ವಚನ—ಚಂದಿಮರಸ ಅವರ ವಚನ..!
ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಇಂದ್ರಿಯಂಗಳೊಡಗೂಡಿ ಬಹಿರ್ಮುಖನಾಗಿ
ವಿಷಯಂಗಳಲ್ಲಿ ಆಸಕ್ತಿಯುಳ್ಳವನು ಅಂತರ್ಮುಖ ರೂಪನಪ್ಪ,
ಪ್ರತ್ಯಗಾತ್ಮನನೆಂತೂ ಕಾಣಲರಿಯೆನು.
ಮೇರುಗಿರಿಯ ಕಂಡೆಹೆನೆಂದು ತೆಂಕಮುಖನಾಗಿ ನಡೆದು
ಮೇರುಗಿರಿಯ ಕಾಣಲರಿಯನೆಂತಂತೆ,
ಸಕಲ ವಿಷಯಾಸಕ್ತಿಯ ಬಿಟ್ಟು ನಿರ್ವಿಷಯಿಯಾಗಿ
ನಿಜದಲ್ಲಿ ನಿಂದ ನಿಲವು ನೀನೇ,ಸಿಮ್ಮಲಿಗೆಯ ಚೆನ್ನರಾಮಾ.
-ಚಂದಿಮರಸ
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.