LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

‘ಅವಲಕ್ಕಿ ಕೇಸರಿ ಬಾತ್’ ಮಾಡುವ ವಿಧಾನ

ಅವಲಕ್ಕಿಯಿಂದ ಮಾಡಬಹುದಾದ ರುಚಿಕರವಾದ ಕೇಸರಿಬಾತ್ ಇದೆ. ಮಾಡುವುದಕ್ಕೂ ಸುಲಭ, ತಿನ್ನುವುದಕ್ಕೂ ಚೆನ್ನಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು:

ಅವಲಕ್ಕಿ-1/2 ಕಪ್, ಸಕ್ಕರೆ-1/2 ಕಪ್, ತುಪ್ಪ-1/4 ಕಪ್, ಕೇಸರಿ ಬಣ್ಣದ ಫುಡ್ ಕಲರ್-ಚಿಟಿಕೆ, ಏಲಕ್ಕಿ ಪುಡಿ-ಚಿಟಿಕೆ, ನೀರು-1 ಕಪ್, ಗೋಡಂಬಿ-6

ಮಾಡುವ ವಿಧಾನ:

ಮೊದಲಿಗೆ ಒಂದು ಪ್ಯಾನ್ ಗೆ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ಅದು ಬಿಸಿಯಾಗುತ್ತಿದ್ದಂತೆ ಗೋಡಂಬಿ ಹಾಕಿ ಕೆಂಪಾಗುವವರೆಗೆ ಹುರಿದುಕೊಂಡು ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಿ. ನಂತರ ಅವಲಕ್ಕಿಯನ್ನು ಹಾಕಿ ಹುರಿಯಿರಿ. ಇದು ತುಸು ಬಣ್ಣ ಬದಲಾಗುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಪ್ಯಾನ್ ನಲ್ಲಿ ಒಂದು ಕಪ್ ನೀರು ಹಾಕಿ ಬಿಸಿ ಮಾಡಿಕೊಳ್ಳಿ. ಅದು ಕುದಿ ಬರುತ್ತಿದ್ದಂತೆ ಅದಕ್ಕೆ ಪುಡಿ ಮಾಡಿಕೊಂಡ ಅವಲಕ್ಕಿಯನ್ನು ಸೇರಿಸಿ ಗಂಟಾಗದಂತೆ ಕದಡುತ್ತಾ ಇರಿ. ಇದಕ್ಕೆ ಚಿಟಿಕೆ ಫುಡ್ ಕಲರ್ ಸೇರಿಸಿ ಮಿಕ್ಸ್ ಮಾಡಿ. ಈ ಮಿಶ್ರಣ ದಪ್ಪಗಾಗುತ್ತಿದ್ದಂತೆ, ಸಕ್ಕರೆ, ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಹದ ಉರಿಯಲ್ಲಿ ಬೇಯಿಸಿ. ಇದು ತಳ ಬಿಡುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ ಏಲಕ್ಕಿ ಪುಡಿ, ಗೋಡಂಬಿ ಹಾಕಿದರೆ ರುಚಿಕರವಾದ ಅವಲಕ್ಕಿ ಕೇಸರಿಬಾತ್ ರೆಡಿ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬ್ಲಾಕ್‌ ಟೀ, ಬ್ಲಾಕ್‌ ಕಾಫಿ ಆರೋಗ್ಯಕ್ಕೆ ಉತ್ತಮ ಯಾವುದು..?ಬೆಳಿಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು, ಏನನ್ನು ನೋಡಬಾರದು?ವಚನ-ಮನಸಂದ ಮಾರಿತಂದೆ !ಶಿಕ್ಷಣ ವೃತ್ತಿ ಬಿಟ್ಟು ಬೇರೆ ವ್ಯವಹಾರ ತೊಡಗಿದ ಶಿಕ್ಷಕರಿಗೆ ಶಿಸ್ತು ಕ್ರಮ.!ನಿಮ್ಮ ಮನೆಯಲ್ಲಿ ನಿಮ್ಮ ಪತಿ ಅಥವಾ ಪತ್ನಿ ನೀವು ಹೇಳಿದ ಮಾತು ಕೇಳುತ್ತಿಲ್ವಾ ಈ ಒಂದು ಕಡ್ಡಿಯಿಂದ ಹೀಗೆ ಮಾಡಿ ಸಾಕು ಆಮೇಲೆ ನೀವು ಹೇಳಿದ್ದನ್ನು ಎಲ್ಲವನ್ನು ಕೂಡ ಕೇಳುತ್ತಾರೆ .!ಕೇಂದ್ರ ಬಜೆಟ್‌ ಬಗ್ಗೆ ರಾಹುಲ್‌ ಗಾಂಧಿ ಪ್ರತಿಕ್ರಿಯೆ!ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಶಾಸಕ ಬಿ.ಆರ್ ಪಾಟೀಲ್ ರಾಜೀನಾಮೆಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ: ಮತ್ತೊಂದು ಶೂಟೌಟ್ಕೇಂದ್ರ ಬಜೆಟ್ ಬಗ್ಗೆ ಸಿಎಂ ಹೇಳಿದ್ದು ಇದು.!ಜನಪರ ಯೋಜನೆಗಳ ಜಾರಿಗೆ ಸರ್ಕಾರ ಬದ್ದ : ಹೆಚ್.ಎಂ. ರೇವಣ್ಣ