LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಣ್ಣಾನಗರದ ಮುಖ್ಯರಸ್ತೆಗೆ ಮುಕ್ತಿ ಯಾವಾಗ?

ವರದಿ: ಸನತ್
ಶಿವಮೊಗ್ಗ ನಗರಕ್ಕೆ ಸ್ಮಾರ್ಟ್ ಸಿಟಿ  ಕಾಮಗಾರಿ ಅಕ್ಷರಶಃ ನಾಗರೀಕರ ಪಾಲಿಗೆ ಹೊರೆಯಾಗಿ ಪರಿಣಮಿಸಿದೆ. ಶುದ್ಧಗಾಳಿಯ ನಗರ ಎಂದು ಕರೆಸಿಕೊಳ್ಳುತ್ತಿದ್ದ ನಮ್ಮ ಶಿವಮೊಗ್ಗ ನಗರದಲ್ಲಿ ಈಗ ಶುದ್ಧ ಗಾಳಿಗೆ ಹುಡುಕಾಡಬೇಕಿದೆ. ಈ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ನಗರದ ರಸ್ತೆ ತುಂಬೆಲ್ಲಾ ಧೂಳು ತುಂಬಿಕೊಂಡಿದ್ದು, ಜನ ಮತ್ತು ವಾಹನ ಸಂಚಾರ ದುಸ್ತರವಾಗಿದೆ.
ಆದರಲ್ಲೂ ಬಸ್ಟ್ಯಾಂಡ್ ನಿಂದ ಅಣ್ಣಾನಗರ ರಸ್ತೆಗಳಲ್ಲಿ ಸಂಚರಿಸಬೇಕೆಂದರೆ ಮಾಸ್ಕ್ ಧರಿಸಿ ತೆರಳಬೇಕಿದೆ. ಮಾಸ್ಕ್ ಧರಿಸಿದರೂ ಧೂಳಿನಿಂದ ತಪ್ಪಿಸಿಕೊಳ್ಳುವುದು ಕಷ್ಟ. ಡಬಲ್ ರೋಡ್ ಮಾಡುವ ಸಲುವಾಗಿ ರಸ್ತೆಯನ್ನು ಅಗೆಯಲಾಯಿತು. ಆದರೆ, ಆ ರಸ್ತೆ ವರ್ಷಗಳೆ ಕಳೆದರು ಡಬಲ್ ರೋಡ್ ನಿರ್ಮಾಣ ಮಾಡಲೆ ಇಲ್ಲ. ಅಗೆದ ರಸ್ತೆಗಳನ್ನು ಈವರೆಗೆ ಸರಿಪಡಿಸಿಲ್ಲ.
ಇನ್ನು ಮಳೆಗಾಲದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಿರ್ವಹಿಸಲು ಆಗುವುದಿಲ್ಲ. ಪ್ರತಿನಿತ್ಯ ಸಾವಿರಾರು ವಾಹನಗಳು ಅಣ್ಣಾನಗರ ಮುಖ್ಯರಸ್ತೆಯಲ್ಲಿ ಹಾದು ಹೋಗುತ್ತವೆ. ವಾಹನ ಚಲಿಸಿದಾಗ ಏಳುವ ಧೂಳು, ಅಕ್ಕ-ಪಕ್ಕದಲ್ಲಿ ಇರುವ ಅಂಗಡಿ-ಮುಂಗಟ್ಟುಗಳು, ಮನೆಗಳಿಗೆ ದಿನವಿಡೀ ಧೂಳು ತುಂಬಿಕೊಳ್ಳುತ್ತಿದೆ.ಇನ್ನು ಈ ರಸ್ತೆಯಲ್ಲಿ ಪಾದಚಾರಿಗಳ ಸಂಖ್ಯೆಯೂ  ಹೆಚ್ಚಿದ್ದು, ಅವರ ಸ್ಥಿತಿಯಂತೂ ಹೇಳ ತೀರದಾಗಿದೆ. ಧೂಳು ಕುಡಿದು ಅಸ್ತಮ,ಶೀತ,ಕೆಮ್ಮಿನಿಂದ ಬಳಲುವಂತಾಗಿದೆ.
ಅಣ್ಣಾನಗರದ ಮುಖ್ಯರಸ್ತೆ ಸುಮಾರು ತಿಂಗಳುಗಳೆ  ಉರುಳಿದರೂ ಸ್ಮಾರ್ಟ್ ಸಿಟಿ  ಕಾಮಗಾರಿ ಪೂರ್ಣಗೊಂಡಿಲ್ಲ. ಮತ್ತೊಂದೆಡೆ, ಅವ್ಯವಸ್ಥಿತ  ಅರ್ಧಂಬರ್ಧ ಚರಂಡಿ ಕಾಮಗಾರಿಗಳಿಂದ, ನಾಗರೀಕರು ತೊಂದರೆ ಪಡುವಂತಾಗಿದೆ. ಡಬಲ್ ರೋಡ್ ಮಾಡುವ ಉತ್ಸುಕತೆಯಲ್ಲಿ ಈಗ ಕಾಮಗಾರಿ ಅರ್ಧಕ್ಕೆ ನಿಂತಿದೆ.ಕೆಲವೊಂದು ಬಿಲ್ಡಿಂಗ್‌ಗಳು ಸಂಪೂರ್ಣ ನೆಲಸಮ ಮಾಡಿದರೆ ಇನ್ನು ಕೆಲವು ಹಾಗೆಯೆ ಇದೆ.
ಇನ್ನು ಚರಂಡಿ ಕಾಮಗಾರಿಗಳಂತು ಜೀವ ಬಲಿಗೆ ಕಾದು ಕುಳಿತಿವೆ. ಬಸ್ಟ್ಯಾಂಡ್‌ನಿಂದ  ಅಣ್ಣಾನಗರ ೩ನೇ ತಿರುವಿನವರಗೆ ರಸ್ತೆ ಅಗಲೀಕರಣ ಕಾಮಗಾರಿ ಮುಗಿದಿದ್ದು ಮುಂದೆ ಅಣ್ಣಾನಗರದ ೪ನೇ ತಿರುವಿನಿಂದ ಚಾನೆಲ್‌ವರೆಗೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಬಗ್ಗೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ಇಲ್ಲಿಯವರೆಗೂ ಯೋಜನೆಯ ಕಾಮಗಾರಿ ಪೂರ್ಣಗೊಂಡಿಲ್ಲ. ಅಂಗಡಿ-ಮನೆಗಳ ಮುಂಭಾಗ ಚರಂಡಿಗಳನ್ನು ತೆಗೆದಿರುವುದರಿಂದ, ಅಂಗಡಿ-ಮನೆಗಳಿಗೆ ಹೋಗಲು ಸಂಕಷ್ಟ ಪಡುವಂತಾಗಿದೆ.ಕಾಮಗಾರಿ ನಿಗಿದಿತ ಅವಧಿಯೊಳಗೆ ಪೂರ್ಣಗೊಳ್ಳದೆ ಕುಂಟುತ್ತ ಸಾಗಿದೆ .
ಎಲ್ಲಾ ಕಡೆ ರಸ್ತೆಗಳಲ್ಲೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಹೆಚ್ಚಿನ ಸಮಸ್ಯೆಯಾಗುತ್ತಿದೆ.  ರಸ್ತೆಗಳಲ್ಲಿ ವಾಹನಗಳು ಅತಿವೇಗದಿಂದ ಸಂಚರಿಸುತ್ತಿದ್ದು ಅವುಗಳ ವೇಗಗಳಿಗು  ಕಡಿವಾಣ ಹಾಕಬೇಕು.ಕಾಮಗಾರಿ ಅರ್ಧಕ್ಕೆ ನಿಂತಿರುವುದಿರಿಂದ ಅಣ್ಣಾನಗರ ಮುಖ್ಯರಸ್ತೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಸ್ಥಳೀಯ ಹೋಟೆಲ್ ಉದ್ಯಮಿ ಚಂದ್ರಹಾಸ ಆರೋಪಿಸಿದರು.
ಚರಂಡಿ ಕಾಮಗಾರಿಗಾಗಿ ತೆಗೆದ  ಗುಂಡಿಗಳು ಆಳವಾಗಿವೆ. ಅತ್ಯಂತ ಎಚ್ಚರಿಕೆಯಿಂದ ಪಾದಚಾರಿಗಳು ನಡೆದುಕೊಂಡು ಹೋಗುವ ದುಃಸ್ಥಿತಿ ಎದುರಾಗಿದೆ. ಸಣ್ಣ ಮಕ್ಕಳು, ವಯೋವೃದ್ದರು, ಅಶಕ್ತರು ರಸ್ತೆಯಲ್ಲಿ  ಹೊರಹೋಗಲು ಭಯವಪಡುವಂತಾಗಿದೆ. ಇಷ್ಟೆಲ್ಲ ಅಪಾಯಕಾರಿ ಸ್ಥಿತಿಯಿದ್ದರೂ ಇಲ್ಲಿಯವರೆಗೂ ನಾಗರೀಕರಿಗೆ ನೆರವಾಗುವ ಕಾರ್ಯವನ್ನು ಕೈಗೊಂಡಿಲ್ಲ.
ಇನ್ನು ಅಣ್ಣಾನಗರ ಮುಖ್ಯರಸ್ತೆಯಿಂದ ಮಂಜುನಾಥ ಬಡಾವಣೆಗೆ ಸಂಚರಿಸುವ ರಸ್ತೆ ವಿಪರೀತ ಏರಿಳಿತಗಳಿಂದ ಕೂಡಿದೆ ಈ ರಸ್ತೆಲ್ಲಿ ಸಂಚರಿಸುವ ವಾಹನ ಸವಾರರು ಜೀವ ಬಿಗಿ ಹಿಡಿದು ವಾಹನ ಚಾಲನೆ ಮಾಡುತ್ತಿದಾರೆ.ಕೆಲವರು ಗಾಡಿ ರಸ್ತೆ ಬದಿ ನಿಲ್ಲಿಸಿ ನಡೆದೆ ಹೋಗುತ್ತಿರುವ ದೃಶ್ಯ ಸಹ ಕಂಡು ಬರುತ್ತಿದೆ.
ಅಗಲೀಕರಣದ ನೆಪದಲ್ಲಿ ರಸ್ತೆ ಬದಿಯಲ್ಲಿದ ಮನೆ,ವಾಣಿಜ್ಯ ಮಳಿಗೆಗಳನ್ನ ಒಡೆಯಲಾಗಿದೆ.ಆದರೆ , ಇದಕ್ಕೆ ಇದುವರೆಗೂ ಪರಿಹಾರ ಸಿಕ್ಕಿಲ್ಲ . ಈ ಬಗ್ಗೆ ನಷ್ಟಕ್ಕೆ ಒಳಗಾದವರು ಸಂಬಂಧ ಪಟ್ಟವರ ಗಮನ ಸೆಳೆದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಲ್ಲಿನ ನೊಂದ ನಿವಾಸಿ ದರ್ಶನ್ ಟಿ.ಹೆಚ್ ಅಳಲು ತೋಡಿಕೊಂಡರು.
ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಕ್ರಮಕೈಗೊಳ್ಳುವ ಮೂಲಕ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ನಮ್ಮ ಮನವಿ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST