ಬೆಳಗಾವಿ : ತಾಲೂಕಿನ ಖನಗಾವಿ ಕೆ. ಎಚ್ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಚನಗಳ ನಡೆ ಶಾಲೆಗಳ ಕಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಮೌಲ್ಯ ಶಿಕ್ಷಣದಡಿ ವಿದ್ಯಾರ್ಥಿಗಳಿಗೆ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಾಗತಿಕ ಲಿಂಗಾಯತ ಮಹಾಸಭಾದ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಎಂ ಬೂದಿಹಾಳ ಅವರು ಮಾತನಾಡಿ ವ್ಯಕ್ತಿತ್ವ ವಿಕಾಸಕ್ಕೆ ವಚನಗಳು ದಾರಿದೀಪವಾಗಿವೆ ಎಂದು ಹೇಳಿದರು. ನಿರ್ಣಾಯಕರಾಗಿ ಶ್ರೀ ಎಫ್ ಆರ್ ಪಾಟೀಲ ಹಾಗೂ ಶ್ರೀ ಪ್ರಭಾಕರ ವನಹಳ್ಳಿ ಕಾರ್ಯನಿರ್ವಹಿಸಿದರು. ಮುಖ್ಯ ಶಿಕ್ಷಕರಾದ ಶ್ರೀಮತಿ ವಿಜಯಕುಮಾರಿ, ಶಿಕ್ಷಕಿಯರಾದ ಶ್ರೀಮತಿ ಹೊಸಮನಿ, ಶ್ರೀಮತಿ ಶೈಲಾ ಲಿಂಬೆನ್ನವರ ಹಾಗೂ ಶ್ರೀ ಅರಳಿಕಟ್ಟಿ ಉಪಸ್ಥಿತರಿದ್ದರು.