LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಾಳೆಹಣ್ಣು ಮಾತ್ರವಲ್ಲ ಬಾಳೆಕಾಯಿಯೂ ಆರೋಗ್ಯವೃದ್ಧಿಗೆ ಭಾರೀ ಸಹಕಾರಿ - ಏನೇನೂ ಪೋಷಕಾಂಶಗಳಿವೆ ಗೊತ್ತಾ?

ಬಾಳೆಹಣ್ಣಿನಿಂದ ನಮ್ಮ ಆರೋಗ್ಯಕ್ಕಾಗುವ ಉಪಯೋಗ  ಅಷ್ಟಿಷ್ಟಲ್ಲ. ಪ್ರತಿದಿನ ಒಂದು ಬಾಳೆಹಣ್ಣು ತಿಂದಲ್ಲಿ ತೂಕ ಇಳಿಸೋದರಿಂದ ಹಿಡಿದು ಹೃದಯದ ಆರೋಗ್ಯದವರೆಗೆ ಬಹಳ ಪ್ರಯೋಜನವಿದೆ. ಅದಕ್ಕೇ ವೈದ್ಯರು, ಆರೋಗ್ಯ ತಜ್ಞರು ಪ್ರತಿದಿನ ಒಂದು ಬಾಳೆಹಣ್ಣು ತಿನ್ನಬೇಕೆಂದು ಸಲಹೆ ನೀಡುತ್ತಾರೆ.

ಬಾಳೆಹಣ್ಣು ತಿನ್ನುವಷ್ಟು ಸುಲಭವಾಗಿ ಬಾಳೆಕಾಯಿಯನ್ನು ತಿನ್ನಲಾಗುವುದಿಲ್ಲ. ಆದರೆ ಬಾಳೆಕಾಯಿಯಲ್ಲೂ ನಮ್ಮ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುವ ಪೋಷಕಾಂಶಗಳು ಬಹಳ ಇದೆ. ಬಾಳೆಕಾಯಿಲ್ಲಿರುವ ಅಗತ್ಯ ಖನಿಜಗಳು, ಪೋಷಕಾಂಶಗಳು ನಮಗೆ ನಂಬಲಾಗದ ಆರೋಗ್ಯ ಪ್ರಯೋಜನಗಳನ್ನು ಕೊಡುತ್ತದೆ. ಇದನ್ನು ತಿಂದರೆ ಏನೆಲ್ಲಾ ಆರೋಗ್ಯ ಪ್ರಯೋಜನಗಳಿದೆ ಎಂದು ಈಗ ನೋಡೋಣ ಬನ್ನಿ.

ಬಾಳೆಕಾಯಿಯಲ್ಲಿ ಕಾರ್ಬೋಹೈಡ್ರೇಟ್‌ಗಳು, ಕೋಲೀನ್, ಡಯೆಟರಿ ಫೈಬರ್, ಫೋಲೇಟ್, ಕೊಬ್ಬು, ಮೆಗ್ನೀಷಿಯಂ, ಕಬ್ಬಿಣ, ಮ್ಯಾಂಗನೀಸ್, ಪ್ಯಾಂಟೊಥೆನಿಕ್ ಆಮ್ಲ, ನಿಯಾಸಿನ್, ರಂಜಕ, ಪ್ರೋಟೀನ್, ಪೊಟ್ಯಾಷಿಯಂ, ರಿಬೋಫ್ಲಾವಿನ್, ಸೋಡಿಯಂ, ಥಯಾಮಿನ್, ಸಕ್ಕರೆ, ವಿಟಮಿನ್ ಸಿ, ಜಿಂಕ್‌ಗಳು ಚೆನ್ನಾಗಿ ಇರುತ್ತೆ.

