LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನ್ಯಾಷನಲ್ ಹೆರಾಲ್ಡ್ ಕೇಸ್: ರಾಹುಲ್ ಗಾಂಧಿಗೆ ನೋಟಿಸ್ ನೀಡಲು ಇಡಿ ಸಿದ್ಧತೆ

ನವದೆಹಲಿ : ಕಾಂಗ್ರೆಸ್ ನಡೆಸುತ್ತಿದ್ದ ನ್ಯಾಷನಲ್ ಹೆರಾಲ್ಡ್ ಪ್ರತಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣಗಳು, ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಸದ ರಾಹುಲ್ ಗಾಂಧಿಗೆ ನೊಟೀಸ್ ನೀಡಲು ಜಾರಿ ನಿರ್ದೇಶನಾಲಯ (ಇಡಿ) ಸಿದ್ಧತೆ ನಡೆಸಿದೆ.

ನೊಟೀಸ್ ನೀಡುವ ಮೂಲಕ ಇಡಿಯು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಶೀಘ್ರದಲ್ಲೇ ಕರೆಸಿಕೊಳ್ಳಬಹುದು ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಸಂಸ್ಥೆ ಈಗಾಗಲೇ 751 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದಕ್ಕೂ ಮೊದಲು 2022ರ ಜೂನ್ ನಲ್ಲಿ, ಇಡಿ 4 ಸಭೆಗಳಲ್ಲಿ ರಾಹುಲ್ ಗಾಂಧಿಯನ್ನು ಸುಮಾರು 40 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಎಐಸಿಸಿ ಎಜೆಎಲ್‌ಗೆ ನೀಡಿದ 90.21 ಕೋಟಿ ರೂಪಾಯಿಗಳ ಸಾಲ ಮತ್ತು ಮುಂಬೈನಲ್ಲಿನ ಆಸ್ತಿಯ ಅಭಿವೃದ್ಧಿಗೆ ಸಂಬಂಧಿಸಿದ ವ್ಯವಹಾರಗಳ ಬಗ್ಗೆಯೂ ಇಡಿ ವಿಚಾರಣೆ ನಡೆಸಿತ್ತು.

2022ರ ಜುಲೈನಲ್ಲಿ 3 ದಿನಗಳ ಕಾಲ ಸುಮಾರು 11 ಗಂಟೆಗಳ ಕಾಲ ಸೋನಿಯಾ ಗಾಂಧಿಯವರನ್ನೂ ಈ ವಿಷಯದಲ್ಲಿ ವಿಚಾರಣೆ ನಡೆಸಲಾಯಿತು. ಇನ್ನು ಆರ್ಥಿಕ ಅಪರಾಧಗಳ ತನಿಖಾ ಸಂಸ್ಥೆಯು ಸೋನಿಯಾ ಗಾಂಧಿ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಕರೆಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದೆಯೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಕ್ರೋ ಫೈನಾನ್ಸ್ ಕಿರುಕುಳ: ಶಿಕ್ಷೆಯ ಪ್ರಮಾಣ 10 ವರ್ಷಕ್ಕೆ ಹೆಚ್ಚಳ- ಜಿ.ಪರಮೇಶ್ವರ್ಜಾನುವಾರುಗಳ ಕಳವು, ಹತ್ಯೆ, ಮಾಡುವವರನ್ನು ಸಾರ್ವಜನಿಕವಾಗಿ ಗುಂಡಿಕ್ಕಬೇಕು- ಮಂಕಾಳ ವೈದ್ಯದೆಹಲಿ ಚುನಾವಣೆಗೂ ಮುನ್ನ ಸಿಎಂ ಅತಿಶಿ ವಿರುದ್ಧ ಪ್ರಕರಣ ದಾಖಲುಸಿದ್ದರಾಮಯ್ಯ ಕುಟುಂಬ ಬೇನಾಮಿ ಆಸ್ತಿ ಬಗ್ಗೆ ಸ್ನೇಹಮಯಿ ಕೃಷ್ಣ ದಾಖಲೆ ಬಿಡುಗಡೆಫೆ. 5 ಕ್ಕೆ ಪ್ರಧಾನಿ ಮೋದಿ ಮಹಾ ಕುಂಭ ಮೇಳಕ್ಕೆ ಭೇಟಿರೈಲ್ ಇಂಡಿಯಾದಲ್ಲಿ 300 ಹುದ್ದೆಗಳಿಗೆ ಅರ್ಜಿ ಆಹ್ವಾನಸುಳ್ಳು ಸುದ್ದಿ ಪ್ರಸಾರ: ಹೈಕೋರ್ಟ್ ಮೆಟ್ಟಿಲೇರಿದ ಆರಾಧ್ಯ ಬಚ್ಚನ್!!ಭಾರತೀಯ ವಲಸಿಗರನ್ನು ಅಮೆರಿಕದಿಂದ ಗಡಿಪಾರು ಮಾಡಲು ಆರಂಭಿಸಿದ ಟ್ರಂಪ್ಈ ಬಾರಿ SSLC ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ಇಲ್ಲ..!ನಮ್ಮ ಕ್ಲಿನಿಕ್ ಮಾಹಿತಿ ಕೊಡಲು ಬಿಬಿಎಂಪಿ ಹೊಸ ಪ್ಲಾನ್….!