LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಜನಸಂಖ್ಯೆ ಹೆಚ್ಚಿಸಲು ಸರ್ಕಾರದಿಂದ ಪ್ರೋತ್ಸಾಹ: ಸೆಕ್ಸ್ ಯೂನಿವರ್ಸಿಟಿ ಶುರು..!

ಯುದ್ಧೋನ್ಮಾದದಲ್ಲಿರುವ ರಷ್ಯಾದಲ್ಲಿ ಜನಸಂಖ್ಯೆ ಕುಸಿಯುತ್ತಿದೆ, ಹೀಗಾಗಿ ಜನಸಂಖ್ಯೆ ಹೆಚ್ಚಳಕ್ಕೆ ಕಸರತ್ತು ನಡೆಸುತ್ತಿದೆ. ಜನಸಂಖ್ಯೆಯ ತೀವ್ರ ಇಳಿಕೆ ರಷ್ಯಾವನ್ನು ಬಾಧಿಸುತ್ತಿದೆ.

ಜನಸಂಖ್ಯೆ ಹೆಚ್ಚಿದ್ರೂ ಕಷ್ಟ, ಕಡಿಮೆಯಾದರೂ ಕಷ್ಟ. ಭಾರತದಂತ ಹಲವು ರಾಷ್ಟ್ರಗಳು ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದೆ.

ಲೈಂಗಿಕತೆ ಬಗ್ಗೆ ಅರಿಯಲು ಈಗಾಗಲೇ ಜಗತ್ತಿನ ಹಲವೆಡೆ ಸೆಕ್ಸ್ ಕಾಲೇಜುಗಳು, ಕೋರ್ಸ್ಗಳು ಲಭ್ಯ ಇವೆ. ಸದ್ಯ ರಷ್ಯಾ ತನ್ನ ದೇಶದಲ್ಲಿ ಸೆಕ್ಸ್ ಯೂನಿವರ್ಸಿಟಿ ತೆರೆಯಲು ಮುಂದಾಗಿದೆ.

ಕಾರಣ ಏನು ಅಂದ್ರೆ ಆಧುನಿಕ ಜೀವನಶೈಲಿ ಹಾಗೂ ಕಳೆದ 3 ವರ್ಷಗಳಿಂದ ನಡೆಯುತ್ತಿರುವ ಉಕ್ರೇನ್‌ ಜೊತೆಗಿನ ಯುದ್ಧದಲ್ಲಿ ಸಾಕಷ್ಟು ಜನರು ಮೃತಪಟ್ಟಿದ್ದಾರೆ. ಹೀಗಾಗಿ ಜನಸಂಖ್ಯೆ ಇಳಿಕೆಯ ಸಮಸ್ಯೆ ಇನ್ನಷ್ಟು ತೀವ್ರವಾಗಿದೆ. ಗ್ಲಾವ್‌ಪಿಆರ್‌ ಎಂಬ ಏಜೆನ್ಸಿ ‘ಸೆಕ್ಸ್‌ ಸಚಿವಾಲಯ’ ಸ್ಥಾಪಿಸುವಂತೆ ಪುಟಿನ್ ಸರ್ಕಾರಕ್ಕೆ ಸಲಹೆ ನೀಡಿದೆ.

ಇನ್ನು ರಷ್ಯಾದಲ್ಲಿ ಜನಸಂಖ್ಯೆ ಹೆಚ್ಚಿಸಲು ಪುಟಿನ್ ಸರ್ಕಾರ ವಿವಿಧ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಮಹಿಳೆಯರು ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕು ಅಂತ ಈಗಾಗಲೇ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ.

ರಾತ್ರಿ ವೇಳೆ ಕರೆಂಟ್, ಇಂಟರ್ನೆಟ್ ಸಂಪರ್ಕ ಕಡಿತಗೊಳಿಸುವುದು ಅಂದ್ರೆ ರಾತ್ರಿ 10ರಿಂದ ರಾತ್ರಿ 2 ಗಂಟೆಯವರೆಗೆ ವಿದ್ಯುತ್‌, ಇಂಟರ್ನೆಟ್ ಸ್ಥಗಿತ ಮಾಡುವುದು. ಈ ಹೊತ್ತಲ್ಲಿ ಜನರ ಲೈಂಗಿಕ ಕ್ರಿಯೆಗೆ ಪ್ರೋತ್ಸಾಹ ನೀಡುವುದು. ಇನ್ನು ಹೆಂಗಸರು ಮನೆಯಲ್ಲೇ ಇರಲು ಸರ್ಕಾರದಿಂದ ಸಂಬಳ ನೀಡುವುದು. ಈ ಮೂಲಕ ಸಂತಾನೋತ್ಪತ್ತಿಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.

