LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಯಡಿಯೂರಪ್ಪ ಕಣ್ಣೀರ ಧಾರೆಗೆ ಅವರ ಮಕ್ಕಳೇ ಕಾರಣ

ಶಿವಮೊಗ್ಗ,ಅ.21 : ಜಿಲ್ಲೆಯ ಸಂಸದ  ಬಿ.ವೈ ರಾಘ  ವೇಂದ್ರ ರಾಜಕೀಯ ಪ್ರವರ್ಧಮಾನಕ್ಕೆ ಬಂದ ಮೇಲೆ ಯೇ ಬಿಜೆಪಿ ಭ್ರಷ್ಟಾಚಾರ ಜನತಾ ಪಾರ್ಟಿ ಯಾಗಿದೆ. ಎರಡು ಬಾರಿ ಮುಖ್ಯಮಂತಿಯಾದ ಯಡಿ ಯೂರಪ್ಪ ಭ್ರಷ್ಟಾಚಾರಗಳ ಕಾರಣ ದಿಂದಲೇ ಐದು ವರ್ಷಗಳ ಅವಧಿ ಪೂರೈಸದೆ ರಾಜೀನಾಮೆ ನೀಡ ಬೇಕಾಯಿತು. ಅವರು ಕಣ್ಣೀರ ಧಾರೆಗೆ ಅವರ ಮಕ್ಕಳೇ ಕಾರಣ ಎಂದು ಕೆಪಿಸಿಸಿ ವಕ್ತಾರ, ಮಾಜಿ ಸಂಸದ ಆಯನೂರು ಮಂಜುನಾಥ್  ಹೇಳಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಯಾರಿಂದ ಎನ್ನುವ ಬಗ್ಗೆ ಬಹಿರಂಗ ಚರ್ಚೆ ಬನ್ನಿ ಎಂದು ಪಂಥಾಹ್ವಾನ ನೀಡಿದರಲ್ಲದೆ, ಬಿಜೆಪಿ ರಾಘವೇಂದ್ರ, ವಿಜಯೇಂದ್ರ ಬಂದ ನಂತರ ಭ್ರಷ್ಟಾಚಾರ ಜನಕ ಪಕ್ಷವಾಗಿದೆ ಎಂದರು.

ಬಿ.ವೈ. ರಾಘವೇಂದ್ರ ಅವರೇ ನೀವು ಕಾನೂ ನಿನ ಕುಣಿಕೆಯಿಂದ ತಪ್ಪಿಸಿ ಕೊಳ್ಳಲು ಸಾವಿರಾರು ಕೋಟಿ ರೂ.ಗಳ ಬೇನಾಮಿ ಆಸ್ತಿಗಳನ್ನು ಟ್ರಸ್ಟ್‌ಗಳ ಹೆಸರಿನಲ್ಲಿ ರಿಜಿಸ್ಟ್ರಾರ್ ಮಾಡಿಕೊಂಡಿ ದ್ದೀರಾ. ಹಣದ ಮೂಲವನ್ನು ತಾವು ಪ್ರಕಟ ಮಾಡಬಹುದಾ? ಭ್ರಷ್ಟಾಚಾರದ ಆರೋಪದ ಮೇಲೆ ಒಬ್ಬ ಹೋರಾಟ ಗಾರನ ಅಂತ್ಯ ಆಗಿದೆ. ನಮ್ಮ ಜಿಲ್ಲೆಯ ರಾಜಕಾರಣಕ್ಕೆ ಕಪ್ಪುಚುಕ್ಕೆ ತರುವಂತೆ ಯಡಿಯೂರಪ್ಪ ಅವರನ್ನು ಬಲಿತೆಗೆದ ಕೊಂಡಿದ್ದು ಬಿಜೆಪಿಯ ಭ್ರಷ್ಟಾಚಾರವೇ ಹೊರತು, ಬೇರಾವ ಜನಾಂದೋಲನ ಗಳಲ್ಲ. ತಮ್ಮ ಮತ್ತು ಕುಟುಂಬದ ಭ್ರ್ರಷ್ಟಾಚಾರದ ಕಾರಣದಿಂದ ಹೈಕ ಮಾಂಡ್ ಅನಿವಾರ್ಯವಾಗಿ ಅಧಿಕಾರಿಂದ ಕೆಳಗಿಳಿಸಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದವರ ಬಾಯಲ್ಲಿ ಭ್ರಷ್ಟಾ ಚಾರದ ವಿರುದ್ದ ಮಾತು ಬಂದಿರುವುದನ್ನು ಸ್ವಾಗತಿಸುತ್ತೇನೆ ಎಂದು ಲೇವಡಿ ಮಾಡಿದರು.

