Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Sports News

ಸಾನಿಯಾ ಮಿರ್ಜಾ-ಶಮಿ ಏನಿದು ಮದುವೆ ಗುಸುಗುಸು ?

ಹೈದ್ರಾಬಾದ್ : ಸಾನಿಯಾ ಮಿರ್ಜಾ ಹಾಗೂ ಮೊಹಮ್ಮದ್ ಶಮಿ ಭಾರತೀಯ ಕ್ರೀಡಾಲೋಕ ಕಳೆದೆರಡು ದಶಕಗಳಿಂದ ಕಂಡಿರುವಂತಹ ಯಶಸ್ವಿ ಸ್ಪೋಟ್ಸ್‌ ಐಕಾನ್‌ಗಳು.

ಸಾನಿಯಾ ಭಾರತದ ಮಹಿಳಾ ಟೆನ್ನಿಸ್ ಲೋಕದ ಅದ್ಭುತ ತಾರೆಯಾಗಿದ್ದರೆ ಇತ್ತ ಮೊಹಮ್ಮದ್ ಶಮಿ ಕ್ರಿಕೆಟ್ ಚಾಂಪಿಯನ್ ಭಾರತದ ಫಾಸ್ಟ್ ಬೌಲರ್ ತಮ್ಮ ಬೌಲಿಂಗ್ ಕೌಶಲ್ಯದಿಂದ 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಫೈನಲ್‌ಗೇರಿಸಿದವರು. ಆದರೆ ಇವರಿಬ್ಬರು ಕ್ರೀಡಾ ಜೀವನದಲ್ಲಿ ಯಶಸ್ವಿಯಾಗಿದ್ದರೂ ಸಾಂಸಾರಿಕ ಜೀವನದಲ್ಲಿ ಮೋಸಕ್ಕೊಳಗಾದವರು, ಜೊತೆಗೆ ವಿಚ್ಛೇದನವನ್ನೂ ಪಡೆದವರು. ಒಂದೇ ಸಮುದಾಯಕ್ಕೆ ಸೇರಿದವರು. ಹೀಗಾಗಿ ಕ್ರೀಡಾಭಿಮಾನಿಗಳು ಇವರಿಬ್ಬರು ಮದುವೆಯಾಗುತ್ತಾರೆ. ಇವರಿಬ್ಬರೂ ಮದುವೆಯಾಗಬೇಕು ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಮೀಮ್ಸ್ ಪೋಸ್ಟ್ ಮಾಡುತ್ತಿದ್ದರು. ಅಲ್ಲದೇ ಇವರಿಬ್ಬರು ಮದ್ವೆಯಾಗುತ್ತಾರೆ ಎಂಬ ಊಹಾಪೋಹಾವೂ ಹಬ್ಬಿತ್ತು.

ಸಾನಿಯಾ ಮಿರ್ಜಾ ಅವರು 2010ರಲ್ಲಿ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಅವರನ್ನು ಹೈದರಬಾದ್‌ನಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಮದ್ವೆಯಾಗಿದ್ದರೂ ಈ ವರ್ಷದ ಆರಂಭದಲ್ಲಿ ಇಬ್ಬರು ವಿಚ್ಛೇದನ ಪಡೆಯುವ ಮೂಲಕ ತಮ್ಮ 14 ವರ್ಷಗಳ ದಾಂಪತ್ಯಕ್ಕೆ ತೆರೆ ಎಳೆದಿದ್ದರು. ಪಾಕಿಸ್ತಾನಿ ಟಿವಿ ತಾರೆ ಸಾನಾ ಜಾವೇದ್ ಅವರನ್ನು ಶೋಯೇಬ್ ಮದುವೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವಿವಾಹದ ಫೋಟೋಗಳನ್ನು ಪೋಸ್ಟ್ ಮಾಡಿದ ನಂತರ ವಿಚ್ಛೇದನವಾಗಿರುವುದು ಬೆಳಕಿಗೆ ಬಂದಿತ್ತು. ಇತ್ತ ಮೊಹಮ್ಮದ್ ಶಮಿ ಕೂಡ ತನ್ನ ಪತ್ನಿ ಹಸೀನಾ ಜಹಾನ್‌ರಿಂದ ವಿಚ್ಚೇದನ ಪಡೆದಿದ್ದಾರೆ. ಇದೇ ಕಾರಣಕ್ಕೆ ಇವರಿಬ್ಬರು ಮದ್ವೆಯಾದರೆ ಚೆನ್ನಾಗಿರುತ್ತದೆ ಎಂಬ ಊಹಾಪೋಹಾಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ.

ಆದರೆ, ಜನರ ಕುತೂಹಲ ಹಾಗೂ ಊಹಾಪೋಹಾಕ್ಕೆ ಈಗ ಸಾನಿಯಾ ಮಿರ್ಜಾ ಅವರ ತಂದೆ ಇಮ್ರಾನ್ ಮಿರ್ಜಾ ಅವರು ಪ್ರತಿಕ್ರಿಯಿಸಿದ್ದು, ಅವರು ಏನು ಹೇಳಿದ್ದಾರೆ ಎಂಬ ಡಿಟೇಲ್ ಇಲ್ಲಿದೆ. ಅಂಗ್ಲ ಮಾಧ್ಯಮವೊಂದು ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಮಿರ್ಜಾ ಅವರ ಬಳಿ ಮಗಳ 2ನೇ ಮದ್ವೆ ಬಗ್ಗೆ ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಇರ್ಮಾನ್ ಮಿರ್ಜಾ, ಈ ವಿಚಾರಗಳಲ್ಲಿ ಯಾವುದೇ ಸತ್ಯಾಂಶವಿಲ್ಲ, ಆಕೆ ಅವನನ್ನು ಒಮ್ಮೆಯೂ ಭೇಟಿ ಕೂಡ ಮಾಡಿಲ್ಲ, ಈ ಸುದ್ದಿಗಳೆಲ್ಲವೂ ರಬ್ಬಿಶ್ ಎಂದು ಹೇಳಿದ್ದಾರೆ. ಇತ್ತೀಚೆಗೆ ಸಾನಿಯಾ ಮಿರ್ಜಾ ಮುಸ್ಲಿಮರ ಪವಿತ್ರ ಹಜ್ ಯಾತ್ರೆಯನ್ನು ಕೈಗೊಂಡಿದ್ದರು. ವೃತ್ತಿಪರ ಟೆನ್ನಿಸ್‌ನಿಂದಲೂ ನಿವೃತ್ತಿ ಪಡೆದಿರುವ ಸಾನಿಯಾ ಇತ್ತೀಚೆಗೆ ಪ್ರತಿಷ್ಠಿತ ಫ್ರೆಂಚ್ ಓಪನ್ 2024 ಕ್ಕೆ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪರಿವರ್ತನೆಯ ಅನುಭವಕ್ಕಾಗಿ ಸಜ್ಜಾಗುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದು, ಉತ್ತಮ ಮಾನವಳಾಗಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