ಇನ್ನು ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವಂತೆ ಈಗಾಗಲೇ ರಷ್ಯಾ ಸರ್ಕಾರ ಮಹಿಳೆಯರ ಮೇಲೆ ಒತ್ತಡ ಹೇರಲಾರಂಭಿಸಿದೆ. ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರಿಂದ ಅವರ ಖಾಸಗಿ ಲೈಂಗಿಕ ಜೀವನದ ಕುರಿತು ಬಲವಂತವಾಗಿ ಮಾಹಿತಿ ಕಲೆ ಹಾಕಲಾಗ್ತಿದೆ. ಅವರಿಗೆ ಸರ್ಕಾರದಿಂದ ಪ್ರಶ್ನಾವಳಿ ನೀಡಲಾಗುತ್ತಿದ್ದು, ನೀವು ಯಾವಾಗ ಲೈಂಗಿಕ ಕ್ರಿಯೆ ಆರಂಭಿಸಿದಿರಿ, ಕಾಡೋಂ ಬಳಸುತ್ತೀರಾ, ಸಂತಾನಹೀನತೆ ಸಮಸ್ಯೆ ಇದೆಯೇ ಎಷ್ಟು ಮಕ್ಕಳನ್ನು ಹಡೆಯುವ ಪ್ಲಾನ್‌ ಇದೆ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಲಾಗ್ತಿದೆ.

ಸರ್ಕಾರದಿಂದಲೇ ಉಚಿತವಾಗಿ ಬಂಜೆತನ ಚಿಕಿತ್ಸಾ ಶಿಬಿರಗಳನ್ನು ನಡೆಸಲಾಗ್ತಿದೆ. ಒಟ್ಟಾರೆ ರಷ್ಯಾ ಸರ್ಕಾರ ಕೈಗೊಂಡಿರುವ ಈ ಕ್ರಮಗಳಿಂದ ಫಲವಂತಿಕೆ ಹೆಚ್ಚುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಜಾಗ ಖರೀದಿಸಿದ ಕಿಚ್ಚ ಸುದೀಪ್ಆ. 23, 24 ರಂದು ಕೆಲವು ರೈಲುಗಳು ರದ್ದು, ಸಂಚಾರದಲ್ಲಿ ಬದಲಾವಣೆಸ್ಫೋಟಕ ತಿರುವು ಪಡೆದುಕೊಂಡ ಧರ್ಮಸ್ಥಳ ಪ್ರಕರಣಲಕ್ಷಗಟ್ಟಲೆ ಸಂಬಳದ ಕೆಲಸ ಬಿಟ್ಟು ಐಎಎಸ್ ಟಾಪರ್ ಆದ ಉತ್ಸವ್ ಗೌತಮ್ ಸಕ್ಸಸ್‌ ಸ್ಟೋರಿವಾಯುಭಾರ ಕುಸಿತ : ಆಗಸ್ಟ್ 19 ಮತ್ತು 20ರಂದು ರಾಜ್ಯಾದ್ಯಂತ ವ್ಯಾಪಕ ಮಳೆ.!ಆಗಸ್ಟ್ 19 ಮಳೆ ಅಬ್ಬರ ಮುಂದುವರೆದಿದ್ದು ಮುನ್ನೆಚ್ಚರಿಕೆ ಕ್ರಮ ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ರಜೆ.!ಗ್ರಾಮಾಂತರ ಪ್ರದೇಶ ಹಾಗೂ ದಾವಣೆಗರೆ ಈ ಭಾಗಗಳಲ್ಲಿ ಕರಂಟ್ ಇರಲ್ಲ.!ಒಳ ಮೀಸಲಾತಿ : ನಾಗಮೋಹನ್ದಾಸ್ ಆಯೋಗ ದತ್ತಾಂಶ ಸರಿ: ಜೆ.ಯಾದವರೆಡ್ಡಿಸರ್ಪಸಂಸ್ಕಾರ ಒಂದೇ ಸಾಕು ಮದುವೆ ಸಂತಾನ ಆರೋಗ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಸರ್ಪ ಸಂಸ್ಕಾರದ ಮಹತ್ವ ತಿಳಿದು ಪರಿಹಾರ ಮಾಡಿಕೊಳ್ಳಿ....!ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ.! 19-08-2025..!