LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

‘ಒಂದು ದೇಶ ಒಂದು ಚುನಾವಣೆ'ಯಿಂದ ರಾಷ್ಟ್ರಾಭಿವೃದ್ಧಿಗೆ ನೆರವು'- ವೆಂಕಯ್ಯ ನಾಯ್ಡು

ಬೆಂಗಳೂರು : ಭಾರತದಾದ್ಯಂತ ಒಂದೇ ಹಂತದಲ್ಲಿ ಚುನಾವಣೆ ನಡೆದರೆ ಹಣಕಾಸಿನ ವೆಚ್ಚ ಕಡಿಮೆಯಾಗಲಿದೆ. ಇದು ರಾಷ್ಟ್ರದ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಿಳಿಸಿದ್ದಾರೆ.

ನಗರದ ಎಫ್‍ಕೆಸಿಸಿಐ ಸಭಾಂಗಣದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಶುಕ್ರವಾರ ಆಯೋಜಿಸಿದ್ದ ‘ಒಂದು ದೇಶ ಒಂದು ಚುನಾವಣೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದಿನ ಮಾನ್ಯ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ಅವರು ನೀಡಿದ ವರದಿಯ ಬಳಿಕ ಒಂದೇ ಚುನಾವಣೆಯ ವಿಚಾರ ಹೆಚ್ಚು ಚರ್ಚೆಗೆ ಒಳಪಟ್ಟಿದೆ ಎಂದು ನುಡಿದರು.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ನಡೆದು, ಇದಾದ ಬಳಿಕ ಸ್ಥಳೀಯ ಸಂಸ್ಥೆಯ ಚುನಾವಣೆಗಳೂ ನಡೆದರೆ ಚುನಾವಣೆಗೆ ಆಗುವ ಹಣಕಾಸಿನ ಖರ್ಚು ಕಡಿಮೆಯಾಗಲಿದೆ. ಇದರಿಂದ ಅದೇ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಸಾಧ್ಯವಿದೆ. ಇದರಿಂದ ಅಭಿವೃದ್ಧಿಗೆ ಹೆಚ್ಚಿನ ಹಣ ತೊಡಗಿಸಬಹುದು ಎಂದು ವಿಶ್ಲೇಷಿಸಿದರು.

‘ಒಂದು ದೇಶ ಒಂದು ಚುನಾವಣೆ' ಪರಿಕಲ್ಪನೆ ನಮ್ಮ ದೇಶಕ್ಕೆ ಹೊಸದೇನೂ ಅಲ್ಲ; 1952, 1957, 1962, 1967ರಲ್ಲಿ ಏಕಕಾಲದಲ್ಲಿ ಚುನಾವಣೆಗಳು ನಡೆದಿದ್ದವು ಎಂದು ಅವರು ತಿಳಿಸಿದರು.

ಆದ್ದರಿಂದ, ಇದರ ವಿರೋಧ ಸರಿಯಲ್ಲ ಎಂದರು.ದೇಶದಲ್ಲಿ ನಿರಂತರವಾಗಿ ಚುನಾವಣೆ ನಡೆಯುತ್ತಿದ್ದರೆ, ಎಲ್ಲರೂ ಚುನಾವಣೆ ಕೆಲಸದಲ್ಲೇ ನಿರತರಾಗಿರುವ ಸ್ಥಿತಿ ಇರುತ್ತದೆ. ಇದರಿಂದ ದೇಶದ ಪ್ರಗತಿಗೆ ಹಿನ್ನಡೆಯಾಗುತ್ತದೆ. ಅದಷ್ಟು ಬೇಗ ‘ಒಂದು ದೇಶ ಒಂದು ಚುನಾವಣೆ' ವ್ಯವಸ್ಥೆ ಜಾರಿಯಾಗಬೇಕು ಎಂದು ವೆಂಕಯ್ಯ ನಾಯ್ಡು ಅವರು ತಿಳಿಸಿದರು.

‘ಒಂದು ದೇಶ ಒಂದು ಚುನಾವಣೆ' ಕುರಿತು ಈಗಾಗಲೇ ನೀತಿ ಆಯೋಗ, ಕಾನೂನು ಆಯೋಗ, ಚುನಾವಣಾ ಆಯೋಗಗಳು ಶಿಫಾರಸು ಮಾಡಿವೆ. ಈ ಬಗ್ಗೆ ತ್ವರಿತವಾಗಿ ಜನಾಭಿಪ್ರಾಯ ಸಂಗ್ರಹಿಸಿ, ಚರ್ಚೆಗೊಳಪಡಿಸಿ ನಂತರ ಜಾರಿಯಾಗಲಿ ಎಂದು ಆಶಿಸಿದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿದ್ಯಾರ್ಥಿನಿಯರಿಗಾಗಿ ದೀಪಿಕಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನನಗರದೇವತೆ ಶ್ರೀ ದುರ್ಗಾಂಭಿಕ ದೇವಿ ಜಾತ್ರೆ - ಪ್ರಾಣಿಬಲಿ ನಿಷೇಧ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿಮದುವೆಯಾಗಿ ವರ್ಷ ಗಟ್ಟಲೆ ಸಂತಾನವಿಲ್ಲದೆ ನರಳುತ್ತಿದ್ದರೆ ಈ ರೀತಿಯಾದ ಶ್ರೀಕೃಷ್ಣನ ಮೂರ್ತಿ ಇಟ್ಟು ಪೂಜಿಸಿ ನೋಡಿ ಸಂತಾನ ಪ್ರಾಪ್ತಿ ಗ್ಯಾರಂಟಿ?ಇಂದಿನ ವಚನ: - --ಸಿದ್ಧರಾಮೇಶ್ವರ   ಅವರ ವಚನ..!ಟಾಕ್ಸಿಕ್ ಸಿನಿಮಾದ ಫ್ಲೆಕ್ಸ್ ಅಳವಡಿಕೆ ನಟ ಯಶ್ ವಿರುದ್ಧ FIR.!ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ 26ನೇ ವರ್ಷದ ದೀಪೋತ್ಸವದಾವಣಗೆರೆ : ಮೆಕ್ಕೆಜೋಳ ನೋಂದಣಿ ಮತ್ತು ಖರೀದಿ ಕೇಂದ್ರ ಆರಂಭಸುಬ್ರಹ್ಮಣ್ಯ ಸ್ವಾಮಿಯ ವೀರಗಾಥೆ! ದುಷ್ಟ ತಾರಕಾಸುರನನ್ನು ವೀರ ಶೂರ ಕಾರ್ತಿಕೇಯನು ಸಂಹರಿಸಿದ ಕಥೆ!ಇಂದಿನ ವಚನ: - -ಅಕ್ಕಮಹಾದೇವಿ  ಅವರ ವಚನ..!ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಹೆಣ್ಣಿನ ವೇಷ ಧರಿಸಿ ಓಡಾಡುತ್ತಿದ್ದ ಆರೋಪಿ ಬಂಧನ