LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬೆಂಗಳೂರಲ್ಲಿ ಗಗನಕ್ಕೇರಿದ ತರಕಾರಿ.! ರೇಟ್ ಎಷ್ಟು.?

 

ಬೆಂಗಳೂರು: ಸಿಲಿಕಾನ್ ಸಿಟಿಯ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಕಳೆದ 15 ದಿನಗಳ ಅಂತರದಲ್ಲಿ ತರಕಾರಿ ಬೆಲೆಗಳು ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಭಾರಿ ಕತ್ತರಿ ಬೀಳುತ್ತಿದೆ. ಕೇವಲ ಎರಡು ವಾರಗಳ ಹಿಂದೆ ಕೈಗೆಟುಕುವ ದರದಲ್ಲಿದ್ದ ತರಕಾರಿಗಳು ಈಗ ಕೊಳ್ಳಲಾಗದ ಮಟ್ಟಕ್ಕೆ ಬೆಲೆ ಏರಿಕೆ ಕಂಡಿವೆ.

ಬೀನ್ಸ್ ಬೆಲೆ ಕೇಳಿ ಬೆಚ್ಚಿಬಿದ್ದ ಜನ!

ಮಾರುಕಟ್ಟೆಯಲ್ಲಿ ಸದ್ಯ ಬೀನ್ಸ್ ದರ ಗ್ರಾಹಕರನ್ನು ಬೆಚ್ಚಿಬೀಳಿಸುತ್ತಿದೆ. 15 ದಿನಗಳ ಹಿಂದೆ ಪ್ರತಿ ಕೆಜಿಗೆ 60 ರೂಪಾಯಿ ಇದ್ದ ಬೀನ್ಸ್ ಬೆಲೆ ಈಗ ಬರೋಬ್ಬರಿ 160 ರೂಪಾಯಿಗೆ ತಲುಪಿದೆ. ಈ ಹಿಂದೆ 500 ರೂಪಾಯಿ ತಂದರೆ ಚೀಲ ತುಂಬಾ ತರಕಾರಿ ತರುತ್ತಿದ್ದ ಜನ, ಈಗ ಅಷ್ಟೇ ಹಣ ನೀಡಿದರೂ ಎರಡು ಪುಟ್ಟ ಬ್ಯಾಗ್ ತುಂಬಿಸಲು ಪರದಾಡುವಂತಾಗಿದೆ.

ಬೆಲೆ ಏರಿಕೆಗೆ ಪ್ರಮುಖ ಕಾರಣಗಳೇನು?

ಹವಾಮಾನ ವೈಪರೀತ್ಯ: ರಾಜ್ಯದಲ್ಲಿ ಸುಡುತ್ತಿರುವ ಬಿಸಿಲು ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆಗಳಿಗೆ ಭಾರಿ ಹಾನಿಯಾಗಿದೆ.

ಇಳುವರಿ ಕುಸಿತ: ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದಲ್ಲಿ ಶಾಖದ ಅಲೆಗೆ ಹೂವುಗಳು ಉದುರಿ ಇಳುವರಿ ಕಡಿಮೆಯಾಗಿದೆ. ಮಾರುಕಟ್ಟೆಗೆ ಬರುತ್ತಿರುವ ತರಕಾರಿ ಪ್ರಮಾಣದಲ್ಲಿ ಶೇ. 30 ರಿಂದ 40ರಷ್ಟು ಇಳಿಕೆ ಕಂಡಿದೆ.

ಸೀಸನ್ ಎಫೆಕ್ಟ್: ಸಾಲು ಸಾಲು ಮದುವೆಗಳು ಮತ್ತು ಹಬ್ಬಗಳ ಸೀಸನ್ ಇರುವುದರಿಂದ ಬೇಡಿಕೆ ಹೆಚ್ಚಾಗಿ, ಪೂರೈಕೆ ಕಡಿಮೆಯಾಗಿದೆ.

ಸಾರಿಗೆ ವೆಚ್ಚ: ನೆರೆ ರಾಜ್ಯಗಳಿಂದ ಬರುವ ತರಕಾರಿಗಳ ಸಾರಿಗೆ ವೆಚ್ಚವು ದರ ಏರಿಕೆಗೆ ಪೂರಕವಾಗಿದೆ.

 

 





















































ತರಕಾರಿ ಹೆಸರು ಪ್ರಸ್ತುತ ದರ (ರೂ.) 15 ದಿನಗಳ ಹಿಂದೆ (ರೂ.) ದರ ಹೆಚ್ಚಳ (ರೂ.)
ಬೀನ್ಸ್ 160 ರೂ. 60 ರೂ.  100 ರೂ.
ಕ್ಯಾರೆಟ್ 60 ರೂ. 20 ರೂ.  40 ರೂ.
ಟೊಮೆಟೋ 50 ರೂ. 15 ರೂ.  35 ರೂ.
ಆಲೂಗಡ್ಡೆ 50 ರೂ. 15 ರೂ.  35 ರೂ.
ಬದನೆಕಾಯಿ 70 ರೂ. 30 ರೂ.  40 ರೂ.
ಬೆಂಡೆಕಾಯಿ 60 ರೂ. 25 ರೂ.  35 ರೂ.
ಎಲೆಕೋಸು 40 ರೂ. 15 ರೂ.  25 ರೂ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026