LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮೌನಿ ಅಮವಾಸ್ಯೆಗೆ ಯಾಕೆ ಇಷ್ಟೊಂದು ಮಹತ್ವ? ಈ ದಿನ ಸಿಗುವ ಫಲಾಫಲಗಳೇನು?

ಇಂದು ಮಹಾಸುದಿನ.. ಮಹಾಕುಂಭಮೇಳದಲ್ಲಿ ಶಾಹಿಸ್ನಾನದಿಂದ ಮೋಕ್ಷಪ್ರಾಪ್ತಿ ಆಗುತ್ತದೆ ಅನ್ನೋದು ಮೂಲ ನಂಬಿಕೆ. ಇಂದು ಮೌನಿ ಅಮಾವಾಸ್ಯೆ ಇದ್ದು, ತ್ರಿವೇಣಿಸಂಗಮದಲ್ಲಿ ಅಮೃತಸ್ನಾನ ಮಾಡಲು ಅಸಂಖ್ಯ ಭಕ್ತಗಣ ಕಾತರದಿಂದ ಕಾಯ್ತಿದೆ. ತ್ರಿವೇಣಿ ಸಂಗಮದಲ್ಲಿ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇವತ್ತು ಕೋಟಿ ಕೋಟಿ ಭಕ್ತರು ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡುವ ನಿರೀಕ್ಷೆ ಇದೆ. ಈ ಮಧ್ಯೆ ಭಾರೀ ದೊಡ್ಡ ಪ್ರಮಾಣದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ಕೋಟ್ಯಾಂತರ ಭಕ್ತರು ಮಹಾಕುಂಭಕ್ಕೆ ಆಗಮಿಸಿದ್ದಾರೆ. ಅಷ್ಟಕ್ಕೂ ಈ ಮೌನಿ ಅಮವಾಸ್ಯೆ ಅಂದರೆ ಏನು ಅನ್ನೋ ವಿವರ ಇಲ್ಲಿದೆ. ಮೌನಿ ಅಮವಾಸ್ಯೆಯಂದು ನದಿಯಲ್ಲಿ ಸ್ನಾನ ಮಾಡುವುದು ಅತ್ಯಂತ ಶ್ರೇಷ್ಠಕರ ಎಂದು ವೇದಿಕ ಪಂಚಾಂಗ ಹಾಗೂ ಹಿಂದೂ ಪಂಚಾಂಗಗಳು ಹೇಳುತ್ತವೆ. ಈ ಅಮವಾಸ್ಯೆಯಂದು ನದಿಯಲ್ಲಿ ಸ್ನಾನ ಮಾಡುವುದರಿಂದ ಮಾಡಿರುವ ಪಾಪಗಳೆಲ್ಲಾ ತೊಳೆದು ಹೋಗುತ್ತವೆ ಎಂದು ಹೇಳಲಾಗುತ್ತದೆ. ಇದನ್ನು ಮಾಘಿ ಅಮವಾಸ್ಯೆ ಎಂದು ಕೂಡ ಕರೆಯುತ್ತಾರೆ.

ಸಿದ್ಧಿ ಯೋಗದಂದೇ ಮೌನಿ ಅಮವಾಸ್ಯೆಯನ್ನು ಆಚರಿಸಲಾಗುವುದು. ಈ ದಿನ ಗಂಗೆಯಲ್ಲಿ ಮಿಂದೆದ್ದು ದಾನ ಧರ್ಮಗಳನ್ನು ಮಾಡುವುದರಿಂದ ಬದುಕಿನಲ್ಲಿ ಶುಭ ದಿನಗಳು ಆರಂಭವಾಗುತ್ತವೆ ಎಂದು ಹೇಳಲಾಗುತ್ತದೆ. ಮೌನಿ ಅಮವಾಸ್ಯೆಯಂದು ಪಿತೃಗಳ ಆತ್ಮಶಾಂತಿಗಾಗಿ ಮತ್ತು ಮೋಕ್ಷಕ್ಕಾಗಿ ಶ್ರಾದ್ಧ, ತರ್ಪಣ ಮತ್ತು ಪಿಂಡದಾನವನ್ನು ಕೂಡ ಮಾಡಬಹುದು. ಈ ರೀತಿ ಮಾಡುವುದರಿಂದ ಪಿತೃದೋಷಗಳು ಪರಿಹಾರವಾಗುತ್ತವೆ ಮತ್ತು ಕುಟುಂಬದ ಸದಸ್ಯರಿಗೆ ಪಿತೃಗಳ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆಯೂ ಇದೆ. ಈ ಅಮವಾಸ್ಯೆಯಂದು ಮಾಡುವ ಕೆಲವು ಕಾರ್ಯಗಳು ಫಲದಾಯಕ ಆಗಿರುತ್ತವೆ ಇನ್ನೂ ಕೆಲವು ಆಚರಿಸಲಾರದಂತಹ ಕಾರ್ಯಗಳು ಆಗಿರುತ್ತವೆ.

ಮೌನಿ ಅಮವಾಸ್ಯೆಯು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೂಲವಾಗಿದೆ. ಮೌನಿ ಅಮವಾಸ್ಯೆ ದಿನದಂದು ಆಕಾಶ ಶಕ್ತಿಗಳು ಸಾಮರಸ್ಯದಿಂದ ಇರುತ್ತವೆ. ಶಾಂತಿ, ನೆಮ್ಮದಿ, ಸಂಪತ್ತು, ಆರೋಗ್ಯಗಾಗಿ ಪ್ರಾರ್ಥಿಸಲು ಇದು ಸರಿಯಾದ ಸಮಯವಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST