LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಆಕಾಶವಾಣಿಯಲ್ಲಿ ಉದ್ಘೋಷಕ/ಕಾರ್ಯಕ್ರಮ ನಿರೂಪಕರಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ

ಮಂಗಳೂರು ಆಕಾಶವಾಣಿಯಲ್ಲಿ, ಕನ್ನಡ, ತುಳು ಹಾಗೂ ಕೊಂಕಣಿ ಭಾಷೆಗಳಲ್ಲಿ, ನಿಯೋಜನೆ ಮೇರೆಗೆ ಉದ್ಘೋಷಕರು/ ಕಾರ್ಯಕ್ರಮ ನಿರೂಪಕರಾಗಿ ಕಾರ್ಯನಿರ್ವಹಿಸಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದು ಯಾವುದೇ ರೀತಿಯ ಉದ್ಯೋಗವಾಗಿರದೇ ಆಕಾಶವಾಣಿಯ ಅಗತ್ಯಕ್ಕೆ ತಕ್ಕಂತೆ ಅವರ ಸೇವೆಯನ್ನು ಬಳಸಿಕೊಳ್ಳಲಾಗುವುದು.

ಅಭ್ಯರ್ಥಿಗಳು ಪದವಿ ಉತ್ತೀರ್ಣರಾಗಿರಬೇಕು ಹಾಗೂ 50 ವರ್ಷ ವಯಸ್ಸಿನೊಳಗಿನವರಾಗಿರಬೇಕು. ಈ ಕುರಿತು ದಾಖಲೆಗಳ ನಕಲು ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿರಬೇಕು. ತಾವು ಅರ್ಜಿ ಸಲ್ಲಿಸಲು ಇಚ್ಛಿಸುವ ಭಾಷೆಯನ್ನು ಚೆನ್ನಾಗಿ ತಿಳಿದಿರಬೇಕು. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ಆದ್ಯತೆ ನೀಡಲಾಗುವುದು.

ಅಭ್ಯರ್ಥಿಗಳು 354 ರೂಪಾಯಿಗಳ ಡಿ.ಡಿ.ಯನ್ನು DDO, Akashvani Bengaluru (Payable at Bengaluru) ಇವರಿಗೆ ಪಾವತಿಯಾಗುವಂತೆ ಪಡೆದು ಅರ್ಜಿಯೊಂದಿಗೆ ಕಳಿಸಿಕೊಡಬೇಕು. ಅಥವಾ ಪ್ರಸಾರ ಭಾರತಿಯ, ಭಾರತೀಯ ಸ್ಟೇಟ್‌ ಬ್ಯಾಂಕ್‌ ಖಾತೆ ಸಂಖ್ಯೆ 10902815290 ಐಎಫ್‌ಎಸ್‌ಸಿ ಸಂಖ್ಯೆ SBIN0040016 ಗೆ ಜಮೆ ಮಾಡಿ ರಸೀದಿಯನ್ನು ಲಗತ್ತಿಸಬಹುದು. ಅರ್ಜಿಯನ್ನು ದಿನಾಂಕ 31.10.2024 ರ ಒಳಗೆ ತಲುಪುವಂತೆ ಕಳುಹಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.


 

ಅರ್ಜಿ ಸಲ್ಲಿಸುವ ವಿಳಾಸ: ನಿಲಯ ನಿರ್ದೇಶಕರು, ಆಕಾಶವಾಣಿ, ಬಿಜೈ ಪೋಸ್ಟ್, ಕದ್ರಿ ಹಿಲ್ಸ್, ಮಂಗಳೂರು 575 004.


ಅರ್ಜಿ ವಿವರಗಳಿಗಾಗಿ [email protected] ಗೆ ಸಂಪರ್ಕಿಸಬಹುದು ಅಥವಾ ನಿಲಯಕ್ಕೆ ಭೇಟಿ ನೀಡಬಹುದು.
ಅಭ್ಯರ್ಥಿಗಳು ಸಾಮಾನ್ಯ ಜ್ಞಾನ ಹಾಗೂ ಸಾಂಸ್ಕೃತಿಕ ವಿಚಾರಗಳನ್ನು ತಿಳಿದವರಾಗಿದ್ದು ಆಕಾಶವಾಣಿಯ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡಲು ಸಿದ್ದರಾಗಿರಬೇಕು.
ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ, ‍‍ಧ್ವನಿ ಪರೀಕ್ಷೆ ಹಾಗೂ ಸಂದರ್ಶನಗಳನ್ನು ಒಳಗೊಂಡಿರುತ್ತದೆ.
ಆಯ್ಕೆಗೊಂಡವರಿಗೆ ನಿಯಮಾನುಸಾರ ಸಂಭಾವನೆ ನೀಡಲಾಗುವುದು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಮ್ಮು-ಕಾಶ್ಮೀರದ ಗಡಿಯಲ್ಲಿ ಭಾರಿ ಗುಂಡಿನ ಚಕಮಕಿ; ಪಾಕ್‌ನ 7 ಮಂದಿ ನುಸುಳುಕೋರರ ಹತ್ಯೆಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ- ಫೆ.10ರಿಂದ 12ರವರೆಗೆ ಮೂರು ದಿನಗಳ ಕಾಲ ಪವಿತ್ರ ತೀರ್ಥ ಸ್ನಾನಮೈಕ್ರೋ ಫೈನಾನ್ಸ್ ಕುರಿತಾದ ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ ರಾಜ್ಯಪಾಲರುಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ- ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!ಅತ್ಯಾಚಾರ ವಿರೋಧಿಸಿದ್ದಕ್ಕೆ ಗರ್ಭಿಣಿ ಮಹಿಳೆಯನ್ನು ಚಲಿಸುವ ರೈಲಿನಿಂದ ಹೊರಗೆಸೆದ ಕಿರಾತಕ..!!ಅರ್ಚಕನೊಂದಿಗೆ ಅಶ್ಲೀಲ ಚ್ಯಾಟ್ ಮಾಡಿ 10 ಲಕ್ಷ ದೋಖಾ - ಯಕ್ಷಗಾನದ ಸ್ತ್ರೀವೇಷಧಾರಿ ಯುವಕ ಅರೆಸ್ಟ್ಕರ್ನಾಟಕದಲ್ಲಿ ದ್ವೇಷ ಭಾಷಣ ಮಾಡಿದ್ರ 3 ವರ್ಷ ಜೈಲು….!ಮಹಾಕುಂಭ ಮೇಳದಲ್ಲಿ ಮತ್ತೆ ಅಗ್ನಿ ಅವಘಡ - ತಪ್ಪಿದ ಭಾರೀ ಅನಾಹುತದೆಹಲಿ-ನೋಯ್ಡಾದ ಶಾಲೆಗಳಿಗೆ ಬಾಂಬ್ ಬೆದರಿಕೆ - ಅಧಿಕಾರಿಗಳಿಂದ ಪರಿಶೀಲನೆವೀರೇಂದ್ರ ಹೆಗ್ಗಡೆ ಸಹೋದರನ 7.59 ಎಕರೆ ಭೂ ಮಂಜೂರಾತಿ ರದ್ದುಗೊಳಿಸಿದ ಕೋರ್ಟ್