LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಒತ್ತಡವನ್ನು ನಿವಾರಿಸುವ ಯೋಗಮುದ್ರೆಗಳು

ಆಹಾರವನ್ನು ತುಟಿ ಮುಚ್ಚಿ ಚೆನ್ನಾಗಿ ಜಗಿದು ಸೇವಿಸಿ. ಬಾಯಿ ತೆರೆದು ಆಹಾರವನ್ನು ಜಗಿಯಬಾರದು. ಯಾಕೆಂದರೆ ಬಾಯಿಯಲ್ಲಿರುವ ಲಾಲಾರಸ ಆಹಾರಕ್ಕೆ ಬೆರಕೆಯಾಗುವುದಿಲ್ಲ

ಐಬಿಎಸ್​ನ ಸಾಮಾನ್ಯ ಕಾರಣಗಳಲ್ಲಿ ಒತ್ತಡವೂ ಒಂದು. ನರಮಂಡಲವನ್ನು ಶಾಂತಗೊಳಿಸುವ ಮೂಲಕ ಒತ್ತಡವನ್ನು ಮುಚ್ಚಲು ಆಯ್ದ ಯೋಗಾಸನಗಳು ಸಹಾಯ ಮಾಡುತ್ತವೆ ಹಾಗೂ ಕಿರಿಕಿರಿ ಉಂಟುಮಾಡುವ ಜೀರ್ಣಾಂಗವ್ಯವಸ್ಥೆಯನ್ನೂ ಶಾಂತಗೊಳಿಸಿ, ಅದರ ಸುಸ್ಥಿತಿಗೆ ಸಹಾಯ ಮಾಡುತ್ತವೆ. ನಾಡೀಶುದ್ಧಿ, ಪ್ರಾಣಾಯಾಮ ಹಾಗೂ ಧ್ಯಾನದಿಂದ ಒತ್ತಡ ನಿಯಂತ್ರಣವಾಗುತ್ತದೆ. ದಿನಕ್ಕೆ ಮೂರು ಬಾರಿ ವಿಶ್ರಾಂತಿ ಭಂಗಿ ಶವಾಸನ, ಮಕರಾಸನವನ್ನು ಮಾಡಿ.

ಸೂಚಿತ ಆಸನಗಳು: ಪರಿಘಾಸನ, ತಾಡಾಸನ, ಪಶ್ಚಿಮೋತ್ಥಾಸನ, ವಕ್ರಾಸನ, ಜಠರ ಪರಿವರ್ತನಾಸನ, ನಾವಾಸನ, ಶಶಾಂಕಾಸನ, ಮಂಡೂಕಾಸನ, ಹಲಾಸನ, ಭುಜಂಗಾಸನ, ಅಧೋಮುಖ ಶ್ವಾನಾಸನ, ಪವನಮುಕ್ತಾಸನ, ಶವಾಸನ ಮಾಡಿ. ಮೂರು ತಿಂಗಳ ಯೋಗಾಭ್ಯಾಸದಲ್ಲಿ ಸರಿಹೋಗುತ್ತದೆ. ಯೋಗದ ಪ್ರಕಾರ ಮುಖ್ಯ ಅಂಶಗಳಾದ ಆಹಾರ, ವಿಹಾರ ಮತ್ತು ನಿದ್ರೆಗಳ ಮೇಲೆ ಮನುಷ್ಯನ ಆರೋಗ್ಯವು ಅವಲಂಬಿಸಿದೆ.

ಆಹಾರ ಹೇಗಿರಬೇಕು?: ಕಾಶ್ಯಪ ಸಂಹಿತೆಯಲ್ಲಿ ‘ಆರೋಗ್ಯಂ ಭೋಜನಾಧೀನಂ’ ಎಂದು ಹೇಳಿದೆ. ಅಂದರೆ ‘ಊಟ ಬಲ್ಲವನಿಗೆ ರೋಗ ಇಲ್ಲ’. ನಮ್ಮ ದೇಹದ ಸಮಸ್ತ ಚಟುವಟಿಕೆಗಳಿಗೆ ಆಹಾರವೇ ಮೂಲ ಶಕ್ತಿಯಾಗಿದೆ. ಒಳ್ಳೆಯ ಆಹಾರವು ಆರೋಗ್ಯವನ್ನು ಪುನಃ ಪ್ರತಿಷ್ಠಾಪಿಸುತ್ತದೆ ಮತ್ತು ಆರೋಗ್ಯವಂತ ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಡುತ್ತದೆ. ಸತ್ವಯುವಾದ ಸಾತ್ವಿಕ ಆಹಾರವನ್ನು ಸೇವಿಸಬೇಕು. ಅತಿ ಹುಳಿ, ಅತಿ ಖಾರ, ಅತಿ ಮಸಾಲೆ ಬೇಡ.

