ಬಾಲ್ಯ ವಿವಾಹ :ಎಫ್.ಐ.ಆರ್ ದಾಖಲು.!
ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ದಾರ‍್ಲಹಳ್ಳಿ ಗ್ರಾಮದ ದೇವರಾಜು ಅಪ್ರಾಪ್ತ ಬಾಲಕಿಯನ್ನು, ಬಳ್ಳಾರಿ ಹತ್ತಿರದ ಗವಿಸಿದ್ದೇಶ್ವರ ಮಠದಲ್ಲಿ ವಿವಾಹ ಆದ ಹಿನ್ನಲೆಯಲ್ಲಿ ಅವರ ವಿರುದ್ದ ಎಫ್.ಐ.ಆರ್ ದಾಖಲಿಸಲಾಗಿದೆ.
ಬಾಲ್ಯ ವಿವಾಹ ವಿಷಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗಮನಕ್ಕೆ ಬಂದಿದ್ದರಿAದ ಪರಿಶೀಲಿಸಿ, ಚಳ್ಳಕೆರೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ವರದಿ ಕಳುಹಿಸಿಕೊಡಲಾಗಿತ್ತು. ಇದನ್ನು ಆಧರಿಸಿ ಆಗಸ್ಟ್ 01 ರಂದು ಪರುಶುರಾಂಪುರ ಪೊಲೀಸ್ ಠಾಣೆಯಲ್ಲಿ, ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಪ್ರಕಾರ ಚಳ್ಳಕೆರೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕರಣ ದಾಖಲಿಸಿದ್ದಾರೆ ಎಂದು ಉಪನಿರ್ದೇಶಕಿ ಭಾರತಿ ಬಣಕಾರ್ ತಿಳಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.