LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

Mangaluru Dasara 2024: ವೈಭವದ “ಮಂಗಳೂರು ದಸರಾ’ ಸಂಪನ್ನ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಭಾನುವಾರ ರಾತ್ರಿ ನಡೆದ ಮಂಗಳೂರು ದಸರಾ ಶೋಭಾಯಾತ್ರೆ ಸೋಮವಾರ ಬೆಳಗ್ಗೆ ಸಂಪನ್ನಗೊಂಡಿತು.

ಭಾನುವಾರ ಸಂಜೆ ಕುದ್ರೋಳಿಯಿಂದ ಶ್ರೀ ಶಾರದೆ ಶೋಭಾಯಾತ್ರೆಯಲ್ಲಿ ಹೊರಟಿದ್ದು, ಸೋಮವಾರ ಮುಂಜಾನೆ ಸುಮಾರು 3 ಗಂಟೆ ಸುಮಾರಿಗೆ ಕುದ್ರೋಳಿಗೆ ಆಗಮಿಸಿತ್ತು. ಬೆಳಗ್ಗೆ 7 ಗಂಟೆ ಸುಮಾರಿಗೆ ಜಲಸ್ತಂಭನವಾಯಿತು. ಈ ಮೂಲಕ ಮಂಗಳೂರು ದಸರಾ ಮೆರವಣಿಗೆ ಸಮಾಪನಗೊಂಡಿತು. ಶೋಭಾಯಾತ್ರೆಯುದ್ದಕ್ಕೂ ಲಕ್ಷಾಂತರ ಮಂದಿ ಭಾಗವಹಿಸಿದ್ದರು.

ಶ್ರೀ ಕ್ಷೇತ್ರ ಕುದ್ರೋಳಿಯಿಂದ ಹೊರಟ ದಸರಾ ಮೆರವಣಿಗೆ ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್‌ ನಾರಾಯಣ ಗುರು ಸರ್ಕಲ್‌, ಲಾಲ್‌ ಬಾಗ್‌, ಬಲ್ಲಾಳ್‌ಬಾಗ್‌, ಪಿವಿಎಸ್‌ ವೃತ್ತ, ಕೆ.ಎಸ್‌. ರಾವ್‌ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್‌ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್‌, ಅಳಕೆಯ ಮೂಲಕ ಮತ್ತೆ ಶ್ರೀ ಕ್ಷೇತ್ರ ತಲುಪಿತು. ನಗರದ 9 ಕಿ.ಮೀ. ವ್ಯಾಪ್ತಿಯಲ್ಲಿ ಮೆರವಣಿಗೆ ಸಾಗಿತು.

 

ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆದ ಭವ್ಯ ಶೋಭಾಯಾತ್ರೆಯನ್ನು ಊರು-ಪರವೂರ ಲಕ್ಷಾಂತರ ಜನರು ಕಣ್ತುಂಬಿಕೊಂಡರು. ನವ ದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹ ಸಾಗಿದ ಬಳಿಕ ಸ್ತಬ್ಧಚಿತ್ರಗಳು ತೆರಳಿತು. ಹುಲಿವೇಷ ಸೇರಿದಂತೆ ವಿಭಿನ್ನ ರೀತಿಯ ಸ್ತಬ್ಧಚಿತ್ರ, ನಾನಾ ದೇವಸ್ಥಾನಗಳು, ಸಂಘ ಸಂಸ್ಥೆಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು.

 

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಧಾನಮಂಡಲ ಅಧಿವೇಶನ ಭಾಷಣದಲ್ಲಿ ರಾಜ್ಯಪಾಲರು ಮೈಕ್ರೋ ಫೈನಾನ್ಸ್​ ಸುಗ್ರೀವಾಜ್ಞೆಗೆ ಒತ್ತುದೃಷ್ಟಿಹೀನರು ನ್ಯಾಯಾಧೀಶರಾಗಲು ಸುಪ್ರೀಂ ಕೋರ್ಟ್ ಅನುಮತಿಈ ಊರಲ್ಲಿ ನಾಯಿ ಜೊತೆ ಮಕ್ಕಳ ಮದುವೆ ಮಾಡಿಸ್ತಾರೆ..! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ'ಮಾರ್ಚ್ 24 ರಿಂದ 26 ರವರೆಗೆ ದೆಹಲಿ ಬಜೆಟ್ ಅಧಿವೇಶನ'- ಸಿಎಂ ರೇಖಾ ಗುಪ್ತಾರಾಜ್ಯದ ಅಭಿವೃದ್ಧಿ ವೇಗ ಚುರುಕು, ಹಣಕಾಸು ಪರಿಸ್ಥಿತಿ ಮತ್ತಷ್ಟು ಸದೃಢ: ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣಪ್ರಿಯಾಂಕಾ ಚೋಪ್ರಾ ನಿರ್ಮಾಣದ 'ಅನುಜಾ' ಚಿತ್ರಕ್ಕೆ ಕೈ ತಪ್ಪಿದ ಆಸ್ಕರ್ ಅವಾರ್ಡ್ವಿಶ್ವ ವನ್ಯಜೀವಿ ದಿನದಂದು ಗುಜರಾತ್‌ನ ಗಿರ್‌ನಲ್ಲಿ ಪ್ರಧಾನಿ ಮೋದಿ ಸಿಂಹ ಸಫಾರಿರಾಜ್ಯ ಸರ್ಕಾರದಿಂದ ಹಕ್ಕಿಜ್ವರ ನಿಯಂತ್ರಣಕ್ಕೆ ಮಾರ್ಗಸೂಚಿ ಬಿಡುಗಡೆಡ್ರ್ಯಾಗನ್ ಹಣ್ಣಿನ ಆರೋಗ್ಯ ಪ್ರಯೋಜನಗಳು..!ಗುಡ್‌ ನ್ಯೂಸ್‌: ಫೆಬ್ರವರಿ, ಮಾರ್ಚ್‌ ತಿಂಗಳ 10 ಕೆಜಿ ಅಕ್ಕಿ ವಿತರಣೆ