ಆಹಾರವನ್ನು ತುಟಿ ಮುಚ್ಚಿ ಚೆನ್ನಾಗಿ ಜಗಿದು ಸೇವಿಸಿ. ಬಾಯಿ ತೆರೆದು ಆಹಾರವನ್ನು ಜಗಿಯಬಾರದು. ಯಾಕೆಂದರೆ ಬಾಯಿಯಲ್ಲಿರುವ ಲಾಲಾರಸ ಆಹಾರಕ್ಕೆ ಬೆರಕೆಯಾಗುವುದಿಲ್ಲ (ಬಾಯಿ ತೆರೆದಾಗ ಗಾಳಿಯ ಸ್ಪರ್ಶದಿಂದ ಜೊಲ್ಲುರಸ ಆಹಾರಕ್ಕೆ ಬೆರಕೆಯಾಗುವುದಿಲ್ಲ). ನಾವು ತುಟಿ ಮುಚ್ಚಿ ಆಹಾರವನ್ನು ಜಗಿದು ನುಂಗಿದಾಗ ಆಹಾರದಲ್ಲಿರುವ ಪೋಷಕಾಂಶಗಳು ರಕ್ತಕ್ಕೆ ಸುಲಭವಾಗಿ ಸೇರುತ್ತವೆ. ಆಹಾರ ಸೇವನೆಯ ಸಂದರ್ಭದಲ್ಲಿ ನೀರನ್ನು ಕುಡಿಯಬಾರದು (ಅತ್ಯಗತ್ಯವಿದ್ದಲ್ಲಿ ಸ್ವಲ್ಪ ನೀರನ್ನು ಕುಡಿಯಬಹುದು). ಇಂದು ಸಾಮಾನ್ಯವಾಗಿ ವೇಗವಾಗಿ ಅಥವಾ ತುಂಬ ತಣ್ಣನೆಯ ಆಹಾರ / ಪಾನೀಯಗಳನ್ನು ತಿನ್ನುವ ಜನರಲ್ಲಿ ಕಂಡುಬರುತ್ತದೆ. ಹಾಗಿದ್ದಲ್ಲಿ, ನಿಮ್ಮ ತಿನ್ನುವ ಮಾದರಿಯನ್ನು ಬದಲಾವಣೆ ಮಾಡಬೇಕಾಗಬಹುದು. ಅದು ಮುಂದುವರಿದರೆ ತಜ್ಞರನ್ನು ಸಂಪರ್ಕಿಸಿ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಲೇಜು ಶೌಚಾಲಯದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ: ವಿದ್ಯಾರ್ಥಿ ಅರೆಸ್ಟ್ತೇಜಸ್ ಎಂಕೆ1ಎ ಯುದ್ಧ ವಿಮಾನ- ಮೊದಲ ಹಾರಾಟ ಯಶಸ್ಸು300 ನಕ್ಸಲರು ಶರಣಾಗತಿ: 'ಈ ಹಿಂದೆ ಬಾಂಬ್ ಸ್ಫೋಟಿಸುತ್ತಿದ್ದ ಸ್ಥಳದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತಯಾರಿ'- ಮೋದಿಸ್ಟಾರ್ ಕಿಡ್ ಐಎಎಸ್‌ ಶ್ರುತಂಜಯ್ ನಾರಾಯಣನ್ ಯಶಸ್ಸಿನ ಕಥನನಮ್ಮ ಮೇಲೆ ಮಾಟ ಮಂತ್ರ ಆಗಿದೆಯೇ, ಇಲ್ಲವೇ ಎಂದು ತಿಳಿಯೋದು ಹೇಗೆ.?ವಾಯುಭಾರ ಕುಸಿತದ ಹಿನ್ನೆಲೆ : ಈ ಜಿಲ್ಲೆಗಳಲ್ಲಿ ಮಳೆ: ಹವಾಮಾನ ಇಲಾಖೆ.!ವೈದ್ಯಕೀಯ ಕೋರ್ಸ್ ಸೇರಬಯಸುವವರಿಗೆ ಗುಡ್ ನ್ಯೂಸ್.!ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆ ಖಂಡಿಸಿ ಜಾಗತಿಕ ಲಿಂಗಾಯಿತ ಮಹಾಸಭಾ ಜಿಲ್ಲಾಧಿಕಾರಿಗೆ  ಮನವಿ.!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ.! 18-10-2025...!ವಚನ.: -ಮಾದಾರ ಧೂಳಯ್ಯ.!