ಬಿಜೆಪಿ ಸೆಕ್ಸ್ ಸ್ಕ್ಯಾಂಡಲ್ ಪಾರ್ಟಿ:
ಕಾಂಗ್ರೆಸ್ ಪಕ್ಷನ್ನು ಕರೆಪ್ಸನ್ ಪಾರ್ಟಿ ಎಂದು ಕರೆಯುವ ಸಂಸದರೆ ನಿಮ್ಮ ಪಕ್ಷದ ಸ್ಥಿತಿಯನು? ಬಿಜೆಪಿ ಭಾರತೀಯ ಸೆಕ್ಸ್ ಸ್ಕ್ಯಾಂಡಲ್ ಪಾರ್ಟಿ ಆಗಿದೆ. ನಿಮ್ಮದೆ ಪಕ್ಷ ನಾಯಕರ ಮೇಲೆ ಪೊಕ್ಸೋ ಕೇಸುಗಳಿವೆ. ನಿಮ್ಮ ಪಕ್ಷ ಮೂರು ಮಾಜಿ ಸಿಎಂ ಗಳಾದ ಸದಾನಂದಗೌಡ, ಬಸವ ರಾಜ ಬೊಮ್ಮಾಯಿ, ಯಡಿಯೂರಪ್ಪ ಸೇರಿದಂತೆ ಅನೇಕ ಮಾಜಿ ಸಚಿವರ ಮಕ್ಕಳು, ನಿಮ್ಮ ಎನ್ ಡಿಎ ಪಾಲು ದಾರರಾದ ಹೆಚ್ ಡಿ ಕುಮಾರಸ್ವಾಮಿ ಅವರೆಲ್ಲಾ ಯಾಕೆ ಕೋರ್ಟು ನಿಂದ ಸ್ಟೇ ತಂದಿದ್ದಾರೆ. ಅಂತಹದ್ದೇನಿತ್ತು? ಹೇಳು ವಿರಾ? ಕೇವಲ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿಲ್ಲ, ಪುರುಷರ ಮೇಲೂ ನಡೆದಿದೆ. ನಿಮ್ಮ ಸರ್ಕಾರದಲ್ಲಿ ಸಚಿವನಾಗಿದ್ದ ಮುನಿರತ್ನನ ವಿರುದ್ದ ಬಿಜೆಪಿಯ ಯಾವ ನಾಯಕನೂ ಮಾತ ನಾಡುವುದಿಲ್ಲ. ಅವನು ಅತ್ಯಾಚಾರ ಮಾಡ್ತಾನೆ, ಏಡ್ಸ್ ಹಂಚುತ್ತಾನೆ. ಅವನ ಬಗ್ಗೆ ಯಾಕೆ ನೀವು ಮಾತನಾಡುತ್ತಿಲ್ಲ, ನಿಮಗೇನಾದರೂ ಭಯವಿದೆಯಾ ಎಂದರು.

