LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪಂಚೆ ಹಾಕಿ ಮಾಲ್‌ಗೆ ಬಂದಿದ್ದ ಅನ್ನದಾತನನ್ನು ಒಳಗೆ ಬಿಡದ ಜಿಟಿ ಮಾಲ್ ಸಿಬ್ಬಂದಿ..!

ಪಂಚೆ ಹಾಕಿಕೊಂಡು ಬಂದಿದ್ದಕ್ಕೆ ರೈತನನ್ನು ಒಳಗೆ ಬಿಡದ ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ಸಿಬ್ಬಂದಿ ದರ್ಪ ತೋರಿದ ಘಟನೆ ನಡೆದಿದೆ. ಹಾವೇರಿ ಮೂಲದ ನಾಗರಾಜ್ ಎನ್ನುವರು ಜುಲೈ 16ರಂದು ತಮ್ಮ ತಂದೆ ತಾಯಿಗೆ ಸಿನಿಮಾ ತೋರಿಸಲು ಜಿಟಿ ಮಾಲ್ ಗೆ ಕರೆದೊಯ್ದಿದ್ದಾರೆ. ಆದರೆ, ನಾಗರಾಜ್ ತಂದೆ ಪಂಚೆ ಹಾಕಿಕೊಂಡು ತಲೆಗೆ ಪಟಗ ಸುತ್ತಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಅವರನ್ನು ಮಾಲ್​ ಒಳಗೆ ಪ್ರವೇಶಿಸಲು ನಿರಾಕರಿಸಿದ್ದಾರೆ. ಪುತ್ರ ನಾಗರಾಜ್ ಎಂಬುವರು ಒಳಗೆ ಬಿಡಿ ಎಂದು ಇಷ್ಟು ಬಾರಿ ಕೇಳಿದರು ಪಂಚೆ ಹಾಕೊಂಡಿದ್ದಾರೆ. ಮಾಲ್ ನಲ್ಲಿ ಪಂಚೆ ಹಾಕಿದವರನ್ನು ಬಿಡುವುದಿಲ್ಲ ಎಂದು ಸಿಬ್ಬಂದಿ ತಮ್ಮದೇ ಮೊಂಡು ವಾದ ಮಾಡಿದ್ದಾರೆ. ಅಲ್ಲದೇ ನಮ್ಮ ಮಾಲಿನಲ್ಲಿ ಈ ರೀತಿ ರೂಲ್ಸ್ ಇದೆ ಎಂದು ಪ್ರವೇಶ ದ್ವಾರದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾಲ್ ಮುಂದೆ ಕೂರಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಈ ಘಟನೆಗೆ ನೆಟ್ಟಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೈತ ಬೆಳೆಯುವ ಬೆಳೆ ಬೇಕು. ರೈತನಿಗೆ ಮರ್ಯಾದೆ ಕೊಡೋಕೆ ಬರಲ್ವಾ ಅಂತ ಪ್ರಶ್ನಿಸುತ್ತಿದ್ದಾರೆ.ಇನ್ನೂ ಕೆಲ ನೆಟ್ಟಿಗರು ಪಂಚೆ ಹಾಕಿ ಬಂದ್ರೆ ಏನು ತಪ್ಪು. ಕಾಸು ಕೊಟ್ಟು ಸಿನಿಮಾ ನೋಡೋಕೆ ಅವರು ಬಂದಿರೋದು, ಫ್ರೀಯಾಗಿ ನೋಡೋಕೆ ಅಲ್ವಲ್ಲ ಅಂತ ಮಾಲ್‌ ವಿರುದ್ಧ ಕಿಡಿಕಾರುತ್ತಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡನೆ ಸಾಧ್ಯತೆನಾಳೆಯಿಂದ ಏರ್‌ ಶೋ ಆರಂಭ- ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯಬಾಲ್ಯವಿವಾಹಕ್ಕೆ ಕಡಿವಾಣ ಹಾಕಲು ಹೆಚ್ಚಿನ ಜಾಗೃತಿ ಅಗತ್ಯ: ಸಿವಿಲ್ ನ್ಯಾಯಾಧೀಶೆ ಎ.ಎಂ.ಚೈತ್ರಮಹಾಕುಂಭದಲ್ಲಿ ಕಾಲ್ತುಳಿತದ ಹಿಂದೆ ಪಿತೂರಿ..? 16 ಸಾವಿರ ಮೊಬೈಲ್‌ ಸಂಖ್ಯೆಗಳ ವಿವರ ಪರಿಶೀಲನೆಬಿರಿಯಾನಿ, ಚಿಕನ್ ಫ್ರೈಗೆ ಬೇಡಿಕೆಯಿಟ್ಟ ಮಗುವಿನ ವಿಡಿಯೋ ವೈರಲ್; ಅಂಗನವಾಡಿ ಮೆನು ಬದಲಾವಣೆ ಸಾಧ್ಯತೆಕುಂಭ ಮೇಳ ಕಾಲ್ತುಳಿತ : ಮೃತಪಟ್ಟವರ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲವೇಕೆ?: ಅಖಿಲೇಶ್ ಯಾದವ್ ಪ್ರಶ್ನೆಮದುವೆಗೆ ಸಿಗಲಿದೆ 60,000 ಸಹಾಯಧನ | ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?ಮುಸ್ಲಿಂ ಸಮುದಾಯ ವಕ್ಫ್ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿದೆ – ಅಸಾದುದ್ದೀನ್ ಓವೈಸಿಬೆಂಗಳೂರು: 30ಕ್ಕೂ ಹೆಚ್ಚು ಐಷಾರಾಮಿ ಕಾರುಗಳ ಜಪ್ತಿ..!!ಬೆಳ್ಳಂಬೆಳಗ್ಗೆ ಶೂಟ್‌ ಔಟ್‌ : ಇಬ್ಬರ ಬಂಧನ