LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಾನ್ ಸ್ಟಿಕ್ ಪ್ಯಾನ್ ಬಳಸುವವರೇ ಆರೋಗ್ಯದ ಮೇಲೆ ನಿಗಾ ಇಡಿ…ಶಾಕಿಂಗ್ ವಿಚಾರ ಬೆಳಕಿಗೆ

ಅಡುಗೆ ಮನೆಯಲ್ಲಿ ನಾನ್-ಸ್ಟಿಕ್ ಪ್ಯಾನ್ ಬಳಸುವವರೇ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಅಮೆರಿಕದ ಪಾಯ್ಸನ್ ಸೆಂಟರ್ ನೀಡಿರುವ ವರದಿ ಯಲ್ಲಿ ಹೇಳಿದೆ.

ಅಮೆರಿಕದ ಪಾಯ್ಸನ್ ಸೆಂಟರ್ ನೀಡಿರುವ ವರದಿ ಪ್ರಕಾರ, ನೂರಾರು ಮಂದಿಯಲ್ಲಿ ಪಾಲಿಮರ್ ಫ್ಯೂಮ್ ಫೀವರ್ ಅನ್ನೋ ಅಪರೂಪದ ಕಾಯಿಲೆ ಕಾಣಿಸಿಕೊಂಡಿದೆ. ಇದಕ್ಕೆ ಕಾರಣ ಬಿಸಿಯಾದ ನಾನ್ ಸ್ಟಿಕ್ ಪ್ಯಾನ್ನಿಂದ ಆಚೆ ಬರುವ ಹೊಗೆ ಕಾರಣ ಎಂದು ಹೇಳಲಾಗುತ್ತಿದೆ. ಅದರ ಹೊಗೆಯನ್ನು ಸೇವಿಸಿದ ಮಹಿಳೆಯರಲ್ಲಿ ಈ ರೀತಿಯ ಜ್ವರ ಕಾಣಿಸಿಕೊಂಡಿದೆ. ನಾನ್ ಸ್ಟಿಕ್ ಪ್ಯಾನ್ಗೆ ಮಾಡಿರುವ ಕೋಟಿಂಗ್ನಲ್ಲಿ ಇದೆಯಂತೆ ವಿಷ.

ಹೌದು, ಅಡುಗೆ ಮನೆಯಲ್ಲಿ ನಾನ್ ಸ್ಟಿಕ್ ಪ್ಯಾನ್ಗಳು ಹೆಚ್ಚು ಸದ್ದು ಮಾಡುತ್ತಿವೆ. ಆಮ್ಲೆಟ್ ದೋಸೆ ಗರಿಗರಿ ಐಟಮ್ಸ್ಗಳನ್ನ ಮಾಡುವುದು ಅಂದ್ರೆ ಹೆಣ್ಣು ಮಕ್ಕಳಿಗೆ ಸಂಭ್ರಮ. ಟೆಫ್ಲಾನ್ ಪ್ಯಾನ್ ಸೇರಿದಂತೆ ಎಲ್ಲಾ ಪ್ಯಾನ್ಗಳು ಪಿಟಿಎಫ್ಇ ಅನ್ನೋ ಅಂಶದಿಂದ ಕೋಟಿಂಗ್ ಆಗಿರುತ್ತದೆ. ಇದರಲ್ಲಿ ಅನೇಕ ವಿಷಕಾರಿ ಅಂಶಗಳು ಇರುತ್ತವೆ. ನೀವು ಒಲೆಯ ಮೇಲೆ ಪ್ಯಾನ್ ಬಿಸಿಗೆ ಇಟ್ಟಾಗ ಈ ಕೋಟಿಂಗ್ನಲ್ಲಿರುವ ಅಂಶ ಹೊಗೆಯೊಂದಿಗೆ ಸೇರಿ ಆಚೆ ಬರುತ್ತೆ. ಅದನ್ನು ಉಸಿರಿನೊಂದಿಗೆ ನಮ್ಮ ದೇಹ ಸೇರಿದಾಗ ಅನೇಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಪ್ಯಾನ್ ಬಿಸಿಯಿಂದಾಗಿ ಹೊಗೆ ಮೂಲಕ ಹೊರ ಬರುವ ವಿಷಕಾರಿ ಹೊಗೆಯನ್ನು ಸೇವಿಸುವುದರಿಂದ ಉಸಿರಾಟದಲ್ಲಿ ತೊಂದರೆ, ಕಫಾ, ತಲೆನೋವು, ತಲೆ ಸುತ್ತುವುದು, ಸುಸ್ತು, ವಾಂತಿಯಂತಹ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದು ಫರಿದಾಬಾದ್ನ ಏಷಿಯಾ ಆಸ್ಪತ್ರೆಯ ವೈದ್ಯರಾದ ಸಂತೋಷ್ ಕುಮಾರ್ ಅಗ್ರವಾಲ್ ಹೇಳಿದ್ದಾರೆ. ಹೀಗಾಗಿ ಆದಷ್ಟು ನಾನ್ ಸ್ಟಿಕ್ ಪ್ಯಾನ್ನಿಂದ ಗೃಹಿಣಿಯರು ದೂರ ಉಳಿದಲ್ಲಿ ತುಂಬಾ ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.



ನಾನ್ ಸ್ಟಿಕ್ ಪಾತ್ರೆಗಳ ಮೇಲೆ ಗೀರು ಬಿದ್ರೆ ಏನಾಗುತ್ತೆ ಎನ್ನುವ ಬಗ್ಗೆ ಅಧ್ಯಯನ ನಡೆಸಲಾಗಿದೆ. ಟೆಫ್ಲಾನ್ ಲೇಪಿತ ಪ್ಯಾನ್ ಮೇಲೆ ಒಂದು ಗೀರು 9,000 ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಆಹಾರಕ್ಕೆ ಬಿಡುಗಡೆ ಮಾಡುತ್ತದೆ. ಗೀರು ಹೆಚ್ಚಾಗ್ತಿದ್ದಂತೆ ಮೈಕ್ರೋಪ್ಲಾಸ್ಟಿಕ್ ಕಣ ಆಹಾರ ಸೇರುವ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಪ್ರತಿ ಬಾರಿ ಅಡುಗೆ ಮಾಡುವ ಸಮಯದಲ್ಲಿ 2 ಮಿಲಿಯನ್ ಮೈಕ್ರೋಪ್ಲಾಸ್ಟಿಕ್ ಕಣ ರಿಲೀಸ್ ಆಗುತ್ತಿದ್ದು, ಇದು ಆರೋಗ್ಯಕ್ಕೆ ಅಪಾಯ. ಯಾವುದೇ ಕಾರಣಕ್ಕೂ ಒಂದೇ ಒಂದು ಗೀರಾದ್ರೂ ಆ ನಾನ್ ಸ್ಟಿಕ್ ಪಾತ್ರೆಯನ್ನು ಬಳಸಬೇಡಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026