LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಆಸ್ಕರ್ ವಿಜೇತ ಖ್ಯಾತ ಹಾಲಿವುಡ್‌ ನಿರ್ಮಾಪಕ ಜಾನ್ ಲ್ಯಾಂಡೌ ನಿಧನ

ಲಾಸ್ ಎಂಜಲೀಸ್: ಆಸ್ಕರ್ ವಿಜೇತ, ಹಾಲಿವುಡ್‌ನ ಖ್ಯಾತ ನಿರ್ಮಾಪಕ ಜಾನ್ ಲ್ಯಾಂಡೌ(63) ಅವರು ಜುಲೈ ೫ರಂದು ಕೊನೆಯುಸಿರೆಳೆದಿದ್ದಾರೆ.

ಜಾನ್ ಲ್ಯಾಂಡೌ ಅವರು ಹಾಲಿವುಡ್‌ನ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ದೀರ್ಘಾವಧಿಯ ನಿರ್ಮಾಪಕ ಪಾಲುದಾರರಾಗಿದ್ದರು. ಕಳೆದ ಕೆಲ ಸಮಯದಿಂದ ಜಾನ್ ಲ್ಯಾಂಡೌ ಅವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಜೇಮ್ಸ್ ಕ್ಯಾಮರೂನ್ ಅವರ 'ಟೈಟಾನಿಕ್' ಹಾಗೂ 'ಅವತಾರ್' ಸಿನಿಮಾಗಳಿಗೆ ಜಾನ್ ಲ್ಯಾಂಡೌ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದರು. ಜೇಮ್ಸ್ ಕ್ಯಾಮರೂನ್ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಅವರು, ಹಾಲಿವುಡ್ ನಲ್ಲಿ ಇನ್ನು ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಜಾನ್ ಲ್ಯಾಂಡೌ ಅವರು 'ಹನಿ ಐ ಶ್ರಂಕ್ ದಿ ಕಿಡ್ಸ್' 'ಡಿಕ್ ಟ್ರೇಸಿ' ಸಿನಿಮಾಗಳಿಗೆ ಬಂಡವಾಳ ಹೂಡಿಕೆ ಮಾಡಿದ್ದರು. ತನ್ನ ಆತ್ಮೀಯ ಸ್ನೇಹಿತನ ನಿಧನಕ್ಕೆ ಜೇಮ್ಸ್ ಕ್ಯಾಮರೂನ್ ಸಂತಾಪ ಸೂಚಿಸಿದ್ದು, 'ಒಬ್ಬ ದೊಡ್ಡ ನಿರ್ಮಾಪಕ ಮತ್ತು ಒಬ್ಬ ಮಹಾನ್ ಮನುಷ್ಯ ನಮ್ಮನ್ನು ಅಗಲಿದ್ದಾರೆ' ಎಂದರು. ಇದರೊಂದಿಗೆ ಹಾಲಿವುಡ್ ನ ಖ್ಯಾತ ಕಲಾವಿದರು ಹಾಗೂ ನಿರ್ದೇಶಕ, ನಿರ್ಮಾಪಕರು ಸಂತಾಪ ಸೂಚಿಸಿರುತ್ತಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿರಿಯಾನಿ, ಚಿಕನ್ ಫ್ರೈಗೆ ಬೇಡಿಕೆಯಿಟ್ಟ ಮಗುವಿನ ವಿಡಿಯೋ ವೈರಲ್; ಅಂಗನವಾಡಿ ಮೆನು ಬದಲಾವಣೆ ಸಾಧ್ಯತೆಕುಂಭ ಮೇಳ ಕಾಲ್ತುಳಿತ : ಮೃತಪಟ್ಟವರ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲವೇಕೆ?: ಅಖಿಲೇಶ್ ಯಾದವ್ ಪ್ರಶ್ನೆಮದುವೆಗೆ ಸಿಗಲಿದೆ 60,000 ಸಹಾಯಧನ | ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?ಮುಸ್ಲಿಂ ಸಮುದಾಯ ವಕ್ಫ್ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿದೆ – ಅಸಾದುದ್ದೀನ್ ಓವೈಸಿಬೆಂಗಳೂರು: 30ಕ್ಕೂ ಹೆಚ್ಚು ಐಷಾರಾಮಿ ಕಾರುಗಳ ಜಪ್ತಿ..!!ಬೆಳ್ಳಂಬೆಳಗ್ಗೆ ಶೂಟ್‌ ಔಟ್‌ : ಇಬ್ಬರ ಬಂಧನಮೈಕ್ರೋ ಫೈನಾನ್ಸ್ ಕಿರುಕುಳ: ಶಿಕ್ಷೆಯ ಪ್ರಮಾಣ 10 ವರ್ಷಕ್ಕೆ ಹೆಚ್ಚಳ- ಜಿ.ಪರಮೇಶ್ವರ್ಜಾನುವಾರುಗಳ ಕಳವು, ಹತ್ಯೆ, ಮಾಡುವವರನ್ನು ಸಾರ್ವಜನಿಕವಾಗಿ ಗುಂಡಿಕ್ಕಬೇಕು- ಮಂಕಾಳ ವೈದ್ಯದೆಹಲಿ ಚುನಾವಣೆಗೂ ಮುನ್ನ ಸಿಎಂ ಅತಿಶಿ ವಿರುದ್ಧ ಪ್ರಕರಣ ದಾಖಲುಸಿದ್ದರಾಮಯ್ಯ ಕುಟುಂಬ ಬೇನಾಮಿ ಆಸ್ತಿ ಬಗ್ಗೆ ಸ್ನೇಹಮಯಿ ಕೃಷ್ಣ ದಾಖಲೆ ಬಿಡುಗಡೆ