LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಫೈನಾನ್ಸ್ ಕಿರುಕುಳ ಪ್ರಕರಣಗಳ ಪಟ್ಟಿಯಲ್ಲಿ ಉತ್ತರ ಕನ್ನಡ ರಾಜ್ಯಕ್ಕೆ ಅಗ್ರಸ್ಥಾನ; 17 ಮಂದಿ ಆತ್ಮಹತ್ಯೆ

ಬೆಂಗಳೂರು : ಕರ್ನಾಟಕದಲ್ಲಿ ಅತಿಹೆಚ್ಚು ಫೈನಾನ್ಸ್ ಕಿರುಕುಳ ಪ್ರಕರಣಗಳ ಪಟ್ಟಿಯಲ್ಲಿ 25 ಕೇಸ್ ವರದಿಯಾಗಿರುವ ಉತ್ತರ ಕನ್ನಡ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ.

ಹಾವೇರಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ತಲಾ 12 ಪ್ರಕರಣಗಳು ವರದಿಯಾಗಿದ್ದು, 2ನೇ ಸ್ಥಾನದಲ್ಲಿದೆ. ಗದಗ ಜಿಲ್ಲೆಯಲ್ಲಿ 9 ಪ್ರಕರಣಗಳು ವರದಿಯಾಗಿದ್ದು, ಮೂರನೇ ಸ್ಥಾನದಲ್ಲಿದೆ. ಉಡುಪಿಯಲ್ಲಿ 6 ಪ್ರಕರಣಗಳು, ಮಂಡ್ಯ ಮತ್ತು ಬೆಳಗಾವಿಯಲ್ಲಿ ತಲಾ 5 ಪ್ರಕರಣಗಳು ವರದಿಯಾಗಿದೆ.

ಪೊಲೀಸ್ ದತ್ತಾಂಶದ ಪ್ರಕಾರ, 2023 ಮತ್ತು 2025 ರ ನಡುವೆ, ರಾಜ್ಯದಾದ್ಯಂತ ಒಟ್ಟು 111 ಫೈನಾನ್ಸ್ ಕಿರುಕುಳ ಪ್ರಕರಣಗಳು ವರದಿಯಾಗಿದ್ದು, 272 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಫೈನಾನ್ಸ್ ಕಿರುಕುಳಕ್ಕೆ ಸಂಬಂಧಿಸಿದಂತೆ 32 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಫೈನಾನ್ಸ್ ಕಿರುಕುಳದಿಂದ ಎಷ್ಟು ಆತ್ಮಹತ್ಯೆ:
2023: 8 ಸಾವುಗಳು
2024: 7 ಸಾವುಗಳು
2025 (ಇಲ್ಲಿಯವರೆಗೆ): 17 ಸಾವುಗಳು

ಕಿರುಕುಳದ ಸ್ವರೂಪ
* 50,000 ರೂ. ನಿಂದ 5 ಲಕ್ಷ ರೂ. ವರೆಗೆ ಕಿರು ಸಾಲ ಕೊಟ್ಟು ಬಡ್ಡಿ ವಸೂಲಿ
* ಪಡೆದ ಅಸಲಿಗಿಂತ ಬಡ್ಡಿಯೇ ಜಾಸ್ತಿ ಕಟ್ಟಿದ್ದರೂ ಸಹ ಅಸಲು ಕೊಡಲು ಟಾರ್ಚರ್
* ಬಡ್ಡಿ ಪಾವತಿಸುವುದು ಒಂದು ದಿನ ತಡವಾಡರೂ ಸಿಬ್ಬಂದಿಯಿಂದ ಕಿರುಕುಳ
* ಬಡ್ಡಿ, ಅಸಲು ಪಾವತಿಸದಿದ್ದರೆ ಕಾರು, ಮನೆ, ಬೈಕ್ ಬಲವಂತವಾಗಿ ಜಪ್ತಿ
* ಸಾರ್ವಜನಿಕವಾಗಿ ನಿಂದಿಸುವುದರಿಂದ ಅವಮಾನ ತಾಳಲಾರದೆ ಆತ್ಮಹತ್ಯೆ
* ಪೊಲೀಸರಿಗೆ ದೂರು ಕೊಡುತ್ತೇನೆ ಎಂದರೂ ಭಯಪಡದ ವಸೂಲಿ ಸಿಬ್ಬಂದಿ
* ಫೈನಾನ್ಸ್ ಕಂಪನಿ ವ್ಯವಹಾರದಲ್ಲಿ ಕೆಲ ಪೊಲೀಸರೂ ಭಾಗಿಯಾದ ಆರೋಪ

ಸರ್ಕಾರದ ಸುಗ್ರೀವಾಜ್ಞೆ ಬಳಕ ಪ್ರಕರಣಗಳು
ಅಕ್ರಮ ಫೈನಾನ್ಸ್ ನಿರ್ವಾಹಕರಿಂದ ಕಿರುಕುಳವನ್ನು ತಡೆಯಲು ಕರ್ನಾಟಕ ಸರ್ಕಾರ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಿದ ನಂತರ, ರಾಜ್ಯದಾದ್ಯಂತ ಹಲವಾರು ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು ನಗರ: 1 ಪ್ರಕರಣ
ಬೆಳಗಾವಿ ನಗರ: 1
ತುಮಕೂರು: 4
ಕೋಲಾರ: 1
ರಾಮನಗರ: 1
ಮೈಸೂರು: 1
ಮಂಡ್ಯ: 1
ಕೊಡಗು: 1
ಬಾಗಲಕೋಟೆ: 1
ಚಿತ್ರದುರ್ಗ: 2
ಹಾವೇರಿ: 2
ಶಿವಮೊಗ್ಗ: 1
ದಾವಣಗೆರೆ: 1
ಉತ್ತರ ಕನ್ನಡ: 7
ಉಡುಪಿ: 2
ಕೊಪ್ಪಳ: 1
ವಿಜಯನಗರ: 1

ಸುಗ್ರೀವಾಜ್ಞೆ ನಂತರ ನವೀಕೃತ ಕಾರ್ಯಾಚರಣೆ ಯಡಿಯಲ್ಲಿ ಒಟ್ಟು 69 ಆರೋಪಿಗಳನ್ನು ಬಂಧಿಸಲಾಗಿದೆ. ಇಂತಹ ಪ್ರಕರಣಗಳನ್ನು ತಕ್ಷಣವೇ ವರದಿ ಮಾಡುವಂತೆ ಅಧಿಕಾರಿಗಳು ನಾಗರಿಕರಿಗೆ ಒತ್ತಾಯಿಸಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026