ಬೆಳಗಾವಿ :
ನಗರದ ಹಿಂದವಾಡಿ ಪ್ರೇರಣಾ ಕಾಲೇಜಿನಲ್ಲಿ ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ದಿನಾಂಕ 28 ಅಕ್ಟೋಬರ್ 2023 ರಂದು ವಿದ್ಯಾರ್ಥಿಗಳ ಜೊತೆಗೆ ಆಚರಿಸಲಾಯಿತು.
ಪ್ರಾಚಾರ್ಯ ಕಿರಣ ಪಾಟೀಲ ಮಾತನಾಡುತ್ತ ಆರಂಭಿಕ ವರ್ಷಗಳಲ್ಲಿ ಡಕಾಯಿತನಾದ ರತ್ನಾಕರ , ನಾರದ ಮುನಿಗಳನ್ನು ಭೇಟಿಯಾದ ನಂತರ ಅವನ ತಪಸ್ಸು ಯಶಸ್ವಿಯಾಗಿ ವಾಲ್ಮೀಕಿ ಎಂಬ ಹೆಸರಿನಲ್ಲಿ ಪ್ರಸಿದ್ಧನಾದನು. ಸಂಸ್ಕತದ ಮೊದಲ ಕವಿ ಎಂಬ ಕಾರಣಕ್ಕೆ ಅವರನ್ನು ಆದಿಕವಿ ಎಂದು ಗೌರವಿಸಲಾಯಿತು. ಇಂಥ ಮಹರ್ಷಿ ವಾಲ್ಮೀಕಿಯ ರಾಮಾಯಣದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮಹಾವಿದ್ಯಾಲಯದ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.