ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಬೆಂಗಳೂರು: ರಾಜ್ಯದ ಕೃಷಿ ಇಲಾಖೆಯಲ್ಲಿ ಖಾಲಿ ಇರುವಂತ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳ 945 ಹುದ್ದೆಗೆ ಕೆಪಿಎಸ್ಸಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚನೆ ಹೊರಡಿಸಲಾಗಿದೆ. ಹೈದರಾಬಾದ್ ಕರ್ನಾಟಕ ವೃಂದದಲ್ಲಿ ಖಾಲಿ ಇರುವಂತ ಗ್ರೂಪ್-ಬಿ ವೃಂದದ ಹಾಗೂ ಉಳಿಕೆ ಮೂಲ ವೃಂದದಲ್ಲಿನ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿರುವುದಾಗಿ ತಿಳಿಸಿದೆ.
ಹೈದ್ರಾಬಾದ್ ಕರ್ನಾಟಕ ವೃಂದದ ಹುದ್ದೆಗಳ ವಿವರ
ಕೃಷಿ ಅಧಿಕಾರಿಗಳು – 42 ಹುದ್ದೆ. ಸಹಾಯ ಕೃಷಿ ಅಧಿಕಾರಿಗಳು – 231 ಹುದ್ದೆ. ಕೃಷಿ ಅಧಿಕಾರಿಗಳು – 86 ಹುದ್ದೆಗಳು. ಸಹಾಯ ಕೃಷಿ ಅಧಿಕಾರಿಗಳು – 586 ಹುದ್ದೆ
ಅರ್ಜಿ ಸಲ್ಲಿಕೆಯು ದಿನಾಂಕ 07-10-2024ರಿಂದ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-11-2024 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ www.kpsc.kar.nic ಗೆ ಭೇಟಿ ನೀಡಿ ಪಡೆಯಬಹುದಾಗಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.