LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಕೇಸ್‌ : ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಕಿರಾತಕನ ಕ್ರೌರ್ಯ

ಕೊಲ್ಕತ್ತಾದ ಆರ್‌ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದು ದೇಶ ಕಂಡ ಮತ್ತೊಂದು ನಿರ್ಭಯಾ ಪ್ರಕರಣ ಎಂದು ಜನ ಹೇಳುತ್ತಿದ್ದಾರೆ. ಹಾಗೆ ಕೊಲೆ ಮಾಡಿದವನನ್ನು ಸುಮ್ಮನೆ ಬಿಡಬಾರದು. ನೇಣಿಗೆ ಏರಿಸಬೇಕು ಎನ್ನುವ ಆಗ್ರಹಗಳು ಕೂಡ ಕೇಳಿ ಬರುತ್ತಿವೆ. ಇದೆಲ್ಲದರ ಮಧ್ಯೆ ಮೃತ ವೈದ್ಯೆಯ ಪೋಸ್ಟ್ ಮಾರ್ಟಮ್​ ವರದಿ ಹೊರ ಬಂದಿದ್ದು ಬೆಚ್ಚಿ ಬೀಳಿಸುವ ಅಂಶ ಶವಪರೀಕ್ಷೆಯ ವರದಿಯಲ್ಲಿದೆ. ಹೌದು ಕಳೆದ ಆಗಸ್ಟ್ 9 ರಂದು ಮಧ್ಯರಾತ್ರಿ 31 ವರ್ಷದ ಟ್ರೇನಿ ಡಾಕ್ಟರ್‌ಗ​ಳನ್ನ ಸಂಜಯ್ ರಾಯ್ ಎಂಬ ವಿಕೃತ ಕಾಮಿಯೊಬ್ಬ ಅತ್ಯಾಚಾರ ನಡೆಸಿ ಬರ್ಬರವಾಗಿ ಕೊಂದು ಹಾಕಿದ್ದ. ಆರಂಭದಲ್ಲಿ ಇದನ್ನು ಆತ್ಮಹತ್ಯೆಯೆಂದು ಬಿಂಬಿಸುವ ಕೆಲಸ ಕೂಡಾ ನಡೆದಿತ್ತು.

ಯಾವಾಗ ಪ್ರತಿಭಟನೆಯ ಜೋರಾಯಿತೋ ಆಗ ಅಸಲಿ ವಿಚಾರಣೆ ಶುರುವಾಗಿದೆ. ಅರೆನಗ್ನ ಸ್ಥಿತಿಯಲ್ಲಿ ಬಿದ್ದಿದ್ದ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ವೈದ್ಯೆಯ ಶವಪರೀಕ್ಷೆಗೆ ಕಳುಹಿಸಲಾಯ್ತು. ಈಗ ಶವಪರೀಕ್ಷೆ ವರದಿಯೂ ಪೊಲೀಸರ ಕೈ ಸೇರಿದ್ದು ಬೆಚ್ಚಿ ಬೀಳಿಸುವ ಅಂಶಗಳು ಅದರಲ್ಲಿದೆ. ಅತ್ಯಾಚಾರ ನಡೆದ ಸಮಯದಲ್ಲಿ ಪೊಲೀಸರು ಸ್ಥಳಕ್ಕೆ ಬಂದು ವೀಕ್ಷಿಸಿದಾಗ ಕೊಲೆಯಾದ ಟ್ರೇನಿ ಡಾಕ್ಟರ್ ಅರೆನಗ್ನಸ್ಥಿತಿಯಲ್ಲಿ ಬಿದ್ದಿದ್ದಳು, ಆಕೆಯ ಜೀನ್ಸ್ ಪ್ಯಾಂಟ್ ಹಾಗೂ ಒಳ ಉಡುಪು ಬೇರೆ ಕಡೆ ಬಿದ್ದಿದ್ದವು. ಅಲ್ಲದೇ ಕಣ್ಣು, ಕಿವಿ ಹಾಗೂ ಖಾಸಗಿ ಭಾಗದಲ್ಲಿ ರಕ್ತಸ್ರಾವ ಆಗಿದ್ದು ಕಾಣಿಸಿತ್ತು. ತೊಡೆ, ಕೈ ಹಾಗೂ ತುಟಿಗಳ ಮೇಲೆ ಗಾಯದ ಗುರುತು ಕಂಡು ಬಂದಿದ್ದವು. ಕಣ್ಣಿನಲ್ಲಿ ರಕ್ತಸ್ರಾವ ಆಗಿದ್ದೇಕೆ ಎನ್ನುವ ದೊಡ್ಡ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಈಗ ಅಸಲಿ ಉತ್ತರ ಸಿಕ್ಕಿದೆ. ಅತ್ಯಾಚಾರ ಮಾಡಿದ ಬಳಿಕ ಆ ಸೈಕೋಪಾತ್ ಸಂಜಯ್ ರಾಯ್ ಎನ್ನುವವನು ವೈದ್ಯೆಯ ಮುಖಕ್ಕೆ ಬಲವಾಗಿ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ವೈದ್ಯೆ ಹಾಕಿಕೊಂಡಿದ್ದ ಚಸ್ಮಾದ ಗ್ಲಾಸ್ ತುಣುಕು​ ಕಣ್ಣಿನೊಳಕ್ಕೆ ನುಗ್ಗಿದೆ. ಇದರಿಂದ ಕಣ್ಣಿನಿಂದ ರಕ್ತಸ್ರಾವ ಆಗಿದೆ ಅಂತ ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಅತ್ಯಾಚಾರ ಮಾಡುವ ಮೊದಲು ಈ ನೀಚ ಕೊಲ್ಕತ್ತಾದ ಎರಡು ರೆಡ್​ಲೈಟ್ ಏರಿಯಾಗಳಲ್ಲಿ ಅಡ್ಡಾಡಿ ಬಂದಿದ್ದನಂತೆ. ಹಲವಾರು ನೀಲಿ ಚಿತ್ರಗಳನ್ನು ನೋಡಿ ಬಂದು ಆಸ್ಪತ್ರೆಯೊಳಗೆ ನುಗ್ಗಿ ಅತ್ಯಾಚಾರದಂತ ಹೀನ ಕೃತ್ಯಕ್ಕೆ ಕೈ ಹಾಕಿದ್ದಾನೆ. ಸದ್ಯ ಈ ನೀಚನಿಗೆ ಕೊಡುವ ಶಿಕ್ಷೆ ಇನ್ನೊಮ್ಮೆಇಂತಹ ಕೃತ್ಯಕ್ಕೆ ಕೈ ಹಾಕುವವರಿಗೆ ಕೈ ನಡುಗುವಷ್ಟು ಭೀಕರವಾಗಿರಬೇಕು ಎನ್ನುವುದು ಜನರ ಆಶಯ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಲ್ಯವಿವಾಹಕ್ಕೆ ಕಡಿವಾಣ ಹಾಕಲು ಹೆಚ್ಚಿನ ಜಾಗೃತಿ ಅಗತ್ಯ: ಸಿವಿಲ್ ನ್ಯಾಯಾಧೀಶೆ ಎ.ಎಂ.ಚೈತ್ರಮಹಾಕುಂಭದಲ್ಲಿ ಕಾಲ್ತುಳಿತದ ಹಿಂದೆ ಪಿತೂರಿ..? 16 ಸಾವಿರ ಮೊಬೈಲ್‌ ಸಂಖ್ಯೆಗಳ ವಿವರ ಪರಿಶೀಲನೆಬಿರಿಯಾನಿ, ಚಿಕನ್ ಫ್ರೈಗೆ ಬೇಡಿಕೆಯಿಟ್ಟ ಮಗುವಿನ ವಿಡಿಯೋ ವೈರಲ್; ಅಂಗನವಾಡಿ ಮೆನು ಬದಲಾವಣೆ ಸಾಧ್ಯತೆಕುಂಭ ಮೇಳ ಕಾಲ್ತುಳಿತ : ಮೃತಪಟ್ಟವರ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲವೇಕೆ?: ಅಖಿಲೇಶ್ ಯಾದವ್ ಪ್ರಶ್ನೆಮದುವೆಗೆ ಸಿಗಲಿದೆ 60,000 ಸಹಾಯಧನ | ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?ಮುಸ್ಲಿಂ ಸಮುದಾಯ ವಕ್ಫ್ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿದೆ – ಅಸಾದುದ್ದೀನ್ ಓವೈಸಿಬೆಂಗಳೂರು: 30ಕ್ಕೂ ಹೆಚ್ಚು ಐಷಾರಾಮಿ ಕಾರುಗಳ ಜಪ್ತಿ..!!ಬೆಳ್ಳಂಬೆಳಗ್ಗೆ ಶೂಟ್‌ ಔಟ್‌ : ಇಬ್ಬರ ಬಂಧನಮೈಕ್ರೋ ಫೈನಾನ್ಸ್ ಕಿರುಕುಳ: ಶಿಕ್ಷೆಯ ಪ್ರಮಾಣ 10 ವರ್ಷಕ್ಕೆ ಹೆಚ್ಚಳ- ಜಿ.ಪರಮೇಶ್ವರ್ಜಾನುವಾರುಗಳ ಕಳವು, ಹತ್ಯೆ, ಮಾಡುವವರನ್ನು ಸಾರ್ವಜನಿಕವಾಗಿ ಗುಂಡಿಕ್ಕಬೇಕು- ಮಂಕಾಳ ವೈದ್ಯ