LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

ಸುಬ್ರಹ್ಮಣ್ಯ: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ ನ.27ರಿಂದ ಡಿ.12ರ ತನಕ ನೆರವೇರಲಿದೆ. ಜಾತ್ರೋತ್ಸವದ ನಿಮಿತ್ತ ಕ್ಷೇತ್ರದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪ ಸಂಸ್ಕಾರವು ನ.25ರಿಂದ ಡಿ.12ರ ತನಕ ನೆರವೇರುವುದಿಲ್ಲ. ಆದರೆ ಇತರ ಸೇವೆಗಳು ಎಂದಿನಂತೆ ನೆರವೇರುತ್ತದೆ.

ಲಕ್ಷದೀಪೋತ್ಸವ, ಚೌತಿ, ಪಂಚಮಿ ಮತ್ತು ಷಷ್ಠಿ ದಿನ ಕೆಲವು ಸೇವೆಗಳು ನೆರವೇರುವುದಿಲ್ಲ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.

ಲಕ್ಷದೀಪೋತ್ಸವ (ನ.30), ಚೌತಿ (ಡಿ.5), ಪಂಚಮಿ (ಡಿ.6) ದಿನದಂದು ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ಚಂಪಾಷಷ್ಠಿ (ಡಿ.7) ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಚಂಪಾಷಷ್ಠಿ ದಿನ ಆಶ್ಲೇಷಾ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ಇರುವುದಿಲ್ಲ. ನ.30, ಡಿ.5, ಡಿ.6, ಡಿ.7 ಮತ್ತು ಡಿ.12ರಂದು ಪಂಚಾಮೃತ ಮಹಾಭಿಷೇಕ ಸೇವೆ ನಡೆಯುವುದಿಲ್ಲ. ನ.27ರಿಂದ ಡಿ.12ರ ತನಕ ಸಾಯಂಕಾಲದ ಆಶ್ಲೇಷಾ ಬಲಿ ಸೇವೆ ನೆರವೇರುವುದಿಲ್ಲ.

ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ನ.26ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಪವಿತ್ರ ಕಾರ್ಯದ ಕಾರಣ ಭಕ್ತಾದಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯ ತನಕ ಶ್ರೀ ದೇವರ ದರುಶನ ಹಾಗೂ ಸೇವೆಗಳನ್ನು ನೆರವೇರಿಸಲು ಅವಕಾಶ ಇರುವುದಿಲ್ಲ. 2 ಗಂಟೆಯ ಬಳಿಕ ಶ್ರೀ ದೇವರ ದರ್ಶನಕ್ಕೆ ಹಾಗೂ ಆಯ್ದ ಸೇವೆಗಳನ್ನು ನೆರವೇರಿಸಲು ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ರಾಜ್ಯಾದ್ಯಂತ ಮೂರು ದಿನ ಮತ್ತೆ ಮಳೆಯ ಅಬ್ಬರ.!ದಿನದ ಮಂಡಕ್ಕಿ ಒಗ್ಗರಣೆ- ಮಿರ್ಚಿ 27-07-2025.!ನಿಮ್ಮ ಮನೆ ಬಾಗಿಲಲ್ಲಿ ನಿಂಬೆ ಇಡುವುದೇಕೆ ಅಗತ್ಯ? ಉತ್ತರ ಇಲ್ಲಿ ಇದೆ..!ವಚನ: -ಬೊಂತಾದೇವಿ .!ಹೃದಯಾಘಾತಕ್ಕೂ ಕೊರೋನಾ ಲಸಿಕೆಗೂ ನಂಟಿಲ್ಲ: ಅಧ್ಯಯನಉಡುಪಿ: ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ- ಮೂರ್ಛೆ ಹೋಗಿ ಸಿಕ್ಕಿಬಿದ್ದ ಕಳ್ಳರುಜೈಲಿಂದ ತಪ್ಪಿಸಿಕೊಂಡು ಬಾವಿಯಲ್ಲಿ ಅಡಗಿದ್ದ ಅಪರಾಧಿ ಕೆಲವೇ ಗಂಟೆಗಳಲ್ಲಿ ಸೆರೆ- ನಾಲ್ವರು ಅಧಿಕಾರಿಗಳು ಸಸ್ಪೆಂಡ್ಆಲಿಯಾ ಕಶ್ಯಪ್ ಸುಂದರ ಕ್ಷಣದ ಬಿಕಿನಿ ಲುಕ್ ಗೆ ನೆಟ್ಟಿಗರು ಫುಲ್ ಫಿದಾಧರ್ಮಸ್ಥಳದಲ್ಲಿ ಶವ ಹೂತಿಟ್ಟ ಕೇಸ್ ತನಿಖೆ ಚುರುಕು : SIT ಎದುರು ವಿಚಾರಣೆಗೆ ಹಾಜರಾದ ದೂರುದಾರ.!ನಿವೃತ್ತಿ ಬಳಿಕ ಸರ್ಕಾರದ ಯಾವುದೇ ಹುದ್ದೆ ಒಪ್ಪಿಕೊಳ್ಳುವುದಿಲ್ಲ ಎಂದ ಸಿಜೆಐ ಬಿ.ಆರ್. ಗವಾಯಿ