ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಹುಡಿ ಹತ್ತದ ಗಾಳಿಯಂತೆ,
ಕಾಡಿಗೆ ಹತ್ತದಾಲಿಯಂತೆ,
ನೆಯ್ ಹತ್ತದ ನಾಲಗೆಯಂತೆ,
ಮಂಗಳ ಮಣ್ಣ ಬೆರಸದಂತೆ,
ಸಿದ್ಧಸೋಮನಾಥಾ,ನಿಮ್ಮ ಶರಣನು ಸಕಲಸುಖಂಗಳ ಸುಖಿಸಿಯೂ ಬೇರಿಪ್ಪನು.
-ಅಮುಗಿದೇವಯ್ಯ