Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.

ಯಾಮಾರಿದ್ರೆ ಬಕ್ರಾ ಗ್ಯಾರಂಟಿ..

ಶ್ರೀನಿಧಿ. ಜೈನ್

ಬೆಂಗಳೂರು. ಏ.01: ಏಪ್ರಿಲ್ ಫಸ್ಟ್ ಮುರ್ಖರ ದಿನವೆಂದೇ ಹೇಳಲ್ಪಡುವ ದಿನ. ಏಪ್ರಿಲ್ ಫಸ್ಟ್ ಯಾರು ಯಾರಿಗೆ ಬೇಕಾದರೂ ಮುರ್ಖರನ್ನಾಗಿಸುವ ದಿನ.. ಇದು ನಮ್ಮ ಭಾರತದ ಆಚರಣೆಯಾಗಿರದೆ ಪಾಶ್ಚಿಮಾತ್ಯ ಸಂಸ್ಕೃತಿಯಾಗಿದೆ. ಪ್ರತಿ ವರ್ಷ ಏಪ್ರಿಲ್ ಫಸ್ಟ್ ಅನ್ನು ಏಪ್ರಿಲ್ ಫೂಲ್ಸ್ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ಯಾರು ಏನೇ ಮರೆತರೂ ಈ ದಿನವನ್ನು ಮಾತ್ರ ಯಾರು ಮರೆಯಲಿಕ್ಕಿಲ್ಲ...

ಎಷ್ಟೋ ಜನರು, ವಿದ್ಯಾರ್ಥಿಗಳು ತಮ್ಮ ಸ್ನೇಹಿತರಿಗೆ, ಆಪ್ತರಿಗೆ ಏಪ್ರಿಲ್ ಫೂಲ್ ಮಾಡಲು ಮರೆಯದೇ ಕಾದು ಕುಳಿತಿರುತ್ತಾರೆ.

ಏಪ್ರಿಲ್ ಫಸ್ಟ್ ತಮಾಷೆಯ ದಿನವಾಗಿದ್ದು, ಮುರ್ಖರ ದಿನವೆಂದೇ ಕರೆಯಲಾಗುವಂತಹ ದಿನವಾಗಿದೆ. ತುಂಬಾ ಆತ್ಮೀಯರು ಬಂಧು, ಮಿತ್ರರನ್ನು ಬಕ್ರಾ ಮಾಡುವಲ್ಲಿ ಸಿಗುವ ಖುಷಿಯೇ ಬೇರೆ ಅಲ್ವಾ. ಫ್ರೇಡ್ಸ್, ಹುಷಾರು ಯಾಮಾರಿದರೆ ಬಕ್ರಾ ಆಗುವುದು ಗ್ಯಾರಂಟಿ.. ಬಕ್ರಾ ಆದ್ರೆ ವರ್ಷವಿಡೀ ಬಕ್ರ ಎಂದೇ ಗುರುತಿಸಿಕೊಳ್ಳುವಂತಾದೀತು..

ಸುಳ್ಳು ಹೇಳಿ ರಾಜರೋಷವಾಗಿ ತಿರುಗಾಡುವಂತಹ ದಿನ, ಎರಡು ವರ್ಷ ಮಾತ್ರ ಏಪ್ರಿಲ್ ಫಸ್ಟ್ ಆಚರಣೆ ಮಾಡೋಕು ಆಗದೆ ತುಂಬ ಬೇಸರವಾಗಿರಬೇಕು ಅಲ್ವಾ... ಹೌದು ಕೊರೊನಾ ಹಾವಳಿ ಹೆಚ್ಚಿದ್ದರಿಂದ, ಎಷ್ಟೋ ಜನ ಫ್ರೆಂಡ್ಸ್‌ನ ಭೇಟಿಯಾಗಲು ಸಾಧ್ಯವೇ ಆಗಿರಲಿಲ್ಲ.. ಬರೀ ನಮ್ಮ ಕಥೆನೇ ಹೇಳ್ತಾ ಹೋದ್ರೆ, ಏಪ್ರಿಲ್ ಫೂಲ್ ದಿನದ ಕಥೆ ಕೇಳೋರ್ ಯಾರು.. ಸ್ವಲ್ಪ ಏಪ್ರಿಲ್ ಫಸ್ಟ್ ಕಥೆನೂ ನೋಡೋಣ ಬನ್ನಿ...

