ಬೆಂಗಳೂರು : ವಾಣಿ ವಿಲಾಸ ಆಸ್ಪತ್ರೆ ವೈದ್ಯರದಿಂದ 57 ದಿನದ ಹೆಣ್ಣು ಮಗುವಿನ ಕಾಲು ಬೆರಳುಗಳೇ ಕಟ್ ಆಗಿವೆ. ಐ ವಿ ಲೈನ್ ಹಾಕುವಲ್ಲಿ ಎಡವಟ್ಟು ಆಗಿದೆ ಎಂದು ತಂದೆ ಅವರ ಆರೋಪ ಮಾಡಿದ್ದಾರೆ ಆಸ್ಪತ್ರೆ ವೈದ್ಯರ ವಿರುದ್ಧ ಮಗುವಿನ ತಂದೆ ಅಮರನಾಥ ಆರೋಪಿಸಿದ್ದು ಕಾಲು ನೀಲಿ ಆಗುವಾಗಲೇ ಹೇಳಿದರು ಕೂಡ ಕೇಳದೆ ನಿರ್ಲಕ್ಷ ತೋರಿದ್ದಾರೆ ಆಸ್ಪತ್ರೆ ಎಡವಟ್ಟು ಮಾಡಿದೆ.
ಕಾಲು ನಿಲಿಯಾಗುತ್ತಿದ್ದರು ಹೇಳಿದರು ಕೂಡ ವೈದ್ಯರು ನಿರ್ಲಕ್ಷ ತೋರಿದರು ಚಿಕಿತ್ಸೆ ಕೊಡೋದು ಬಿಟ್ಟ ಮೊಬೈಲ್ ನಲ್ಲಿ ನೋಡುತ್ತಾ ಕುಳಿತಿದ್ದರು ನಮಗೆ ಗೊತ್ತಿಲ್ಲ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ನಮ್ಮ ಮೇಲೆ ರೋಪ್ ಹಾಕಿದರು ಎಂದು ಆರೋಪಿಸಿದ್ದಾರೆ. ಇನ್ನು ಪೋಷಕರ ಆರೋಪಕ್ಕೆ ವೈದ್ಯಕೀಯ ಅಧೀಕ್ಷಕರಾದ ಡಾಕ್ಟರ್ ಸವಿತಾ ಪ್ರತಿಕ್ರಿಯೆ ನೀಡಿದ್ದು ವೈದ್ಯರ ನಿರ್ಲಕ್ಷ ಆಗಿಲ್ಲ ವೈದ್ಯರ ಕಡೆಯಿಂದ ಯಾವುದೇ ಸಮಸ್ಯೆ ಆಗಿಲ್ಲ ಮಗುವಿಗೆ ಸೆಪ್ಟಿಸಿಮಿಯ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಆಗಿತ್ತು. ವೈದ್ಯರು ಸೂಕ್ತ ರೀತಿಯ ಚಿಕಿತ್ಸೆ ಕೊಟ್ಟಿದ್ದಾರೆ ಆದರೆ ಪೋಷಕರು ನಿರ್ಲಕ್ಷ ಅಂತ ಅಂದುಕೊಂಡಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.