LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಾಕಿಂಗ್‌ನಿಂದ ಸಿಗುವ ಆರೊಗ್ಯ ಪ್ರಯೋಜನ...!

ರಕ್ತದ ಸಕ್ಕರೆ ನಿಯಂತ್ರಣದಲ್ಲಿಡಲು, ತೂಕ ನಷ್ಟಕ್ಕೆ , ಮಧುಮೇಹ ತಡೆಗೆ ತಜ್ಞರು ವಾಕಿಂಗ್ ಮಾಡಿ ಅಂತಾ ಹೇಳ್ತಾರೆ. ಇಡೀ ದೇಹವನ್ನು ಆರೋಗ್ಯವಾಗಿಡೋಕೆ ವಾಕಿಂಗ್ ತುಂಬಾ ಮುಖ್ಯ. ಇದು ತೂಕ ಇಳಿಕೆಗೆ ಮತ್ತು ನಿಯಂತ್ರಣದಲ್ಲಿಡೋಕೆ ಸಹಾಯ ಮಾಡುತ್ತದೆ. ವಾಕಿಂಗ್ ಮಾಡಿದ್ರೆ ಒಂದಲ್ಲ ಸಾಕಷ್ಟು ಆರೋಗ್ಯ ಪ್ರಯೋಜನ ಸಿಗುತ್ತೆ. ಹೃದಯದ ಆರೋಗ್ಯ ಕಾಪಾಡಬಹುದು. ವಾಕಿಂಗ್ ದೈಹಿಕ ಚಟುವಟಿಕೆ ಇಡೀ ದೇಹ ಮತ್ತು ಮನಸ್ಸನ್ನು ತಾಜಾ ಆಗಿರಿಸುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮಾಡಿದ್ರೆ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಬೇಗ ಬರ್ನ್ ಮಾಡೋಕೆ ಇದು ಸಹಾಯ ಮಾಡುತ್ತೆ ಅಂತಾ ಹೇಳಿದೆ.

ಜಿ ಎ ವಾಲಿಸ್ ಮತ್ತು ಜೇವಿಯರ್ ಟಿ ಗೊನ್ಜಾಲೆಜ್ ಅವರ ಸಂಶೋಧನಾ ವರದಿಯು 2018 ರಲ್ಲಿ ಪಬ್‌ಮೆಡ್ ಸೆಂಟ್ರಲ್‌ ನಲ್ಲಿ ಪ್ರಕಟವಾಗಿದೆ. ಅದರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮಾಡಿದ್ರೆ ಕಾರ್ಬೋಹೈಡ್ರೇಟ್‌ ಗಳು ತಕ್ಷಣವೇ ಗ್ಲೂಕೋಸ್‌ ಆಗಿ ವಿಭಜನೆ ಆಗುತ್ತವೆ.

ಫಿಟ್ನೆಸ್ ವಿಷಯಕ್ಕೆ ಬಂದರೆ ಅಥವಾ ಆರೋಗ್ಯದ ವಿಷಯಕ್ಕೆ ಬಂದರೆ ವಾಕಿಂಗ್ ಅತಿಮುಖ್ಯವಾದುದು. ಪ್ರತಿನಿತ್ಯ ನಾವು ಮಾಡುವ ೩೦ ನಿಮಿಷಗಳ ವಾಕಿಂಗ್ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುವುದಲ್ಲದೇ, ಆರೊಗ್ಯಕರವಾದ ಜೀವನ ಸಾಗಿಸಲು ಅನುವು ಮಾಡಿಕೊಡುತ್ತದೆ.

ಊಟ ಮಾಡಿದ ತಕ್ಷಣ ಮಲಗುವುದು, ಬೆಳಗ್ಗೆ 8  ಗಂಟೆಯವರೆಗೆ ಮಲಗುವುದು, ಮಧ್ಯಾಹ್ನದ ಸಮಯದಲ್ಲಿ ಮಲಗುವುದು ಇವೆಲ್ಲಾ ಸೋಮಾರಿತನದ ಸಂಕೇತ. ಒತ್ತಡದ ಜೀವನ ನಮ್ಮ ಮೇಲೆ ಇರುವುದರಿಂದ ಸಮಯ ಇಲ್ಲದೇ ಇರಬಹುದು. ಆದರೆ ಮೊಬೈಲ್ ಅಥವಾ ಟಿವಿಗೆ ನೀಡುವ ಸಮಯದಲ್ಲಿ 30  ನಿಮಿಷ ನಿಮ್ಮ ಆರೋಗ್ಯಕ್ಕೂ ನೀಡಿ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
04-11-2025 ದಿನದ ಮಂಡಕ್ಕಿ ಒಗ್ಗರಣೆ-ಮಿರ್ಚಿವಚನ.: -ಗುಪ್ತ ಮಂಚಣ್ಣಕೋಟ್ಯಾಧಿಪತಿ ದಿನೇಶ್ 555 ಬೀಡಿ ಮಾಲೀಕನ ಗುಂಡಿಕ್ಕಿ ಹತ್ಯೆ ಮಾಡಿದ ಸ್ವಂತ ಮಗತೆಲಂಗಾಣದಲ್ಲಿ ಭೀಕರ ಅಪಘಾತ : ಬಸ್ಸಿನೊಳಕ್ಕೆ ಬಿದ್ದ ಜಲ್ಲಿ ರಾಶಿಯಲ್ಲಿ ಸಿಲುಕಿ 20ಕ್ಕೂ ಅಧಿಕ ಮಂದಿ ಸಾವುವೈದ್ಯ ತನ್ನ ಗೆಳತಿಗೆ ಕಳುಹಿಸಿದ್ದ ಒಂದೇ ಒಂದು ಡಿಜಿಟಲ್ ಸಂದೇಶ, ಇಡೀ ಕೊಲೆಯ ರಹಸ್ಯ ಬಯಲು!ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾ ಗೌಡ – ದೊಡ್ಮನೆಯಿಂದ ಹೊರಕ್ಕೆ ಬರ್ತಾರಾ ರಿಷಾ?ಕಳಪೆ ಮಟ್ಟಕ್ಕೆ ಕುಸಿದ ಗಾಳಿಗುಣಮಟ್ಟ; ಶ್ವಾಸಕೋಶ ಸಮಸ್ಯೆ ಇರೋರು ದೆಹಲಿ ಬಿಟ್ಟು ಹೋಗುವಂತೆ ಎಚ್ಚರಿಕೆಟ್ರಾಫಿಕ್ ಪೊಲೀಸರಿಂದ ದಂಡ ತಪ್ಪಿಸಲು ಹೆಲ್ಮೆಟ್ ಬದಲು ಬಾಣಲೆ ಧರಿಸಿ ಸವಾರಿಇಬ್ಬರನ್ನು ಬಲಿ ಪಡೆದ ಕಾಡಾನೆ ಕೊನೆಗೂ ಸೆರೆಕೆ- ಸೆಟ್ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಕಿವಿಯೋಲೆ, ಮೂಗುತಿ ಬಿಚ್ಚಿಸಿದ ಸಿಬ್ಬಂದಿ