ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏನಂತ ವಾಗ್ದಾಳಿ ನಡೆಸಿದ್ರು ವಿ. ಸೋಮಣ್ಣ .!
ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರ ಸಚಿವ ವಿ.ಸೋಮಣ್ಣಗೆ ತಿರುಗೇಟು ನೀಡಿದ್ದ ಸಿಎಂ ಸಿದ್ದರಾಮಯ್ಯ ಕೆಲಸವಿಲ್ಲದ ಮಂತ್ರಿ ಎಂದು ವ್ಯಂಗ್ಯವಾಡಿದ್ದರು. ಇದೇ ವಿಚಾರವಾಗಿ ವಿ.ಸೋಮಣ್ಣ ಸಿಎಂ ಸಿದ್ದರಾಮಯ್ಯ ಅವರುಗೆ ಸವಾಲು ಹಾಕಿದ್ದಾರೆ.
ದಾವಣ್ಗೆರೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಅಂಕಿ ಅಂಶಗಳನ್ನು ಮುಂದಿಟ್ಟು ಹೇಳಲಿ ಆಗ ಗೊತ್ತಾಗುತ್ತದೆ ನಾನು ಕೆಲಸವಿಲ್ಲದವನಾ? ಅಥವಾ ಸಿಎಂ ಸಿದ್ದರಾಮಯ್ಯ ಕೆಲಸವಿಲ್ಲದವರಾ ಎಂದು.
ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯನವರು ಬಂದು ನಮ್ಮ ಕಚೇರಿಯಲ್ಲಿ 1 ಗಂಟೆ ಇರಲಿ. ನಾನು ಅವರ ಕಚೇರಿಯಲ್ಲಿ ಒಂದು ತಿಂಗಳು ಇರುತ್ತೇನೆ. ಸಿದ್ದರಾಮಯ್ಯನವರು ಇನ್ನೂ ಹಳೆಯ ಕಾಲದಲ್ಲಿದ್ದಾರೆ ಎಂದು ಟೀಕಿಸಿದರು.
ತಾಂತ್ರಿಕ ವ್ಯವಸ್ಥೆ ಬಹಳಷ್ಟು ಮುಂದುವರಿದಿದೆ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ಹಿಂದೆ ಇದ್ದ ಸಿದ್ದರಾಮಯ್ಯ ಈಗ ಇಲ್ಲ. ಆ ಸಿದ್ದರಾಮಯ್ಯ ಈಗ ಎಲ್ಲೋ ಕಳೆದು ಹೋಗಿ ಎಷ್ಟೋ ದಿನ ಆಗಿದೆ. ಈಗಿರುವ ಸಿದ್ದರಾಮಯ್ಯ ನಿಂದನೆ ಮಾಡುವವರು. ಅದು ಆಗಬಾರದು. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಅಂಕಿ-ಅಂಶಗಳನ್ನು ಇಟ್ಟುಕೊಂಡು ಮಾತನಾಡಿ. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ನೀವು ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ. ಸಿಎಂ ಸ್ಥಾನದಿಂದ ಹೋದಮೇಲೆ ಏನುಬೇಕಾದರೂ ಮಾತನಾಡಲಿ. ಆದರೆ ಆ ಹುದ್ದೆಯಲ್ಲಿದ್ದಾಗ ಮಾತನಾಡುವುದು ಸರ್ಯಲ್ಲ. ನಾನು ಕೇಂದ್ರ ಸಚಿವ ಜವಾಬ್ದಾರಿಯುತ ಸ್ಥಾನದಲ್ಲ್ಲಿರುವ ಜನಪ್ರತಿನಿಧಿ. ಇನುಂದೆಯಾದರೂ ಸಿಎಂ ಸಿದ್ದರಾಮಯ್ಯ ಗಾಂಭೀರ್ಯತೆಯಿಂದ ನಡೆದುಕೊಂಡು ಮಾತನಾಡಿದಲಿ ಎಂದು ಕಿಡಿಕಾರಿದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.