LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ : ಜಿಲ್ಲೆಗೆ ಶೇ.72.85 ರಷ್ಟು ಫಲಿತಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ : ಜಿಲ್ಲೆಗೆ ಶೇ.72.85 ರಷ್ಟು ಫಲಿತಾಂಶ

ಚಿತ್ರದುರ್ಗ:2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಶೇ.72.85 ಫಲಿತಾಂಶ ಲಭಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ 22,275 ವಿದ್ಯಾರ್ಥಿಗಳಲ್ಲಿ 16,227 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.72.85 ಫಲಿತಾಂಶದೊAದಿಗೆ ಚಿತ್ರದುರ್ಗ ಜಿಲ್ಲೆಯು 21ನೇ ಸ್ಥಾನ ಪಡೆದುಕೊಂಡಿದೆ. 11107 ಬಾಲಕರು, 11168 ಬಾಲಕಿಯರು ಸೇರಿದಂತೆ ಒಟ್ಟು 22, 275 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದರು. ಈ ಪೈಕಿ 7207 ಬಾಲಕರು, 9020 ಬಾಲಕಿಯರು ಸೇರಿದಂತೆ ಒಟ್ಟು 16,227 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ಪಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದು, ಚಿತ್ರದುರ್ಗ ಜಿಲ್ಲೆಯು ಈ ಬಾರಿ ರಾಜ್ಯದ ಜಿಲ್ಲೆಗಳ ಪೈಕಿ 21ನೇ ಸ್ಥಾನ ಪಡೆದಿದೆ.

ಚಳ್ಳಕೆರೆ ತಾಲ್ಲೂಕಿನಲ್ಲಿ 1753 ಬಾಲಕರು, 1932 ಬಾಲಕಿಯರು ಸೇರಿದಂತೆ ಒಟ್ಟು 3685 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 1830 ಬಾಲಕರು, 2349 ಬಾಲಕಿಯರು ಸೇರಿದಂತೆ ಒಟ್ಟು 4179 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಿರಿಯೂರು ತಾಲ್ಲೂಕಿನಲ್ಲಿ 1140 ಬಾಲಕರು, 1496 ಬಾಲಕಿಯರು ಸೇರಿದಂತೆ ಒಟ್ಟು 2636 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 900 ಬಾಲಕರು, 1174 ಬಾಲಕಿಯರು ಸೇರಿದಂತೆ ಒಟ್ಟು 2074 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಹೊಸದುರ್ಗ ತಾಲ್ಲೂಕಿನಲ್ಲಿ 917 ಬಾಲಕರು, 1231 ಬಾಲಕಿಯರು ಸೇರಿದಂತೆ ಒಟ್ಟು 2148 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 667 ಬಾಲಕರು, 838 ಬಾಲಕಿಯರು ಸೇರಿದಂತೆ 1505 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಹೊಳಲ್ಕೆರೆ ಫಸ್ಟ್: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಹೊಳಲ್ಕೆರೆ ತಾಲ್ಲೂಕು ಶೇ.81.21 ಫಲಿತಾಂಶ ಪಡೆಯುವ ಮೂಲಕ ಮೊದಲ ಸ್ಥಾನಗಳಿಸಿದೆ. ಉಳಿದಂತೆ ಚಿತ್ರದುರ್ಗ ಶೇ.68.27, ಹಿರಿಯೂರು-75.04, ಹೊಸದುರ್ಗ-70.06, ಮೊಳಕಾಲ್ಮುರು ತಾಲ್ಲೂಕು ಶೇ.71.91ರಷ್ಟು ಫಲಿತಾಂಶ ಪಡೆದಿದೆ.

ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ : ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿ ಮೇಲುಗೈ ಸಾಧಿಸಿದ್ದಾರೆ. ಒಟ್ಟು 15927 ಗ್ರಾಮೀಣ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, ಈ ಪೈಕಿ 11900 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.74.71 ರಷ್ಟು ಉತ್ತೀರ್ಣತೆಯ ಸಾಧನೆ ಮೆರೆದಿದ್ದಾರೆ.

ನಗರ ಪ್ರದೇಶದಲ್ಲಿ 6348 ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು, 4327 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.68.16 ರಷ್ಟು ಸಾಧನೆ ತೋರಿದ್ದಾರೆ.

ಜಿಲ್ಲೆಯ 157 ಸರ್ಕಾರಿ ಶಾಲೆಯ 8377 ವಿದ್ಯಾರ್ಥಿಗಳ ಪೈಕಿ 6174 ವಿದ್ಯಾರ್ಥಿಗಳು, 180 ಅನುದಾನಿತ ಶಾಲೆಗಳ 8860 ವಿದ್ಯಾರ್ಥಿಗಳ ಪೈಕಿ 5866 ವಿದ್ಯಾರ್ಥಿಗಳು, 137 ಅನುದಾನರಹಿತ ಶಾಲೆಗಳ 5038 ವಿದ್ಯಾರ್ಥಿಗಳ ಪೈಕಿ 4187 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಜಿಲ್ಲೆಯಲ್ಲಿ 14 ವಿದ್ಯಾರ್ಥಿಗಳು ಟಾರ‍್ಸ್: ಈ ಬಾರಿಯ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯ 14 ವಿದ್ಯಾರ್ಥಿಗಳು ಟಾಪರ್‌ಗಳಾಗಿದ್ದಾರೆ.

