ಬಣ್ಣದ ಚಿತ್ತಾರ ಹೊಂದಿರುವ ವಿಶಿಷ್ಟ ಕಪ್ಪೆ, ಈ ಮಳೆಗಾಲದ ಆಕರ್ಷಣೆಯ ಕೇಂದ್ರಬಿಂದು
ಕುಂದಾಪುರ: ಬಣ್ಣದ ಚಿತ್ತಾರ ಹೊಂದಿರುವ ವಿಶಿಷ್ಟ ಕಪ್ಪೆಯೊಂದು ಕುಂದಾಪುರ ತಾಲೂಕಿನ ಬಸ್ರೂರಿನ ಸಂದೇಶ್ ಪುತ್ರನ್ ಎಂಬುವವರ ಮನೆಯಲ್ಲಿ ಕಂಡುಬಂದಿದೆ. ಇದರ ಸಾಮಾನ್ಯ ಹೆಸರು ಇಂಡಿಯನ್ ಪೈಂಟೆಡ್ ಫ್ರಾಗ್(ವೈಜ್ಞಾನಿಕ ಹೆಸರು- ಉಪರೋಡಾನ್ ಟ್ಯಾಪ್ರೊಬಾನಿಕಸ್). ಸಾಮಾನ್ಯವಾಗಿ ಎಲ್ಲ ಕಡೆ ಕಂಡು ಬರುವ ಈ ಕಪ್ಪೆಯನ್ನು ಶ್ರೀಲಂಕಾ ಬುಲ್‌ಫ್ರಾಗ್ ಎಂಬುದಾಗಿಯೂ ಕರೆಯಲಾಗುತ್ತದೆ. ಮರದೊಳಗೆ ಇರುವ ಈ ಕಪ್ಪೆ ನಿಂತ ನೀರಲ್ಲಿ ಅಂದರೆ ಕೆರೆ, ಹಳ್ಳಗಳಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಕುಂದಾಪುರದ ಬಸ್ರೂರಿನಲ್ಲಿ ಕಂಡುಬಂದಿರುವ ಈ ಕಪ್ಪೆ ಇದೀಗ ಎಲ್ಲರ ಆಕರ್ಷಣೆಯಾಗಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.