 ಮಹಾಸಭಾ ಸಭೆ ಗೊಂದಲ:
ಜಾತಿಗಣತಿ ಕುರಿತಂತೆ ಆಖಿಲ ಭಾರತ ವೀರಶೈವ -ಲಿಂಗಾಯಿತ ಮಹಾಸಭಾ ಕರೆದಿರುವ ಸಭೆ ಗೊಂದಲದಿಂದ ಕೂಡಿದೆ ಎಂದು ಆಯನೂರು ಮಂಜು ನಾಥ್ ಪ್ರತಿಕ್ರಿಯಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರು ಮಹಾಸಭಾದ ಅಧ್ಯಕ್ಷರಾಗಿ ಮತ್ತು ಕಾಂಗ್ರೆಸ್ ನ ಮುಖಂಡರಾಗಿಯೂ ಇದ್ದಾರೆ. ಅವರು ಒಂದು ಸ್ಪಷ್ಟ ನಿಲುವು ಹೊಂದಬೇಕು. ಜಾತಿಗಣತಿ ಆಗ ಬೇಕೆಂ ಬುದು ಕಾಂಗ್ರೆಸ್ ಪಕ್ಷದ ನಿಲುವಾಗಿದೆ. ಇದಕ್ಕೆ ಎಲ್ಲರೂ ಬದ್ದರಾಗಿರಬೇಕು. ಜಾತಿಗಣತಿ ಬಗ್ಗೆ ವೀರಶೈವ- ಲಿಂಗಾ ಯಿತ ಮಹಾಸಭೆ ಕರೆದಿರುವ ಸಭೆಯ ಹಿಂದೆ ಬಿಜೆಪಿಯ ಕೈವಾಡವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಗೊಂದಲ ಸೃಷ್ಟಿ ಮಾಡುವ ಪ್ರಯತ್ನ ಇದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ  ಬೇಳೂರು ಗೋಪಾಲಕೃಷ್ಣ, ಶಂಕರಘಟ್ಟ ರಮೇಶ್, ಶಿ.ಜು. ಪಾಶಾ, ಜಿ. ಪದ್ಮನಾಭ್, ಸೋಮಶೇಖರ್, ಬಾಲಾಜಿ ಇದ್ದರು.

ವೀರಶೈವ-ಲಿಂಗಾಯಿತ ಮಹಾಸಭಾ ನಾವು ಹಿಂದೂಗಳಲ್ಲ. ನಮ್ಮದು ಲಿಂಗಾಯಿತ ಧರ್ಮ ಎಂದು ಈಗಾಗಲೆ ನಿರ್ಧಾರ ತೆಗೆದುಕೊಂಡಿದೆ. ನಾಳೆ ನಡೆಯಲಿರುವ ವೀರಶೈವ-ಲಿಂಗಾಯಿತ ಮಹಾಸಭಾದ ಸಭೆಗೆ ಹೋಗುವ ಮುನ್ನ ಯಡಿಯೂರಪ್ಪ ಮತ್ತವರ ಮಕ್ಕಳು ಜಾತಿ ಗಣತಿ ಸಂದರ್ಭದಲ್ಲಿ ಧರ್ಮದ ಕಾಲಂ ನಲ್ಲಿ ವೀರಶೈವ ಲಿಂಗಾಯಿತ ಅಂತರೆ ಬರೆಸುತ್ತಿರೋ? ಅಥವಾ ಬಿಜೆಪಿಯ ಹಿಂದೂ ಎಂದು ಬರೆಸುತ್ತಿರೋ ಎಂಬುದನ್ನು ಸ್ಪಷ್ಟಪಡಿಸಬೇಕು. ಜಾತಿಯ ಹೆಸರಿನಲ್ಲಿ ರಾಜಕೀಯ ಲಾಭ ಪಡೆದುಕೊಳ್ಳುತ್ತಾ ಬಂದಿರುವ ಯಡಿಯೂರಪ್ಪ ಕುಟುಂಬ ಎರಡು ದೋಣಿಯ ಮೇಲೆ ಕಾಲಿಟ್ಟು ಸಾಗುತ್ತಿದೆ. ಅವರು ಇದಕ್ಕೆ ಉತ್ತರ ಕೊಡಬೇಕು.

-ಆಯನೂರು ಮಂಜುನಾಥ್

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST