LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪಾದದ ಸಮಸ್ಯೆಗಳಿಗೆ ಇಲ್ಲಿವೆ ಸುಲಭ ಉಪಾಯ

ಸಾಮಾನ್ಯವಾಗಿ ಜನರು ಕಾಲಿನ ಬಗ್ಗೆ ಗಮನ ಕೊಡುವುದು ಬಹಳ ಕಡಿಮೆ ಯಾರಾದ್ರೂ ಹೊಸ ಚಪ್ಪಲಿಯನ್ನು ಖರೀದಿಸಿದಾಗ ಅಥವಾ ಕಾಲು ಬೆರಳುಗಳ ನಡುವೆ ತುರಿಕೆ ಕಂಡು ಬಂದಾಗ ಮಾತ್ರ ಕಾಲನ್ನು ನೋಡಿಕೊಳ್ಳುತ್ತಾರೆ.

ನೀವು ಕೂಡ ಹೀಗೆ ನಿಮ್ಮ ಕಾಲನ್ನು ತುಂಬಾ ಸಮಯಗಳ ಕಾಲ ಮರೆತು ಬಿಟ್ಟಿದ್ದರೆ ಈ ರೀತಿಯಾಗಿ ಮಾಡಿ. ಸಾಮಾನ್ಯವಾಗಿ ಜನರು ದೇಹದ ಬಗ್ಗೆ, ತಲೆಕೂದಲಿನ ಬಗ್ಗೆ, ಮುಖದ ಬಗ್ಗೆ ಹೀಗೆ ಎಲ್ಲಾ ಅಂಗಾಗಳ ಬಗ್ಗೆ ಕಾಳಜಿಯನ್ನು ತೋರಿಸುತ್ತೇವೆ ಆದರೆ ಪಾದಗಳ ಬಗ್ಗೆ ಮಾರೆತೇ ಬಿಡುತ್ತೀವಿ. ಕಾಲಿನ ಪಾದಗಳು ಕೂಡ ನಮ್ಮ ದೇಹದ ಭಾಗನೆ ಅಲ್ವಾ. ಕಾಲನ್ನು ಯಾರು ನೋಡುತ್ತಾರೆ ಅನ್ನುವ ಅಭಿಪ್ರಾಯ ಕೆಲವರಲ್ಲಿ ಇರುತ್ತದೆ. ಆದರೆ ಇಡೀ ದೇಹವನ್ನು ಹೊತ್ತುಕೊಂಡು ಓಡಾಡುವ ಹೊಣೆ ಪಾದಗಳ ಮೇಲೆ ಇದೆ ಅಂದಮೇಲೆ ಅವುಗಳ ಕಾಳಜಿ ನಮ್ಮದೆ. ಮನೆಯಲ್ಲಿಯೇ ಈ ಕೆಲವು ಸುಲಭ ಉಪಾಯಗಳನ್ನು ಪಾಲಿಸುವುದರ ಮೂಲಕ ಕಾಲಿನ ಕಾಳಜಿ ಮಾಡಬಹುದು. ವಿನೇಗರ್ ನಲ್ಲಿ ಆ ಗುಣಗಳಿವೆ.