ಏಪ್ರಿಲ್ ಫೂಲ್ ಆಚರಣೆ ಹುಟ್ಟಿದ್ದು ಫ್ರಾನ್ಸ್‌ನಲ್ಲಿ. ಜೂಲಿಯನ್ ಕ್ಯಾಲೆಂಡರ್‌ನಿಂದ ಗ್ರೆಗೋರಿಯನ್ ಕ್ಯಾಲೆಂಡರ್‌ಗೆ ಬದಲಾದ ಸನ್ನಿವೇಶದ ಉಲ್ಲೇಖ ಸಿಗುತ್ತದೆ. ಅಂದರೆ, ಈ ಅವಧಿಯಲ್ಲಿ ಪೋಪ್ ಗ್ರೆಗೊರಿ XIII ಗ್ರೆಗೋರಿಯನ್ ಕ್ಯಾಲೆಂಡರ್ ಪರಿಚಯಿಸಿದ ನಂತರ ಈ ದಿನ ಆಚರಿಸಲು ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.

ಅಲ್ಲಿಯತನಕ ಹೊಸ ವರ್ಷವನ್ನು ಮಾರ್ಚ್‌ ಅಂತ್ಯದಲ್ಲಿ ಆಚರಿಸಲಾಗುತ್ತಿತ್ತು. ಆದರೆ, ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಹೊಸ ವರ್ಷದಾಚರಣೆ ಜನವರಿ 1ಕ್ಕೆ ಬದಲಾಗಿತ್ತು. ಈ ಬದಲಾವಣೆಯ ಬಳಿಕ ಏಪ್ರಿಲ್ ಮೊದಲ ದಿನವನ್ನು ಏಪ್ರಿಲ್ ಫೂಲ್ ಡೇ ಎಂದು ಆಚರಿಸಿಕೊಂಡು ಬರಲಾಗುತ್ತಿದೆ ಎಂಬುದು ನಂಬಿಕೆ.

ಕೊನೆಗೂ ಬಂತು ನಿಮ್ಮ ದಿನ. ಹ್ಯಾಪಿ ಏಪ್ರಿಲ್ ಫೂಲ್ ಹುಷಾರಾಗಿ ಇವತ್ತಿನ ದಿನ ಆಚರಣೆ ಮಾಡಿ. ಜಾಣರಲ್ಲೇ ಜಾಣ ಆದವರು ಕೂಡ ಇವತ್ತಿನ ದಿನ ಮುರ್ಖರಾಗುವ ಲಕ್ಷಣಗಳೇ ಹೆಚ್ಚಿರುತ್ತೆ.. ಜಾಣ ಅಂತ ಬೀಗಬೇಡಿ, ಯಾಮರಿದರೆ ಆಗ್ತಿ ನೀನು ಬಕ್ರಾ ಹುಷಾರ್... ದೇಶ ಬೆಳದಿದೇ ಹಾಗೆಯೇ ತಾಂತ್ರಿಕತೆಯೂ ಬೆಳದಿದೆ. ಕೈಯಲ್ಲಿ ಇರುವ ಮೊಬೈಲ್, ಸಾಮಾಜಿಕ ಜಾಲತಾಣಗಳೇ ಹೆಚ್ಚು ಯಾಮರಿಸೋದು..

ಮಕ್ಕಳಿಂದ, ದೊಡ್ಡವರವರೆಗೂ ಸುಳ್ಳು ಹೇಳಿ ತಮಾಷೆ ಮಾಡುವ ದಿನ ತಮಾಷೆ ಮಾತ್ರ ಆಗಿರಲಿ... ನೋವನ್ನು ಉಂಟು ಮಾಡುವ ಸನ್ನಿವೇಶವಾಗದಿರಲಿ.. ಭಾವನೆಗಳಿಗೆ ಧಕ್ಕೆಯಾಗದಂತೆ, ಯಾರಿಗೂ ಕಿರಿಕಿರಿಯಾದಂತೆ ಇರಲಿ... ಹ್ಯಾಪಿ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