LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಿರಿಯಾನಿ, ಚಿಕನ್ ಫ್ರೈಗೆ ಬೇಡಿಕೆಯಿಟ್ಟ ಮಗುವಿನ ವಿಡಿಯೋ ವೈರಲ್; ಅಂಗನವಾಡಿ ಮೆನು ಬದಲಾವಣೆ ಸಾಧ್ಯತೆ

ತಿರುವನಂತಪುರಂ : ಅಂಗನವಾಡಿಯಲ್ಲಿ ಉಪ್ಪಿಟ್ಟಿನ ಬದಲಿಗೆ ಬಿರಿಯಾನಿ ಮತ್ತು ಚಿಕನ್ ಫ್ರೈ ನೀಡುವಂತೆ ಮಗುವೊಂದು ಮನವಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೇರಳದ ಮಕ್ಕಳ ಆರೈಕೆ ಕೇಂದ್ರಗಳಲ್ಲಿ ಸರಕಾರವು ಮೆನುವಿನಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ವೈರಲ್ ಆಗಿರುವ ವೀಡಿಯೊದಲ್ಲಿ, "ನನಗೆ ಉಪ್ಮಾ ಬದಲಿಗೆ ಅಂಗನವಾಡಿಯಲ್ಲಿ ಬಿರಿಯಾನಿ ಮತ್ತು ಪೊರಿಚ ಕೋಳಿ' (ಚಿಕನ್ ಫ್ರೈ) ಬೇಕು" ಎಂದು ಮಗು ತನ್ನ ತಾಯಿಯನ್ನ ಮುಗ್ಧವಾಗಿ ಕೇಳುತ್ತಿದೆ. ಮನೆಯಲ್ಲಿ ಬಿರಿಯಾನಿ ತಿನ್ನುವಾಗ ಮಗು ವಿನಂತಿಸಿದಾಗ ವೀಡಿಯೊವನ್ನು ಚಿತ್ರೀಕರಿಸಿದ ತಾಯಿ, ಬಳಿಕ ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋವನ್ನು ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅಂಗನವಾಡಿಯ ಮೆನುವನ್ನು ಪರಿಷ್ಕರಿಸಲಾಗುವುದು. ಮಗು ಮುಗ್ಧವಾಗಿ ವಿನಂತಿಸಿದೆ. ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಶಂಕು, ಅವರ ತಾಯಿ ಮತ್ತು ಅಂಗನವಾಡಿ ಸಿಬ್ಬಂದಿಗೆ ಶುಭಾಶಯ ತಿಳಿಸಿದ ಸಚಿವೆ ವೀಣಾ ಜಾರ್ಜ್, ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಖಚಿತಪಡಿಸಿಕೊಳ್ಳಲು ಅಂಗನವಾಡಿಗಳ ಮೂಲಕ ವಿವಿಧ ರೀತಿಯ ಆಹಾರವನ್ನು ಒದಗಿಸಲಾಗುತ್ತದೆ. ಶಂಕುವಿನ ಸಲಹೆಯನ್ನು ಗಣನೆಗೆ ತೆಗೆದುಕೊಂಡು ಮೆನುವನ್ನು ಪರಿಶೀಲಿಸಲಾಗುವುದು ಎಂದಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಸರ್ಕಾರವು ಅಂಗನವಾಡಿಗಳ ಮೂಲಕ ಮಕ್ಕಳಿಗೆ ಮೊಟ್ಟೆ ಮತ್ತು ಹಾಲು ಒದಗಿಸುವ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಸ್ಥಳೀಯ ಸಂಸ್ಥೆಗಳು ಅಂಗನವಾಡಿಗಳಲ್ಲಿ ವಿವಿಧ ರೀತಿಯ ಆಹಾರಗಳನ್ನು ಒದಗಿಸುತ್ತವೆ ಅವರು ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಸಿ ಎಸ್ ಪಿ, ಟಿಎಸ್ ಪಿ ಹಣ: ಇಬ್ಬರ ಸಚಿವರ ವಾಕ್ ಸಮರ.!ಮದುವೆಗೆ ತೆರಳುತ್ತಿದ್ದ ವಾಹನ ಬಿಸಿಲೆ ಘಾಟ್ ತಿರುವಿನಲ್ಲಿ ಪಲ್ಟಿ: 20ಕ್ಕೂ ಅಧಿಕ ಮಂದಿಗೆ ಗಾಯನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲುಸಲ್ಮಾನ್ ಖಾನ್ ವಿರುದ್ಧದ ‘ಭಯೋತ್ಪಾದಕ’ ವದಂತಿ ಸುಳ್ಳು - ಪಾಕಿಸ್ತಾನ ಸರ್ಕಾರದ ಅಧಿಕೃತ ಸ್ಪಷ್ಟನೆ!ಆಭರಣ ಪ್ರಿಯರು ಫುಲ್​ ಖುಷ್… ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ‘ಮೊಂಥಾ’ ಚಂಡಮಾರುತ - ಆಂಧ್ರಪ್ರದೇಶದಲ್ಲಿ ಇಬ್ಬರು ಸಾವು‘ಭಾರತದಲ್ಲಿ ಸ್ವತಂತ್ರವಾಗಿ ಧೈರ್ಯದಿಂದ ಬದುಕುತ್ತಿದ್ದೇನೆ., ಬಾಂಗ್ಲಾದೇಶಕ್ಕೆ ಬರಲ್ಲ” – ಶೇಖ್ ಹಸೀನಾ7565 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಸಲ್ಲಿಸಿ ಅರ್ಜಿಐಎಎಸ್‌ ತಹಸಿನ್ ಬಾನು ದವಡಿ ಸ್ಪೂರ್ತಿದಾಯಕ ಕಥನಮಾಟಮಂತ್ರದ ಅಪಾಯ ಹೆಚ್ಚು! ತಪ್ಪದೇ ಪಾಲಿಸಬೇಕಾದ 7 ನಿಯಮಗಳಿವು