LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಜ್ವಲಂತ ಸಮಸ್ಯೆಗಳ ಬಗ್ಗೆ ಆರ್.ಎಸ್.ಎಸ್.ನವರು ಏಕೆ ಮಾತನಾಡುತ್ತಿಲ್ಲ.?

 

ಚಿತ್ರದುರ್ಗ : ಧರ್ಮ, ಜಾತಿ, ದೇವರ ಹೆಸರಿನಲ್ಲಿ ಯುವ ಜನಾಂಗವನ್ನು ದಿಕ್ಕು ತಪ್ಪಿಸುತ್ತಿರುವ ಆರ್.ಎಸ್.ಎಸ್.ನವರು ಜ್ವಲಂತ ಸಮಸ್ಯೆಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಸರ್ವೊದಯ ಕರ್ನಾಟಕ ಪಕ್ಷದ ರಾಜ್ಯ ಸಮಿತಿ ಉಪಾಧ್ಯಕ್ಷ ಜೆ.ಯಾದವರೆಡ್ಡಿ ಖಾರವಾಗಿ ಪ್ರಶ್ನಿಸಿದರು?

ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಂಚಾಯತ್ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ ಖರ್ಗೆರವರು ಪ್ರಶ್ನೆ ಮಾಡಿರುವುದಕ್ಕೆ ಅಸಭ್ಯವಾಗಿ ವರ್ತಿಸಿರುವ ಆರ್.ಎಸ್.ಎಸ್.ನವರು ಮುಖವಾಡ ಕಳಚಿದ್ದಾರೆ. ರಾಷ್ಟ್ರಭಕ್ತಿ, ಸಂಸ್ಕಾರ ಕಲಿಸುತ್ತಾರೆಂಬ ನಂಬಿಕೆಯಿಂದ ಪೋಷಕರುಗಳು ತಮ್ಮ ಮಕ್ಕಳನ್ನು ಆರ್.ಎಸ್.ಎಸ್.ಗೆ ಕಳಿಸುವುದು ಸಹಜ. ಭಾರತದ ಚರಿತ್ರೆಯಲ್ಲಿ ಆರ್.ಎಸ್.ಎಸ್.ಗೆ ಯಾವುದೇ ಗುರುತಿಲ್ಲ. ಎಂಬತ್ತು ಲಕ್ಷದಷ್ಟು ಸದಸ್ಯರುಗಳಿರುವಂತ ದೊಡ್ಡ ಸಂಘಟನೆ. ಸಂವಿಧಾನದ ಎಲ್ಲಾ ಆಶಯಗಳನ್ನು ಗಾಳಿಗೆ ತೂರಿ ವರ್ತಿಸುತ್ತಿದ್ದಾರೆಂಬ ಕಿಡಿ ಕಾರಿದರು.

ಬೇನಾಮಿ, ಭೂಗತವಾಗಿರುವ ಆರ್.ಎಸ್.ಎಸ್.ಗೆ ಎಲ್ಲಿಂದ ಹಣ ಬರುತ್ತದೆಂಬುದು ನಿಗೂಢವಾಗಿದೆ. ಸಂವಿಧಾನ ವಿರೋಧಿ ಕೃತ್ಯದಲ್ಲಿ ತೊಡಗಿರುವ ಈ ಸಂಘಟನೆ ಪಾರದರ್ಶಕವಾಗಿದ್ದರೆ ಏಕೆ ಲೆಕ್ಕ ಕೊಡುತ್ತಿಲ್ಲ. 1925 ರಿಂದ ಇಲ್ಲಿಯವರೆಗೂ ಆರ್.ಎಸ್.ಎಸ್.ನಲ್ಲಿ ಉನ್ನತ ಸ್ಥಾನ ಪಡೆದವರೆಲ್ಲಾ ಬ್ರಾಹ್ಮಣರೆ. ರಾಜೇಂದ್ರಸಿಂಗ್ ಒಬ್ಬರು ಮಾತ್ರ ಅನ್ಯ ಜಾತಿಯವರು. ಕರಾವಳಿ ಭಾಗದಲ್ಲಿ ಆರ್.ಎಸ್.ಎಸ್. ಸದಾ ಕೋಮುಗಲಭೆಯನ್ನು ಹುಟ್ಟುಹಾಕುತ್ತಿರುತ್ತದೆ. ಇಂತಹ ಸಂಘಟನೆಯನ್ನು ನಿಷೇಧಿಸಬೇಕೆಂದು ಪ್ರಿಯಾಂಕಖರ್ಗೆ ಹೇಳಿರುವುದರಲ್ಲಿ ಯಾವ ತಪ್ಪು ಇಲ್ಲ ಎಂದು ಸಮರ್ಥಿಸಿಕೊಂಡರು.

