LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆರ್‌ಸಿಬಿ ವಿಜಯೋತ್ಸವ: ಕಾಲ್ತುಳಿತದ ಸಾವಿಗೆ ಯಾರು ಹೊಣೆ..?

ಐಪಿಎಲ್ ಪಂದ್ಯಾವಳಿಯಲ್ಲಿ ಅಂತಿಮ ವಾಗಿ ಆರ್‌ಸಿಬಿ ವಿಜಯ ಸಾಸಿದ ಹಿನ್ನೆಲೆಯಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗ ಣದಲ್ಲಿ  ನಡೆದ ವಿಜಯೋತ್ಸವ ಸಮಾರಂಭದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಸಾವನ್ನಪ್ಪಿ, 56 ಮಂದಿ ಗಾಯಗೊಂಡ ಘಟನೆ ಮನಕಲಕುವಂತದ್ದು. ಈ ಘಟನೆಗೆ ಯಾರು ಹೊಣೆ ಎಂಬ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ.
ಸಂಭ್ರಮಾಚರಣೆಗೆ ಬಂದಿದ್ದ ಕ್ರಿಕೆಟ್ ಅಭಿಮಾನಿ ಗಳು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದು, ನಿಜಕ್ಕೂ ದುರಾದೃಷ್ಟಕರ ಈ ಜೀವಕ್ಕೆ ಬೆಲೆ ಕಟ್ಟು ವವರು ಯಾರು? ಸತ್ತವರ ಕುಟುಂಬ ಸದಸ್ಯರಿಗೆ ಸಂತೈಸುವವರು ಯಾರು? ಎಂಬ ಪ್ರಶ್ನೆಗೆ ಉತ್ತರಿಸುವವರು ಇಲ್ಲದಂತಾಗಿದೆ.
ಘಟನೆಯ  ಕುರಿತು ರಾಜ್ಯ ಸರ್ಕಾರ ಕೆಲವು ತೀರ್ಮಾನಗಳನ್ನು ಕೈಗೊಂಡಿದ್ದು, ಅದರ ಪ್ರಕಾರ ಪ್ರಕರಣದ ವಿಚಾರಣೆಗಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧಿಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ.
ಆರ್‌ಸಿಬಿ, ಕೆಎಸ್‌ಸಿಎ ಹಾಗೂ ಈವೆಂಟ್ ಮ್ಯಾನೇಜ್‌ಮೆಂಟ್ ಮೇಲೆ ಪ್ರಕರಣ ದಾಖಲಿಸಿದೆ. ಅಲ್ಲದೇ ಸಂಬಂಧಪಟ್ಟವರನ್ನು ಪೊಲೀಸ್ ಇಲಾಖೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಈ ಘಟನೆ ನಡೆದ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಐವರು ಪೋಲೀಸ್ ಅಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಇದರಲ್ಲಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಕೂಡ ಸೇರಿರುವುದು ದುರಾದೃಷ್ಟಕರ ಎಂಬ ಚರ್ಚೆ ವ್ಯಾಪಕವಾಗಿ ಕೇಳಿಬರುತ್ತಿದೆ.
ಯಾವುದೇ ಕಪ್ಪುಚುಕ್ಕೆ ಇಲ್ಲದೇ ಮೂರು ದಶಕಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ಇಂತಹ ನಿಷ್ಠಾವಂತ ಅಧಿಕಾರಿಯನ್ನು ಅವರದಲ್ಲದ ತಪ್ಪಿಗೆ ಸರ್ಕಾರ ಏಕಾಏಕಿ ಆಮಾನತು ಮಾಡಿರುವುದಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗಿದೆ.
ಪಂದ್ಯ ನಡೆದ 24 ಗಂಟೆಯೊಳಗೆ ವಿಜೇತ ತಂಡವನ್ನು ಕರೆಸುವುದರ ಆತುರತೆ ಏನಿತ್ತು. ಪಂದ್ಯದ ಹಿಂದಿನ ದಿನ ವೀಕ್ಷಣೆಯಲ್ಲಿ ಮತ್ತು ಗೆಲುವಿನ ಉನ್ಮಾದದಲ್ಲಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟು ಬಳಲಿದ್ದರು.
ಮರುದಿನವೇ ವಿಜೇತ ತಂಡ ಬಂದರೆ ಬಂದೋ ಬಸ್ತ್ ಕಾರ್ಯ ಬಹಳ ಕಠಿಣವಾಗುತ್ತದೆ. ಆದ್ದರಿಂದ ಈ ಕಾರ್ಯಕ್ರಮ ಬೇಡ ಎಂಬ ಸಂದೇಶವನ್ನು ಗುಪ್ತಾಚಾರ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸರ್ಕಾರಕ್ಕೆ ನೀಡಿದ್ದರೂ ಸಹ ಸರ್ಕಾರ ಏಕೆ ಇಂತಹ ಕಾರ್ಯಕ್ಕೆ ಮುಂದಾಯಿತು ಎಂಬುದು ದುವರೆಗೂ ಅರ್ಥವಾಗದ ವಿಚಾರವಾಗಿದೆ.
ಕ್ರಿಕೆಟ್ ಅಭಿಮಾನಿಗಳ ಉನ್ಮಾದ ಮತ್ತು ಹುಚ್ಚುತನ ಅಮಾಯಕರ ಜೀವವನ್ನು ಬಲಿತೆಗೆದು ಕೊಂಡಿತು. ಇದರ ಬಗ್ಗೆ ಪೊಲೀಸ್ ಇಲಾಖೆ ಮುನ್ಸೂಚನೆಯನ್ನು ನೀಡಿತ್ತು ಎಂಬ ಮಾಹಿತಿ ವ್ಯಕ್ತವಾಗುತ್ತಿದೆ. ಆದರೂ ಸರ್ಕಾರ ಹಠಕ್ಕೆ ಬಿದ್ದಂತೆ ಏಕೆ ಕಾರ್ಯಕ್ರಮಕ್ಕೆ ಮುಂದಾಯಿತು ಎಂಬುದು ಅರಿಯದ ವಿಷಯವಾಗಿದೆ.
ಘಟನೆಗೆ ಅಧಿಕಾರಿಗಳೇ ಹೊಣೆ ಎನ್ನುವುದಾದರೆ, ಚುನಾಯಿತ ಸರ್ಕಾರದ ಜವಾಬ್ದಾರಿಯೇನು? ಸಾಕಷ್ಟು ಅನುಭವದಾರರಾದ ಸಿಎಂ, ಡಿಸಿಎಂ, ಕಾನೂನು ಸಚಿವರು ಹಾಗೂ ಗೃಹ ಸಚಿವರಿದ್ದಾರೆ. ಆದರೆ ಇವರ?ಯಾರೂ ಕೂಡ ತರಾತುರಿಯಲ್ಲಿ ಕಾರ್ಯಕ್ರಮ ಮಾಡಬೇಕೇ ಬೇಡವೇ ಎಂಬುದರ ಬಗ್ಗೆ ಯೋಚಿಸಲಿಲ್ಲವೇ? ಘಟನೆಯಲ್ಲಿ ಪ್ರಾಣಹಾನಿ ಯಾದ ನಂತರ ಅಕಾರಿಗಳನ್ನು ದೂಷಣೆ ಮಾಡು ವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಕೇಳಿಬರುತ್ತಿದ್ದು, ಇದಕ್ಕೆ ಸರ್ಕಾರವಷ್ಟೇ ಉತ್ತರಿಸಬೇಕಾಗಿದೆ.
ಘಟನೆಯ ಬಗ್ಗೆ ವಿಪಕ್ಷಗಳು ಸಿಎಂ ಡಿಸಿಎಂ ಹಾಗೂ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತಿವೆ ಆದರೆ ಅವರ ಸರ್ಕಾರದ ಅವಧಿಯಲ್ಲಿ ಆದಂತಹ ಅವಘಡಗಳ ಹಿನ್ನೆಲೆಯಲ್ಲಿ ಯಾರು ಕೂಡ ರಾಜಿನಾಮೆ ನೀಡಿ ಮೇಲ್ಪಂಕಿ ಹಾಕಿಲ್ಲ ಹೀಗಿರುವಾಗ ಈ ಸನ್ನಿವೇಶದಲ್ಲಿ ಅವರುಗಳಿಗೆ ನೈತಿಕತೆ ಇಲ್ಲವಾಗಿದೆ ಘಟನೆ ಕುರಿತು ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನ ಅರಿಯಬೇಕಾಗಿತ್ತು ಮುಖ್ಯಮಂತ್ರಿಗಳಾಗಲಿ ಉಪ ಮುಖ್ಯಮಂತ್ರಿ ಇದರ ಜವಾಬ್ದಾರಿಯನ್ನ ಹೊರಲೇಬೇಕು ಕೇವಲ ಅಽಕಾರಿಗಳನ್ನು ಅಮಾನತುಗೊಳಿಸಿ ಕೈ ತೊಳೆದುಕೊಳ್ಳುವ ಕೆಲಸಕ್ಕೆ ಸರ್ಕಾರ ಮುಂದಾಗಬಾರದಿತ್ತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST