LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದಸರಾ ರಜೆ: ಕೆಲ ಖಾಸಗಿ ಶಾಲೆಗಳು ಇನ್ನೂ ರಜೆ ನೀಡಿಲ್ಲ, ಪೋಷಕರ ಆಕ್ರೋಶ

ಬೆಂಗಳೂರು   : ಪ್ರಸಕ್ತ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಂತೆ ಅ.3ರ ಗುರುವಾರದಿಂದ ಶಾಲಾ ಮಕ್ಕಳಿಗೆ ದಸರಾ ರಜೆ ಆರಂಭವಾಗಬೇಕಿದ್ದರೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಕೆಲವು ಖಾಸಗಿ ಶಾಲೆಗಳು ಇನ್ನೂ ರಜೆ ನೀಡಿಲ್ಲ.

ಶಿಕ್ಷಣ ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿ ಅನುಸಾರ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ಬುಧವಾರ ಗಾಂಧಿ ಜಯಂತಿ ಕಾರ್ಯಕ್ರಮದ ಬಳಿಕ ಮಕ್ಕಳಿಗೆ ದಸರಾ ರಜೆಯ ಮಾಹಿತಿ ನೀಡಿ ಕಳಹಿಸಲಾಗಿದೆ. ಆದರೆ, ಕೆಲವು ಖಾಸಗಿ ಶಾಲೆಗಳಲ್ಲಿ ಮಾತ್ರ ಇನ್ನೂ ರಜೆ ನೀಡಿಲ್ಲ.

ವೇಳಾಪಟ್ಟಿ ಪ್ರಕಾರ ಇಷ್ಟೊತ್ತಿಗೆ ಪೂರ್ಣಗೊಳಿಸಬೇಕಿದ್ದ ಅರ್ಧವಾರ್ಷಿಕ ಪರೀಕ್ಷೆಯನ್ನು ಇನ್ನೂ ನಡೆಸುತ್ತಿರುವ ಖಾಸಗಿ ಶಾಲೆಗಳು, ಮುಂದಿನ ವಾರದಿಂದ ತಮ್ಮ ಶಾಲೆಯ ಮಕ್ಕಳಿಗೆ ದಸರಾ ರಜೆ ನೀಡುವುದಾಗಿ ಹೇಳಿವೆ. ಇದು ಪೋಷಕರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ನಿಯಮ ಪ್ರಕಾರ ಅ.3ರಿಂದ 20ರವರೆಗೆ 18 ದಿನ ದಸರಾ ರಜೆ ನೀಡಬೇಕು.

ಆದರೆ, ಒಂದು ವಾರ ತಡ ಮಾಡಿದರೆ ಮಕ್ಕಳಿಗೆ ರಜೆ ಅವಧಿ ಕಡಿತವಾಗಲಿದೆ. ಶೈಕ್ಷಣಿಕ ವರ್ಷದ ಮಧ್ಯೆ ಕೆಲವು ದಿನ ಕುಟುಂಬದೊಂದಿಗೆ ಪೂರ್ಣಾವಧಿ ಕಾಲ ಕಳೆಯುವುದು, ಪ್ರವಾಸ, ಸಂಬಂಧಿಕರ ಮನೆಗೆ ಬೇಟಿ ಸೇರಿದಂತೆ ಮತ್ತಿತರೆ ಅವಕಾಶಗಳಿಗೆ ಸಮಯ ಸಿಗದಂತಾಗಲಿದೆ ಎಂಬುದು ಪೋಷಕರ ವಲಯದ ಅಸಮಾಧಾನವಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ- ಫೆ.10ರಿಂದ 12ರವರೆಗೆ ಮೂರು ದಿನಗಳ ಕಾಲ ಪವಿತ್ರ ತೀರ್ಥ ಸ್ನಾನಮೈಕ್ರೋ ಫೈನಾನ್ಸ್ ಕುರಿತಾದ ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ ರಾಜ್ಯಪಾಲರುಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ- ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!ಅತ್ಯಾಚಾರ ವಿರೋಧಿಸಿದ್ದಕ್ಕೆ ಗರ್ಭಿಣಿ ಮಹಿಳೆಯನ್ನು ಚಲಿಸುವ ರೈಲಿನಿಂದ ಹೊರಗೆಸೆದ ಕಿರಾತಕ..!!ಅರ್ಚಕನೊಂದಿಗೆ ಅಶ್ಲೀಲ ಚ್ಯಾಟ್ ಮಾಡಿ 10 ಲಕ್ಷ ದೋಖಾ - ಯಕ್ಷಗಾನದ ಸ್ತ್ರೀವೇಷಧಾರಿ ಯುವಕ ಅರೆಸ್ಟ್ಕರ್ನಾಟಕದಲ್ಲಿ ದ್ವೇಷ ಭಾಷಣ ಮಾಡಿದ್ರ 3 ವರ್ಷ ಜೈಲು….!ಮಹಾಕುಂಭ ಮೇಳದಲ್ಲಿ ಮತ್ತೆ ಅಗ್ನಿ ಅವಘಡ - ತಪ್ಪಿದ ಭಾರೀ ಅನಾಹುತದೆಹಲಿ-ನೋಯ್ಡಾದ ಶಾಲೆಗಳಿಗೆ ಬಾಂಬ್ ಬೆದರಿಕೆ - ಅಧಿಕಾರಿಗಳಿಂದ ಪರಿಶೀಲನೆವೀರೇಂದ್ರ ಹೆಗ್ಗಡೆ ಸಹೋದರನ 7.59 ಎಕರೆ ಭೂ ಮಂಜೂರಾತಿ ರದ್ದುಗೊಳಿಸಿದ ಕೋರ್ಟ್ಮಾಜಿ ಸಿಎಂ ಯಡಿಯೂರಪ್ಪಗೆ ಬಿಗ್ ರಿಲೀಫ್