ಜಾತಿವಾದಿಯಿಂದ ತುಂಬಿಕೊಂಡಿರುವ ಆರ್.ಎಸ್.ಎಸ್.ಗೆ ಬಿಜೆಪಿ. ಹೈಕಮಾಂಡ್. ಮಹಾತ್ಮಗಾಂಧಿಯನ್ನು ಕೊಂದ ಗೋಡ್ಸೆಯನ್ನು ವೈಭವೀಕರಿಸುವ ಇವರು ಕಲ್ಬುರ್ಗಿ, ಗೌರಿ ಲಂಕೇಶ್ ಇವರುಗಳನ್ನು ಕೊಂದಾಗಲೆಲ್ಲಾ ಸಂಭ್ರಮಿಸಿದ್ದಾರೆಂದರೆ ಎಂತಹ ವಿಕೃತ ಮನಸ್ಸಿನವರೆನ್ನುವುದು ಯಾರಿಗಾದರೂ ಗೊತ್ತಾಗುತ್ತದೆ. ಮಹಿಳೆಯರು, ರೈತರು, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಏಕೆ ಈ ಸಂಘಟನೆ ಮಾತನಾಡುವುದಿಲ್ಲ. ಲಾಠಿ ಕೈಯಲ್ಲಿ ಹಿಡಿದು ಪಥಸಂಚಲನೆ ನಡೆಸುವುದು ಹಿಂಸೆಯ ಪೂರಕ. ಅನ್ಯ ಧರ್ಮವನ್ನು ಕಂಡು ವಿಷ ಕಾರುವುದು ಇವರ ಕೆಟ್ಟ ಗುಣ. ಹಾಗಾಗಿ ಆರ್.ಎಸ್.ಎಸ್.ನ್ನು ನಿಷೇಧಿಸುವುದು ಸೂಕ್ತ ಎಂದರು.

ನ್ಯಾಯವಾದಿ ಸಿ.ಶಿವುಯಾದವ್ ಮಾತನಾಡಿ ಯಾವುದೇ ನೊಂದಣಿಯಿಲ್ಲದೆ ದೇಶಭಕ್ತರೆಂದು ಹೇಳಿಕೊಂಡು ಸುತ್ತುವ ಆರ್.ಎಸ್.ಎಸ್. ಸಂಘಟನೆಯನ್ನು ರಾಜ್ಯದ ಮುಖ್ಯ ಮಂತ್ರಿ ನಿಷೇಧಿಸಬೇಕು. ಜಾತಿ, ಧರ್ಮಗಳ ವಿರುದ್ದ ಸಂಘರ್ಷ ಉಂಟು ಮಾಡುವುದೇ ಇವರ ಅಜೆಂಡ. ಹಾಗಾಗಿ ಇಂತಹ ದೇಶ ವಿರೋಧಿ ಸಂಘಟನೆಗೆ ಮೊದಲು ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ನ್ಯಾಯವಾದಿಗಳಾದ ಬೀಸ್ನಳ್ಳಿ ಜಯಣ್ಣ, ಸುದರ್ಶನ್, ನಿವೃತ್ತ ಪ್ರಾಚಾರ್ಯರಾದ ಶಿವಕುಮಾರ್, ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ್ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026