ಅದನ್ನು ಹೇಗೆ ಬಳಸಿಕೊಳ್ಳುವುದರ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ಉಪಯೋಗಗಳನ್ನು ಪಡೆಯಬಹುದು ಎಂದು ತಿಳಿಯೋಣ. ಎಸ್ಜಿಮಾವು ಪಾದದ ಮೇಲೆ ಕಾಣಿಸಿಕೊಳ್ಳುವ ಒಂದು ಸಾಮಾನ್ಯ ಶಿಲೀಂದ್ರ ಸೋಂಕು. ಇದು ಸಾಮಾನ್ಯವಾಗಿ ಕಾಲಿನ ಅಡಿ ಭಾಗ ಹಾಗೂ ಕಾಲು ಬೆರಳುಗಳ ನಡುವೆ ಕಂಡುಬರುತ್ತದೆ. ಈಜು ಮಾಡುವುದರಿಂದ ಜೊತೆಗೆ ಬರಿಗಾಲಿನಲ್ಲಿ ಹೆಚ್ಚು ನಡೆಯುವುದರಿಂದ ಕೂಡ ಈ ಸೋಂಕು ತಗುಲುವ ಅವಕಾಶಗಳಿವೆ. ಇದರಿಂದಾಗಿ ತುರಿಕೆ, ಉರಿಯೂತ ಮತ್ತು ಗುಳ್ಳೆಗಳು ಕಾಣಿಸಿಕೊಳ್ಳಬಹುದು ಹಾಗೇ ಬಿಟ್ಟರೆ ಬೇರೆ ಭಾಗಗಳಿಗೆ ಹರಡುವ ಅವಕಾಶಗಳು ಕೂಢ ಇದೆ. ಇದಕ್ಕೆ ಪರಿಹಾರವಾಗಿ ವಿನೆಗರ್ ಹಾಕಿದ ನೀರಿನಲ್ಲಿ ನಿಮ್ಮ ಪಾದಗಳನ್ನು ಸ್ನಾನಮಾಡುವುದರಿಂದ ರೋಗಲಕ್ಷಣ ಕಡಿಮೆ ಮಾಡಬಹುದು ಮತ್ತು ಸೋಂಕನ್ನು ನಿವಾರಿಸಿಕೊಳ್ಳ ಬಹುದು. ಸಾಮಾನ್ಯವಾಗಿ ಕಾಲಿಗೆ ಶೂ ಧರಿಸಿದಾಗ ಕಾಡಿನಿಂದ ಒಂದು ದುರ್ಗಂಧ ಹೊರಹೊಮ್ಮುತ್ತದೆ ಇದು ಬೆವರು ಹಾಗೂ ಬ್ಯಾಕ್ಟೀರಿಯಾ ಎರಡರ ಸಂಯೋಜನೆಯಿಂದ ಉಂಟಾಗುತ್ತದೆ. ಇದು ನಮಗೆ ಮಾತ್ರವಲ್ಲದೆ ಸುತ್ತಲಿನ ಜನರಿಗೂ ಕೂಡ ಕಿರಿ ಕಿರಿ ಉಂಟು ಮಾಡಬಹುದು. ಈ ಸಮಸ್ಯೆಗೂ ಕೂಡ ವಿನೆಗರ್ ನಲ್ಲಿ ಪರಿಹಾರವಿದೆ.

ಹೀಗೆ ವಾಸನೆ ಬರುವ ಕಾಲಿನ ಪಾದಗಳನ್ನು ವಿನೆಗರ್ ಹಾಕಿದ ನೀರಿನಲ್ಲಿ ತೊಳೆಯುವುದರಿಂದ ಈ ಕೆಟ್ಟ ವಾಸನೆಯಿಂದ ಸಂಪೂರ್ಣ ವಿಮುಕ್ತಿ ಪಡೆಯಬಹುದು. ಚಳಿಗಾಲದಲ್ಲಂತೂ ಒಡೆದ ಹಿಮ್ಮಡಿಯು ಎಲ್ಲರಲ್ಲೂ ಕಂಡು ಬರುವ ಸಮಸ್ಯೆ, ಒಡೆದ ಹಿಮ್ಮಡಿ ಹಾಗೂ ಒಣ ಕಾಲುಗಳಿಂದ ಕೆಲವೊಮ್ಮೆ ನೋವು ಕಾಣಿಸಿಕೊಳ್ಳುತ್ತದೆ ಅಷ್ಟೇ ಅಲ್ಲದೆ ಇದು ಒಂದು ರೀತಿಯ ಹಿಂಸೆಯನ್ನು ಉಂಟುಮಾಡುತ್ತದೆ. ವಿನೆಗರ್ ಈ ಸಮಸ್ಯೆಗೆ ಉತ್ತಮ ಪರಿಹಾರ ಇದು ಕಾಲುಗಳಿಗೆ ಮೋಸ್ಚರೈಸ್ ಮಾಡುತ್ತದೆ. ಜೊತೆಗೆ ಪಾದಗಳ ಚರ್ಮವನ್ನು ಸಾಕಷ್ಟು ಮೃದುವಾಗಿರಿಸುತ್ತದೆ. ಕಾಲುಗಳು ನಮ್ಮ ಇಡೀ ದೇಹವನ್ನು ಹೊತ್ತುಕೊಂಡು ತಿರುಗುತ್ತದೆ ಹೀಗಿರುವಾಗ ಇವುಗಳ ಕಾಳಜಿ ಬಹಳ ಅವಶ್ಯಕ. ವಿನೆಗರ್ ಸ್ನಾನದಿಂದ ಇಷ್ಟೊಂದು ಉಪಯೋಗಗಳಿವೆ ಎಂದರೆ ಇದನ್ನು ಮಾಡುವ ವಿಧಾನ ಹೀಗಿದೆ. ಒಂದು ದೊಡ್ಡ ಲೋಟದಲ್ಲಿ ವಿನೇಗರ್ ಅನ್ನು ಬಕೇಟ್ನಲ್ಲಿ ತೆಗೆದುಕೊಳ್ಳಬೇಕು ಅದಕ್ಕೆ ಎರಡು ದೊಡ್ಡ ಗಳಷ್ಟು ಬಿಸಿ ನೀರು ಹಾಕಬೇಕು. ಇದೇ ಅಳತೆಯ ಪ್ರಕಾರ ಬಕೆಟ್ ನಿಮ್ಮ ಪಾದವನ್ನು ಸಂಪೂರ್ಣ ಮುಚ್ಚುವ ಪ್ರಮಾಣದ ವರೆಗೂ ತುಂಬಿಸಬೇಕು. ಸುಮಾರು ಹತ್ತರಿಂದ ಇಪ್ಪತ್ತು ನಿಮಿಷಗಳ ಕಾಲ ಪ್ರತಿ ದಿನ ಹೀಗೆ ಮಾಡಿದರೆ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ವೀಡನ್‌ನ ಶಾಲೆಯಲ್ಲಿ ಗುಂಡಿನ ದಾಳಿ - 11 ಜನರ ಮಾರಣಹೋಮನಿಮ್ಮ ಮನೆಯಲ್ಲಿ ಇಂತಹ ಸಂಕೇತಗಳು ಕಂಡುಬಂದರೆ ಅದು ಮಾಟ ಮಂತ್ರದ ಪ್ರಭಾವ..!ಐಪಿಎಸ್ ಅಧಿಕಾರಿ ಪೂಜಾ ಯಾದವ್ ಕಠಿಣ ಪರಿಶ್ರಮದ ಕಥೆಒಣ ಕೆಮ್ಮು, ಕಫದಂತಹ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ..? ಈ ಮನೆಮದ್ದುಗಳನ್ನು ಅನುಸರಿಸಿವಚನ-ಗುಪ್ತ ಮಂಚಣ್ಣ !ಇಂದು ಎಸ್‍ಎಸ್‍ಎಲ್‍ಸಿ ಇಂಗ್ಲೀಷ್ ಭಾಷೆಗೆ ಸಮಬಂಧಿಸಿದಂತೆ ಫೆ.05ರಂದು ಇಂದು ನೇರ ಫೋನ್ ಇನ್ ಕಾರ್ಯಕ್ರಮ.!ದ.ಕ. ಜಿಲ್ಲಾ ಕಾಂಗ್ರೆಸ್ ನಾಯಕ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರ ಮೇಲೆ ಫೈರಿಂಗ್..!ಬ್ಯಾಂಕ್ ಸಹಾಯವಾಣಿ ಹೆಸರಿನಲ್ಲಿ ಬಂದ ಕರೆಗೆ ಒಂದನ್ನು ಒತ್ತಿ 2 ಲಕ್ಷ ಕಳೆದುಕೊಂಡ ಮಹಿಳೆ!ಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡನೆ ಸಾಧ್ಯತೆನಾಳೆಯಿಂದ ಏರ್‌ ಶೋ ಆರಂಭ- ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