LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಹೃದಯಾಘಾತದಿಂದ WWE ಲೆಜೆಂಡ್ ರಸ್ಲರ್ ಹಲ್ಕ್ ಹೊಗನ್ ನಿಧನ

ಫ್ಲೋರಿಡಾ : ವೃತ್ತಿಪರ ಕುಸ್ತಿ ಸೂಪರ್‌ಸ್ಟಾರ್ ಹಲ್ಕ್ ಹೋಗನ್(71) ಅವರು ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ.

ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE)ನ ಅತಿದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದ ಹೋಗನ್ ಅವರು ತಮ್ಮ ಫ್ಲೋರಿಡಾದ ಮನೆಯಲ್ಲಿ ನಿಧನರಾಗಿರುವುದಾಗಿ ವರದಿಯಾಗಿದೆ. ಹೋಗನ್ ಬಹಳ ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಗುರುವಾರ ಬೆಳಿಗ್ಗೆ 9.51 ರ ಸುಮಾರಿಗೆ, ಹಲ್ಕ್ ಹೋಗನ್ ಅವರಿಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ ವೈದ್ಯಕೀಯ ತಂಡವನ್ನು ಮನೆಗೆ ಕರೆಸಿ, ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆ ತಲುಪುವ ಮುನ್ನವೇ ಮೃತಪಟ್ಟಿರುವುದಾಗಿ ವರದಿಯಾಗಿದೆ.

1953 ರ ಆಗಸ್ಟ್ 11ರಂದು ಜಾರ್ಜಿಯಾದ ಆಗಸ್ಟಾದಲ್ಲಿ ಹೋಗನ್ ಜನಿಸಿದರು. ಹೋಗನ್ ಅವರ ನಿಜವಾದ ಹೆಸರು ಟೆರ್ರಿ ಜೀನ್ ಬೊಲಿಯಾ. 1977 ರಲ್ಲಿ ವೃತ್ತಿಪರ ಕುಸ್ತಿ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು, 1983 ರಲ್ಲಿ WWE ಗೆ ಪ್ರವೇಶಿಸುತ್ತಾರೆ. ಹೋಗನ್ ತಮ್ಮ WWE ವೃತ್ತಿಜೀವನದಲ್ಲಿ ಆರು ಬಾರಿ WWE ಚಾಂಪಿಯನ್‌ಶಿಪ್ ಮತ್ತು ಆರು ಬಾರಿ WCW ವರ್ಲ್ಡ್ ಹೆವಿವೇಟ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಅನೇಕ ಪ್ರಸಿದ್ಧ ಕುಸ್ತಿಪಟುಗಳನ್ನು ಸೋಲಿಸುವ ಮೂಲಕ ಹೋಗನ್ ಅವರು 1980 ರ ದಶಕವನ್ನು ಸಂಪೂರ್ಣವಾಗಿ ಆಳಿದರು.

ಮೊದಲ 9 ರೆಸಲ್‌ಮೇನಿಯಾ ಈವೆಂಟ್‌ಗಳಲ್ಲಿ 8 ರಲ್ಲಿ ಹೋಗನ್ ಭಾಗವಹಿಸಿದ್ದರು. 2012 ರ ಜನವರಿಯಲ್ಲಿ ಹೋಗನ್ ಕುಸ್ತಿಯಿಂದ ನಿವೃತ್ತರಾಗುತ್ತಾರೆ. ಅವರು ಅನೇಕ ಹಾಲಿವುಡ್ ಚಲನಚಿತ್ರಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಹಾಗೂ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಜೊತೆಗೆ 2005 ರಲ್ಲಿ ಹೋಗನ್ ಅವರನ್ನು WWE ಹಾಲ್ ಆಫ್ ಫೇಮ್‌ಗೆ ಸೇರಿಸಲಾಗಿತ್ತು. ಇನ್ನು ಹೋಗನ್ ಅವರ ನಿಧನಕ್ಕೆ ಪ್ರಪಂಚದಾದ್ಯಂತ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026