ವಚನ: -ಜೋದರ ಮಾಯಣ್ಣ
ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಮುನ್ನ ಪರಸತಿ ಪಾರ್ವತಿಯೆಂದು
ನಡೆಸಿತ್ತು ನುಡಿಸಿತ್ತು ಗುರುವಚನ.
ಬಳಿಕ ಎನ್ನ ಶರಣಸತಿಯೆಂದು
ನಡೆಸಿತ್ತು ನುಡಿಸಿತ್ತು ಗುರುವಚನ.
ಇನ್ನು ಸತಿಯರೆಲ್ಲಾ ಗುರುಸತಿಯರೆಂದು
ನಡೆಸಿತ್ತು ನುಡಿಸಿತ್ತು ಗುರುವಚನ.
ನಡೆದುದು ತಪ್ಪದೆ ನುಡಿದುದು ಹುಸಿಯದೆ
ನಡೆಸಿತ್ತು ನುಡಿಸಿತ್ತು ಗುರುವಚನ.
ಅಚ್ಚಿಗವಿಲ್ಲದೆ ಮಚ್ಚಿದ ಮನವನು
ನಿಶ್ಚಿಂತ ಮಾಡಿತ್ತು ಗುರುವಚನ.
ಶಂಭು ಸೋಮನಾಥಲಿಂಗಸಂಗ ಸುಸಂಗವ ಮಾಡಿತ್ತು ಗುರುವಚನ.
-ಜೋದರ ಮಾಯಣ್ಣ
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.