LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫೋರ್ಟಿಸ್ ಹೆಲ್ತ್ಕೇರ್ ನಿಂದ 4 ವಿಶೇಷ ಚಿಕಿತ್ಸಾಲಯ ಆರಂಭ

ಬೆಂಗಳೂರು: ಸೂಕ್ಷ್ಮ ಸ್ವರೂಪದ ಮತ್ತು ಹೆಚ್ಚು ಗಮನಕ್ಕೆ ಬಾರದ ಆರೋಗ್ಯ ಸಮಸ್ಯೆಗಳ ಪರಿಹರಿಸಲು 4 ವಿಶೇಷ ಚಿಕಿತ್ಸಾಲಯವನ್ನು ಫೋರ್ಟಿಸ್ ಹೆಲ್ತ್ಕೇರ್ ನಲ್ಲಿ ಆರಂಭಿಸಲಾಗಿದೆ ಎಂದು ಫೋರ್ಟಿಸ್ ಆಸ್ಪತ್ರೆಯ ಮೂತ್ರಪಿಂಡ ವಿಜ್ಞಾನಗಳ ಪ್ರಧಾನ ನಿರ್ದೇಶಕ ಡಾ. ಮೋಹನ್ ಕೇಶವಮೂರ್ತಿ ತಿಳಿಸಿದರು.


ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ  ನಡೆದ ಕಾರದಯಕ್ರಮಸಲ್ಲಿ ಮಾತನಾಡಿ,ಪುರುಷರ,ಮಹಿಳೆಯರ ಲೈಂಗಿಕ ಆರೋಗ್ಯ ಸಮಸ್ಯೆಗಳು, ಅಸಂಯಮ ಮತ್ತು ಮೂತ್ರಪಿಂಡದ ಕಲ್ಲುಗಳಂತಹ ಪರಿಸ್ಥಿತಿಗಳು ಸಾಮಾನ್ಯವಾಗಿ ಹೆಚ್ಚಾಗಿ ಕಂಡುಬರುತ್ತವೆ. ಸಾಮಾಜಿಕ ಹಿಂಜರಿಕೆ ಮನೋಭಾವವು ಚಿಕಿತ್ಸೆಯನ್ನು ವಿಳಂಬಗೊಳಿಸುತ್ತದೆ. ಈ ವಿಶೇಷ ಚಿಕಿತ್ಸಾಲಯಗಳ ಮೂಲಕ, ನಮ್ಮ ಬಹುಬಗೆಯ ಪರಿಣತಿಯಿಂದ ಬೆಂಬಲಿತ  ಸುಧಾರಿತ, ಕಡಿಮೆ ನೋವಿನ ಸುಲಭ ಚಿಕಿತ್ಸೆಗಳು  ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ  ಚರ್ಚೆಗಳನ್ನು    ಸಹಜಗೊಳಿಸುವ  ಗುರಿಯನ್ನು ನಾವು ಹೊಂದಿದ್ದೇವೆ. ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ನಮ್ಮ ರೋಗಿಗಳಲ್ಲಿ ಆತ್ಮವಿಶ್ವಾಸ  ಪುನಃಸ್ಥಾಪಿಸುವುದು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವುದು ನಮ್ಮ ಗುರಿಯಾಗಿದೆ.”  ಎಂದು ಹೇಳಿದ್ದಾರೆ.


ಮ್ಯಾನ್ ಕ್ಲಿನಿಕ್, ಇನ್ ಕಂಟಿನೆನ್ಸ್  ಕ್ಲಿನಿಕ್, ರೆಸ್ಟೋರೇಟಿವ್ ಗೈನಕಾಲಜಿ ಕ್ಲಿನಿಕ್ ಮತ್ತು ಮೊಬೈಲ್ ಲಿಥೊ ಟ್ರಿಪ್ಸಿ  ಸೇವೆಗಳನ್ನು  ಹೊಸದಾಗಿ ಪರಿಚಯಿಸಲಾಗಿದೆ. ಸಾಮಾಜಿಕ ಕಳಂಕ ಅಥವಾ ಸೀಮಿತ ಅರಿವಿನಿಂದಾಗಿ ನಿಯಮಿತವಾಗಿ ಚಿಕಿತ್ಸೆ ಪಡೆಯದೆ ಉಳಿಯುವ ಸೂಕ್ಷ್ಮ ಮತ್ತು ಹೆಚ್ಚಾಗಿ ಚರ್ಚಿಸದ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಈ ವಿಶೇಷ ಚಿಕಿತ್ಸಾಲಯಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದರು.


ಹೊಸದಾಗಿ ಪರಿಚಯಿಸಲಾದ ಸೇವೆಗಳು:* 


ಪುರುಷರಿಗೆ ಸಂಬಂದಿಸಿದ ಚಿಕಿತ್ಸಾಲಯ : 


ಅಸಂಯಮ ಚಿಕಿತ್ಸಾಲಯ : ಸ್ತ್ರೀ- ಪುರುಷರು ಹಾಗೂ ವಿವಿಧ ವಯಸ್ಸಿನ ಗುಂಪುಗಳಲ್ಲಿ ಮೂತ್ರ ಮತ್ತು ಕರುಳಿನ ಅಸಂಯಮವನ್ನು ಪರಿಹರಿಸುವ ವಿಶೇಷ ಸೇವೆಗೆ ಇದು ಸಂಬಂಧಿಸಿದೆ.


ಪುನಃಸ್ಥಾಪನೆಯ  ಸ್ತ್ರೀರೋಗ   ಚಿಕಿತ್ಸಾಲಯ: ಮಹಿಳೆಯರ  ಆರೋಗ್ಯ, ಮತ್ತು ಸೌಂದರ್ಯದ ಸ್ತ್ರೀರೋಗ ಸ್ಥಿತಿಗಳಿಗೆ ಮೀಸಲಾಗಿರುವ ಚಿಕಿತ್ಸೆ.


ಮೊಬೈಲ್ ಲಿಥೊಟ್ರಿಪ್ಸಿ ಸೇವೆಗಳು : ಮೂತ್ರಪಿಂಡದ ಕಲ್ಲು ನಿರ್ವಹಣೆಗೆ ತಾಂತ್ರಿಕವಾಗಿ ಮುಂದುವರಿದ, ಕಡಿಮೆ ನೋವಿನ ಸುಲಭದ ಶಸ್ತ್ರಚಿಕಿತ್ಸೆ ಲಭ್ಯ.


ಉದ್ಘಾಟನಾ ಕಾರ್ಯಕ್ರಮದಲ್ಲಿ ಫೋರ್ಟಿಸ್ ಆಸ್ಪತ್ರೆಗಳ ಉಪಾಧ್ಯಕ್ಷ ಮತ್ತು ವ್ಯವಹಾರ ಮುಖ್ಯಸ್ಥ ಡಾ. ಅನಂತ್ ರಾವ್, ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್ ಸೇರಿದಂತೆ ಆಸ್ಪತ್ರೆಯಲ್ಲಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