ಕೊಪ್ಪಳ ಫೆಬ್ರವರಿ 12ಕೊಪ್ಪಳದ ಗಣೇಶ ನಗರದಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಯ ಕುರಿತು ಗ್ರಂಥಾಲಯದಲ್ಲಿನ ಓದುಗರಿಗೆ ಪರಿಚಯ ಮಾಡುವ ಕಾರ್ಯಕ್ರಮ ಜರುಗಿತು.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ನೋಡಲ್ ಅಧಿಕಾರಿ ಶಿವಯೋಗಿ ಹೊಸಹಳ್ಳಿ ಅವರು ವಿದ್ಯಾರ್ಥಿ ಓದುಗರಿಗೆ ಯುವನಿಧಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ, ಯೋಜನೆಯ ಫಲಾನುಭವಿಗಳಾಗಬೇಕಾದರೆ ಇರುವ ಅರ್ಹತೆಗಳ ಕುರಿತು ಯುವನಿಧಿ ಯೋಜನೆಯ ಕುರಿತು ಒಟ್ಟಾರೆಯಾಗಿ ಪರಿಚಯಿಸಿದರು. ಪರಿಚಯ ಮಾಡಿಕೊಟ್ಟ ನಂತರ ಓದುಗರು ಯುವನಿಧಿ ಕುರಿತು ಪ್ರಶ್ನೆಗಳನ್ನು ಕೇಳಿದರು. ಆ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಲಾಯಿತು.
2023, 2024 ಹಾಗೂ 2025 ರಲ್ಲಿ ಪದವಿ/ಸ್ನಾತಕೋತ್ತರ ಪದವಿ/ಡಿಪ್ಲೋಮಾ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನೋಂದಾಯಿಸಿಕೊಳ್ಳಲು ಸೇವಾ ಸಿಂಧು ಪೋರ್ಟಲ್‌ನಲ್ಲಿ https://sevasindhugs.karnataka.gov.in ಗೆ ಭೇಟಿ ನೀಡಬೇಕು. ಸಹಾಯವಾಣಿ 18005997154 ಸಂಪರ್ಕಿಸಲು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಗ್ರಂಥಾಲಯಾಧಿಕಾರಿ ಯಮನೂರಪ್ಪ ಉಪಸ್ಥಿತರಿದ್ದರು. ಗ್ರಂಥಾಲಯ ಸಹಾಯಕ ನಾಗರಾಜ ನಾಯಕ ಡಿ.ಡೊಳ್ಳಿನ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗ್ರಂಥಾಲಯ ಸಹಾಯಕಿ ವಿಜಯಲಕ್ಷ್ಮೀ ವಡ್ಡಟ್ಟಿ ಸ್ವಾಗತಿಸಿ, ವಂದಿಸಿದರು.