ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿ ಮೇಲೆ ನಡೆಸಿದ ಕ್ರೌರ್ಯದ ಫೋಟೋ ಬಹಿರಂಗ..!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡುವ ಮೊದಲು ದರ್ಶನ್ ಗ್ಯಾಂಗ್ ಕ್ರೌರ್ಯ ಮೆರೆದಿರುವ ಫೋಟೋ ಬಹಿರಂಗವಾಗಿದೆ.
ರೇಣುಕಾ ಸ್ವಾಮಿ ಕಣ್ಣೀರಿಟ್ಟು ಬೇಡಿಕೊಳ್ಳುತ್ತಿರುವ ಮತ್ತು ನೆಲದ ಮೇಲೆ ಅರೆ ಜೀವವಾಗಿ ಬಿದ್ದಿರುವ ಫೋಟೋಗಳು ಪೊಲೀಸರ ಕೈ ಸೇರಿವೆ. ಈ ಫೋಟೋಗಳನ್ನು ಆರೋಪಿ ವಿನಯ್ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ. ನಂತರ ಅವುಗಳನ್ನು ಡಿಲೀಟ್ ಮಾಡಿದ್ದ. ಆದರೆ, ಎಫ್.ಎಸ್.ಎಲ್. ಟೀಮ್ ಡಿಲಿ ಆಗಿದ್ದ ಫೋಟೋಗಳನ್ನು ರಿಟ್ರಿವ್ ಮಾಡಿದೆ. ವಿನಯ್ ಮೊಬೈಲ್ ನಲ್ಲಿದ್ದ 10ಕ್ಕೂ ಹೆಚ್ಚು ಫೋಟೋಗಳನ್ನು ರಿಟ್ರಿವ್ ಮಾಡಲಾಗಿದೆ.
ಪಟ್ಟಣಗೆರೆ ಶೆಡ್ ನಲ್ಲಿ ಎರಡು ಲಾರಿಗಳ ನಡುವೆ ರೇಣುಕಾಸ್ವಾಮಿ ಅರೆ ಜೀವವಾಗಿ ಬಿದ್ದಿರುವ ಫೋಟೋ ಹಾಗೂ ಕಣ್ಣೀರಿಡುತ್ತಾ ಅಂಗಲಾಚಿ ಬೇಡುತ್ತಿರುವ ಫೋಟೋಗಳು ರಿವಿಲ್ ಆಗಿವೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.