಹೀಗೆ ಮಾಡಿ.!
ಚಿತ್ರದುರ್ಗ: ಕೇವಲ ಡಿ.ಎ.ಪಿ ರಸಗೊಬ್ಬರಕ್ಕೆ ಅಂಟಿಕೊಳ್ಳದೆ, ಮಣ್ಣಿನ ಫಲವತ್ತತೆ ಹಾಗೂ ಉತ್ತಮ ಇಳುವರಿಗಾಗಿ ರೈತರು ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳನ್ನು ಬಳಸುವಂತೆ ಚಿತ್ರದುರ್ಗ ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ್ ಸಲಹೆ ನೀಡಿದ್ದಾರೆ.
ಸಸ್ಯಗಳ ಬೆಳವಣಿಗೆಗೆ ಅಗತ್ಯವಿರುವ 17 ಪೋಷಕಾಂಶಗಳಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಪ್ರಮುಖವಾಗಿವೆ. ಪ್ರಸ್ತುತ ರೈತರು ಡಿ.ಎ.ಪಿ ಮತ್ತು ಯೂರಿಯಾವನ್ನು ಅತಿಯಾಗಿ ಬಳಸುತ್ತಿದ್ದು, ಇದರಿಂದ ಪೊಟ್ಯಾಷ್ ಕೊರತೆಯುಂಟಾಗಿ ಬೆಳೆಗಳ ರೋಗನಿರೋಧಕ ಶಕ್ತಿ ಕುಂದುತ್ತಿದೆ. ಶಿಫಾರಸ್ಸಿನಂತೆ ಪೋಷಕಾಂಶಗಳ ಅನುಪಾತವು 4:2:1 ಇರಬೇಕು, ಆದರೆ ಪ್ರಸ್ತುತ ಬಳಕೆಯು 6.0:3.9:1.0 ರಷ್ಟಿದ್ದು ಸಮತೋಲನ ತಪ್ಪುತ್ತಿದೆ. ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕದ ಅಂಶವಿರುವ 20:20:0:13, 16:20:0:13, 15:15:15, 10:26:26, 12:32:16, 17:17:17, 19:19:19 ಸೇರಿದಂತೆ ವಿವಿಧ ಗ್ರೇಡ್‌ಗಳ ಸಂಯುಕ್ತ ಗೊಬ್ಬರಗಳನ್ನು ಬಳಸಬಹುದು. ರಂಜಕ ಪೋಷಕಾಂಶ ನೀಡುವ ಪ್ರಾಂ (Pಖಔಒ), ಸಿಂಗಲ್ ಸೂಪರ್ ಫಾಸ್ಫೇಟ್ (SSP), ಟ್ರಿಪಲ್ ಸೂಪರ್ ಫಾಸ್ಫೇಟ್ (ಖಿSP) ಹಾಗೂ ನ್ಯಾನೋ ಡಿ.ಎ.ಪಿ ಬಳಸಲು ಅವಕಾಶವಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಅರಳು ರೂಪದ ಡಿ.ಎ.ಪಿ ಲಭ್ಯವಿದ್ದು, ಬಣ್ಣ ಬೇರೆಯಾಗಿದ್ದರೂ ಇವುಗಳ ಗುಣಮಟ್ಟ ಹಾಗೂ ಪೋಷಕಾಂಶಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದ್ದರಿಂದ ರೈತರು ಯಾವುದೇ ಗೊಂದಲವಿಲ್ಲದೆ ಲಭ್ಯವಿರುವ ಗೊಬ್ಬರವನ್ನು ಬಳಸಬಹುದು . ರೈತರು ಮಣ್ಣಿನ ಆರೋಗ್ಯ ಕಾಪಾಡಲು ಸಮತೋಲಿತ ರಸಗೊಬ್ಬರ ಬಳಕೆಗೆ ಆದ್ಯತೆ ನೀಡಬೇಕೆಂದು ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ್ ಹೇಳಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.