ಚಿಕ್ಕ ಪ್ಲಾಸ್ಟಿಕ್ಕಿನ ಒಂದು ಇಂಚಿನ ಪಟ್ಟಿಯನ್ನು ಮುಂಭಾಗ ಚೂಪಾಗಿರುವಂತೆ, ಹಿಂಭಾಗದಲ್ಲಿ ವಿ ಆಕೃತಿಯಲ್ಲಿ ಕತ್ತರಿಸಿ ಈ ಭಾಗದಲ್ಲಿ ಚಿಕ್ಕ ಕರ್ಪೂರದ ಬಿಲ್ಲೆಯನ್ನು ಸಿಕ್ಕಿಸಿ ಇದನ್ನು ನೀರಿನ ಮೇಲೆ ತೇಲುವಂತೆ ಇಟ್ಟರೆ ಇದು ದೋಣೆಯಂತೆ ಮುಂದೆ ಸಾಗುತ್ತಾ ಹೋಗುತ್ತದೆ.
ಆರೋಗ್ಯ ಪ್ರಯೋಜನಗಳು :
ಕರ್ಪೂರವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
ಕರ್ಪೂರವು ಸ್ನಾಯು ಮತ್ತು ಕೀಲುಗಳಿಗೆ ಸಂಬಂಧಿಸಿದ ನೋವಿನಿಂದ ಪರಿಹಾರ ನೀಡುತ್ತದೆ.
ಕರ್ಪೂರವನ್ನು ಬಿಸಿ ನೀರಿಗೆ ಹಾಕಿ ಆ ಹಬೆ ತೆಗೆದುಕೊಳ್ಳುವುದರಿಂದ ತೆಲೆನೋವು ವಾಸಿಯಾಗುತ್ತದೆ.
ಇದು ಶ್ವಾಸಕೋಶದ ಸೋಂಕನ್ನು ನಿವಾರಣೆ ಮಾಡುತ್ತದೆ.
ಪೂಜಾ ಸಮಯದಲ್ಲಿ ಬಳಸುವ ಕರ್ಪೂರವು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಕರ್ಪೂರದ ಬಳಕೆಯು ಉಸಿರಾಟದ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಕರ್ಪೂರವನ್ನು ಬಿಸಿ ನೀರಿನಲ್ಲಿ ಹಾಕಿ ಅದರಲ್ಲಿ ಕಾಲುಗಳನ್ನು ಇಟ್ಟು ಕುಳಿತುಕೊಳ್ಳುವುದರಿಂದ ಒಡೆದ ಹಿಮ್ಮಡಿಗಳಿಂದ ಪರಿಹಾರ ಪಡೆದುಕೊಳ್ಳಬಹುದು
ಕರ್ಪೂರವನ್ನು ಗಾಯವಾದ ಸ್ಥಳಕ್ಕೆ ಹಚ್ಚುವುದರಿಂದ ಗಾಯ ಬೇಗ ವಾಸಿಯಾಗುತ್ತದೆ.
ನಿಮ್ಮ ತಲೆಯಲ್ಲಿ ತುರಿಕೆ ಹೆಚ್ಚಾಗಿದ್ದರೆ, ತೆಂಗಿನ ಎಣ್ಣೆಯಲ್ಲಿ ಕರ್ಪೂರವನ್ನು ಬೆರೆಸಿ ಮಸಾಜ್ ಮಾಡಿ, ಈ ರೀತಿ ಮಾಡುವುದರಿಂದ ಎಷ್ಟೇ ತುರಿಕೆ ಇದ್ದರೂ ಕಡಿಮೆಯಾಗುತ್ತದೆ.