ಬಾಳೆಕಾಯಿಯಲ್ಲಿ ಡಯೆಟರಿ ಫೈಬರ್ ಚೆನ್ನಾಗಿರುತ್ತೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದಕ್ಕೆ ಬಹಳ ಸಹಾಯ ಮಾಡುತ್ತದೆ. ಬಾಳೆಕಾಯಿ ತಿಂದರೆ ಮಲವಿಸರ್ಜನೆ ನಿಯಂತ್ರಣದಲ್ಲಿರುತ್ತದೆ. ಹಾಗಾಗಿ ಮಲಬದ್ಧತೆ ಸಮಸ್ಯೆ ಬೇಗ ಕಡಿಮೆಯಾಗುತ್ತದೆ.

ಹಸಿ ಬಾಳೆಕಾಯಿಲ್ಲಿರುವ ಫೈಬರ್ ಅಂಶ ಸಮತೋಲಿತ ಕರುಳಿನ ಮೈಕ್ರೋಬಯೋಮ್‌ ಅನ್ನು ಕಾಪಾಡುತ್ತದೆ. ಹಾಗೇ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಬೆಳೆಯೋಕೆ ಸಹಾಯ ಮಾಡುತ್ತದೆ. ಇಷ್ಟಲ್ಲದೆ, ಬಾಳೆಕಾಯಿಯನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡ್ರೆ ಅಜೀರ್ಣ, ಹೊಟ್ಟೆ ಉಬ್ಬರ ಇತ್ಯಾದಿ ಜೀರ್ಣಕ್ರಿಯೆ ಸಮಸ್ಯೆಗಳು ಕಡಿಮೆಯಾಗುತ್ತೆ.

ಬಾಳೆಕಾಯಿ ಹೃದಯವನ್ನು ಆರೋಗ್ಯವಾಗಿಡುವುದಕ್ಕೂ ಸಹಾಯ ಮಾಡುತ್ತದೆ. ಬಾಳೆಕಾಯಿಯಲ್ಲಿ ಫೈಬರ್, ಪೊಟ್ಯಾಷಿಯಂ, ಪ್ರಬಲವಾದ ಉತ್ಕರ್ಷಣ ನಿರೋಧಕಗಳು ಚೆನ್ನಾಗಿರುತ್ತೆ. ಇವು ನಮ್ಮ ಹೃದಯವನ್ನ ರಕ್ಷಿಸುತ್ತೆ. ಅದಕ್ಕೇ ಹೃದಯಕ್ಕೆ ಬಾಳೆಕಾಯಿ ಒಳ್ಳೆಯ ಆಹಾರವೆನ್ನುತ್ತಾರೆ ಆಹಾರ ತಜ್ಞರು.

ಬಾಳೆಕಾಯಿ ತಿಂದರೆ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಅಧಿಕ ರಕ್ತದೊತ್ತಡದ ಅಪಾಯ ಕಡಿಮೆಯಾಗುತ್ತದೆ. ಬಾಳೆಕಾಯಿಲ್ಲಿರುವ ಪೊಟ್ಯಾಷಿಯಂ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡೋಕೆ ಸಹಾಯ ಮಾಡುತ್ತೆ. ಇಷ್ಟೇ ಅಲ್ಲದೆ, ಇದರಲ್ಲಿರೋ ಉತ್ಕರ್ಷಣ ನಿರೋಧಕಗಳು, ಫೈಬರ್ ದೇಹದಲ್ಲಿ ಸಂಗ್ರಹವಾಗಿರೋ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನ ಕಡಿಮೆ ಮಾಡೋಕೆ, ಹೃದಯನಾಳ ವ್ಯವಸ್ಥೆಯನ್ನ ಬಲವಾಗಿಡೋಕೆ ಸಹಾಯ ಮಾಡುತ್ತೆ. ಒಟ್ಟಾರೆಯಾಗಿ ಬಾಳೆಕಾಯಿ ಹೃದಯವನ್ನ ಆರೋಗ್ಯವಾಗಿಡೋದ್ರಲ್ಲಿ ಮುಖ್ಯ ಪಾತ್ರ ವಹಿಸುತ್ತೆ.

ಬಾಳೆಕಾಯಿಯನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡ್ರೆ ನೀವು ಆರೋಗ್ಯಕರವಾಗಿ ತೂಕನೂ ಇಳಿಸಬಹುದು. ಇದರಲ್ಲಿರೋ ಫೈಬರ್ ಅಂಶ ನಿಮ್ಮ ಹೊಟ್ಟೆಯನ್ನ ಬೇಗ ತುಂಬಿಸುತ್ತೆ. ಹಸಿವನ್ನೂ ಕಡಿಮೆ ಮಾಡುತ್ತೆ.

ಹಾಗೇ ನೀವು ಹೆಚ್ಚಾಗಿ ತಿನ್ನೋ ಅವಕಾಶವನ್ನೂ ಕಡಿಮೆ ಮಾಡುತ್ತೆ. ಬಾಳೆಕಾಯಿಲಿರೋ ನೈಸರ್ಗಿಕ ಸಕ್ಕರೆಗಳು ಸಂಸ್ಕರಿಸಿದ ಸಿಹಿತಿಂಡಿಗಳಿಗೆ ಪೌಷ್ಟಿಕ ಪರ್ಯಾಯವನ್ನ ಒದಗಿಸುತ್ತೆ. ಇದನ್ನ ತಿಂದ್ರೆ ನೀವು ಅನಗತ್ಯ ಸಿಹಿತಿಂಡಿ, ತಿಂಡಿಗಳನ್ನ ತಿನ್ನದೇ ಇರಬಹುದು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಳಮೀಸಲಾತಿ : ಹೆಚ್.ಎನ್.ನಾಗಮೋಹನ್‌ದಾಸ್ ಆಯೋಗದ ವರದಿ ತಾರತಮ್ಯ.!ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ದ ಅಪಪ್ರಾಚಾರ ಮಾಡುತ್ತಿರುವವರ ಮೇಲೆ  ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ.!ಪ್ರೀತಿಸಿದ ಯುವಕನಿಂದ ಮತಾಂತರಕ್ಕೆ ಒತ್ತಾಯ: ಯುವತಿ ಸಾವಿಗೆ ಶರಣುಪತ್ನಿಯ ಮೃತದೇಹವನ್ನು ಬೈಕ್‌ನಲ್ಲಿ ಸಾಗಿಸಿದ ಪತಿ - ವೀಡಿಯೋ ವೈರಲ್‌ಪ್ಲಾಸ್ಟಿಕ್ ಮಾಲಿನ್ಯದಿಂದ ಮೌನವಾಗುತ್ತಿರುವ ಪಕ್ಷಿಗಳು!ಕಾಡಾನೆ ಜತೆ ಸೆಲ್ಫೀ ವ್ಯಕ್ತಿಗೆ 25 ಸಾವಿರ ರೂ. ದಂಡ.!ಚಿನ್ನದ ಕಳ್ಳಸಾಗಣೆಕೆ ಕೇಸ್ ನಟಿ ರನ್ಯಾ ರಾವ್ : ಕೆ. ರಾಮಚಂದ್ರ ರಾವ್ ಮಹಾನಿರ್ದೇಶಕರಾಗಿ ನೇಮಕ.!ಬಂಗಾಳಕೊಲ್ಲಿಯಲ್ಲಿ  ವಾಯುಭಾರ ಕುಸಿತ ನಾಳೆಯಿಂದ ಮಳೆ.!ಶನಿ ಚಲನೆಯಿಂದ ತ್ರಿಕೇದಶ ಯೋಗ: ಹಣ, ಮನೆ, ಕೌಟುಂಬಿಕ ಸಮಸ್ಯೆ ದೂರ! ಯಾರಿಗೆಲ್ಲಾ ನೋಡಿ!ಕರ್ನಾಟಕ ಸಾರಿಗೆ ನಿಗಮದ ಚಾಲಕ ಕಂ-ನಿರ್ವಾಹಕ ಹುದ್ದೆಗಳ ಭರ್ತಿ ರೆಡಿ.!