ಚಿತ್ರದುರ್ಗ ನಗರದ ವಿದ್ಯಾವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅಭಯ್.ಸಿ.ಐ, ಹಿರಿಯೂರಿನ ರಾಷ್ಟಿçÃಯ ಅಕಾಡೆಮಿ ಇಂಗ್ಲೀಷ್ ಶಾಲೆಯ ಹಿರಣ್ಯಮಯೈ.ಎಂ.ಎಸ್, ತನುಶ್ರೀ.ಟಿ. ಮೊಳಕಾಲ್ಮೂರಿನ ಸರ್.ಎಂ.ವಿ ಆಂಗ್ಲ ಮಾಧ್ಯಮ ಶಾಲೆಯ ಅಸರ್ ಮಹೀನ್.ಎಂ 625 ಅಂಕಗಳಿಗೆ 620 ಅಂಕ ಗಳಿಸಿದ್ದಾರೆ.

ಚಿತ್ರದುರ್ಗ ನಗರದ ಡಾನ್ ಬಾಸ್ಕೋ ಶಾಲೆಯ ಭುವನೇಶ್ವರಿ ಜಿ.ಎಸ್. ಹಿರಿಯೂರಿನ ರಾಷ್ಟಿçÃಯ ಅಕಾಡೆಮಿ ಇಂಗ್ಲೀಷ್ ಶಾಲೆಯ ಪೂಜಿತಾ.ಎಸ್, ಶ್ರೀ ಮೋಕ್ಷಗುಂಡA ವಿಶ್ವೇಶ್ವರಯ್ಯ ಶಾಲೆಯ ಎಸ್.ಪ್ರೀತಿ, ಹೊಳಲ್ಕೆರೆಯ ಎಸ್.ಜೆ.ಎಂ.ಇAಗ್ಲೀಷ್ ಮೀಡಿಯಂ ಶಾಲೆಯ ನಂದನ್.ಸಿ.ಕೆ 625 ಅಂಕಗಳಿಗೆ 618 ಅಂಕ ಗಳಿಸಿದ್ದಾರೆ.

ಚಿತ್ರದುರ್ಗ ನಗರದ ವಿದ್ಯಾ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಅಭಿನವ್.ಕೆ.ಆರ್, ಭರಮಸಾಗರದ ಡಿ.ವಿ.ಎಸ್ ಇಂಗ್ಲೀಷ್ ಮೀಡಯಂ ಶಾಲೆಯ ಭಾವನ.ಹೆಚ್.ಎಂ, ಹಿರಿಯೂರು ತಾಲ್ಲೂಕಿನ ರಾಷ್ಟಿçÃಯ ಅಕಾಡಮಿ ಶಾಲೆಯ ಸೃಜನ್ ಸಾಗರ್ ಆರ್.ಕೆ., ಶ್ರೀಮತಿ ಇಂದಿರಾಗಾAಧಿ ವಸತಿ ಶಾಲೆಯ ನವ್ಯಶ್ರೀ.ಆರ್. ಮೊರಾರ್ಜಿ ದೇಸಾಯಿ ಶಾಲೆಯ ಸಂಜಯ್.ಎಸ್ ಹಾಗೂ ಹಿರಿಯೂರು ನಗರದ ಪ್ರೆಸಿಡೆನ್ಸಿ ಇಂಗ್ಲೀಷ್ ಶಾಲೆಯ ಮನೋಜ್ಞ.ಜಿ.ಪಿ 625 ಅಂಕಗಳಿಗೆ 616 ಅಂಕ ಗಳಿಸಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಂ.ನಾಸಿರುದ್ದೀನ್ ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತ ಸಾಲು, ಚಾರ್ಮಾಡಿ ಘಾಟಿ ಅಪಾಯಕಾರಿ: ಜಿಯೋಲಾಜಿಕಲ್ ಸರ್ವೇ ವರದಿಮುಂಬೈನಲ್ಲಿ ಎಲ್ಲಾ ಹಗುರ ಮೋಟಾರು ವಾಹನಗಳಿಗೆ ಟೋಲ್ ಇಲ್ಲ- ಮಹಾರಾಷ್ಟ್ರ ಸರ್ಕಾರದಿಂದ ಘೋಷಣೆಬೆಂಗಳೂರು: ಪ್ರಾಂಶುಪಾಲರ ಕಿರುಕುಳ ಆರೋಪ - ಕಾಲೇಜಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಪ್ರಾಧ್ಯಾಪಕಿಕೃಷಿ ಇಲಾಖೆಯಲ್ಲಿ ಖಾಲಿ ಇರುವ 945 ಹುದ್ದೆಗಳಿಗೆ ಅರ್ಜಿ ಆಹ್ವಾನಮಹಿಳೆಯರು ಪುರುಷರ ಬಳಕೆಗಾಗಿ ಮಾತ್ರ ದೇವರಿಂದ ರಚಿಸಲಸ್ಪಟ್ಟ ವಸ್ತು - ಇಮಾಮ್ಸಿದ್ದರಾಮಯ್ಯರನ್ನ ಲೋಕಾಯುಕ್ತ ವಿಚಾರಣೆಗೆ ಒಳಪಡಿಸಿ- ಸ್ನೇಹಮಯಿ ಕೃಷ್ಣ ಮನವಿಮುಂಬೈನಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆಮಾಜಿ ಬಿಗ್‌ಬಾಸ್‌ ಸ್ಪರ್ಧಿ, ನಟಿಯ ಅಶ್ಲೀಲ ಖಾಸಗಿ ವಿಡಿಯೋ ವೈರಲ್..!70 ವರ್ಷ ದಾಟಿದ ವೃದ್ಧಾಪ್ಯದ ಕಾಯಿಲೆಗಳು ಆಯುಷ್ಮಾನ್ ಗೆ ಸೇರ್ಪಡೆ..!ದಿಢೀರ್ ಬಿಗ್‌ಬಾಸ್‌ ನಿರೂಪಣೆಗೆ ಗುಡ್ ಬೈ ಹೇಳಿದ ಕಿಚ್ಚ ಸುದೀಪ್ !