ಬಾಗಲಕೋಟೆ :
ಮೊಹರಂ ಕೊನೆ ದಿನ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಕೇಸರಿ ವಸ್ತ್ರ ಹಿಡಿದು ಅಜ್ಜಲಾಲಸಾಬ್ ಎನ್ನುವರು ರಾಜಕೀಯ ಭವಿಷ್ಯ ನುಡಿದಿದ್ದಾರೆ. ಇದೀಗ ಭಾರೀ ವೈರಲ್ ಆಗಿದೆ.
ಕೇಸರಿವಸ್ತ್ರ ಹಿಡಿದು ಇದರ ಸಲುವಾಗಿ ಬಹಳ ಬಡಿದಾಡುತ್ತಾರೆ. ಇದರ ಸಲುವಾಗಿ ಹೆಣಗಳು ಬೀಳುತ್ತಿವೆ. ಆದರೆ ಬರೆದು ಇಟ್ಟುಕೊಳ್ಳಿ, ಖುರ್ಚಿ ಮಾತ್ರ ಅದ ಗಟ್ಟಿ ಪಾ ಎಂದು ಕೇಸರಿ ವಸ್ತ್ರ ತೂರಿದ್ದಾರೆ. ಇದರೊಂದಿಗೆ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತ ಎಂದು ಜನರು ವಿಶ್ಲೇಷಣೆ ಮಾಡಿದ್ದಾರೆ. ಕೇಸರಿ ವಸ್ತ್ರ ಹಿಡಿದು ಹೆಬ್ಬಳ್ಳಿ ಗ್ರಾಮದ ಪ್ರಸಿದ್ದ ಲಾಲಸಾಬವಲಿ ದರ್ಗಾದಲ್ಲಿ ಭವಿಷ್ಯ ನುಡಿದಿರುವ ಲಾಲಸಾಬ್ ಅಜ್ಜನ ಭವಿಷ್ಯವಾಣಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.