LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಿಟ್ ಕಾಯಿನ್ ಹಗರಣ: ಡಿವೈಎಸ್​ಪಿ ಶ್ರೀಧರ್ ಪೂಜಾರಿ ಅರೆಸ್ಟ್‌

ಬೆಂಗಳೂರು : ಬಹುಕೋಟಿ ಬಿಟ್ ಕಾಯಿನ್ ಹಗರಣ ಸಂಬಂಧಿಸಿದಂತೆ ಡಿವೈಎಸ್​ಪಿ ಶ್ರೀಧರ್ ಪೂಜಾರಿ​​ ಅನ್ನು ಎಸ್​ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.ಬಿಟ್​ ಕಾಯಿನ್ ಪ್ರಕರಣದ ತನಿಖೆ ವೇಳೆ ಎವಿಡೆನ್ಸ್ ಟ್ಯಾಂಪರಿಂಗ್ ಮಾಡಿದ್ದ ಆರೋಪ ಅವರ ಮೇಲಿತ್ತು. ಹೀಗಾಗಿ ಇಂದು ವಿಚಾರಣೆಗೆ ಕರೆಸಿ ಸಿಐಡಿ ಕಚೇರಿಯಲ್ಲೇ ಎಸ್​​ಐಟಿ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ.

ಎಸ್​ಐಟಿ ರಚನೆ ಬಳಿಕ ಕಾಟನ್​​ಪೇಟೆ ಠಾಣೆಯಲ್ಲಿ ಶ್ರೀಧರ್​ ವಿರುದ್ಧ ಹೊಸ ಎಫ್​ಐಆರ್​​ ದಾಖಲಾಗಿತ್ತು. ಕಾಟನ್​ಪೇಟೆ ಠಾಣೆಯ ಕೇಸ್​ನ್ನೂ​ ಸಹ ಎಸ್​ಐಟಿ ತನಿಖೆ ನಡೆಸುತ್ತಿದ್ದು, ಸದ್ಯ ಡಿವೈಎಸ್​ಪಿ ಶ್ರೀಧರ್ ಪೂಜಾರಿಯ​ನ್ನು ಎಸ್​ಐಟಿ ಅಧಿಕಾರಿಗಳು ಬಂಧಿಸಿದ್ದು, ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ.

ಡಿವೈಎಸ್‌ಪಿ ಶ್ರೀಧರ್ ಈ ಹಿಂದೆ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಂಧಿಸಿ ವಿಚಾರಣೆ ನಡೆಸಿದ್ದರು. ಡಿವೈಎಸ್​​​​ಪಿ ಶ್ರೀಧರ್ ಕೆ. ಪೂಜಾರಿ ವಿರುದ್ಧ ವಿಚಾರಣೆಗೆ ಸಹಕರಿಸದೇ ತಲೆಮರೆಸಿಕೊಂಡ ಹಿನ್ನೆಲೆ ವಿಚಾರಣಾ ನ್ಯಾಯಾಲಯದಿಂದ ಘೋಷಿತ ಆರೋಪಿ ಎಂದು ವಾರಂಟ್​ ಜಾರಿ ಮಾಡಲಾಗಿತ್ತು.

ವಾರಂಟ್ ಪ್ರಶ್ನಿಸಿ ಇತ್ತೀಚೆಗೆ ಶ್ರೀಧರ್ ಕೆ. ಪೂಜಾರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಬಳಿಕ ಘೋಷಿತ ಆರೋಪಿ ಆದೇಶವನ್ನು ರದ್ದುಪಡಿಸಿತ್ತು. ಬಿಟ್ ಕಾಯಿನ್ ಕೇಸ್​​​​ನಲ್ಲಿ ಆರೋಪಿಗಳಿಗೆ ಸಹಾಯ ಮಾಡಿರುವ ಆರೋಪವನ್ನು ಶ್ರೀಧರ್ ಕೆ. ಪೂಜಾರಿ ಎದುರಿಸಿದ್ದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರು: ಅಣ್ಣನ ನೋಡಲು ಜೈಲಿಗೆ ಹೋದಾಗ ತಲೆ ಮರೆಸಿಕೊಂಡಿದ್ದ ಆರೋಪಿ AI ಕ್ಯಾಮರಾದಿಂದ ಸೆರೆನಂದಿನಿ ಹಾಲಿನ‌ ದರ ಶೀಘ್ರದಲ್ಲಿಯೇ ಏರಿಕೆ..?ಅಲ್ಪಸಂಖ್ಯಾತ ಸಮುದಾಯದ ಮುಖಂಡರನ್ನು ಹೊರಗಿಟ್ಟು ಬಜೆಟ್ ಪೂರ್ವಭಾವಿ ಸಭೆ- ವ್ಯಾಪಕ ಆಕ್ರೋಶ.ಲ್ಯಾಡಿಂಗ್ ವೇಳೆ ರನ್‌ ವೇಯಲ್ಲೇ ತಲೆ ಕೆಳಗಾಗಿ ಬಿದ್ದ ವಿಮಾನಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ಬೀಗ : ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳುಚಲಿಸುತ್ತಿದ್ದ ರೈಲಿನಿಂದ ಕಾಲು ಜಾರಿ 70 ಅಡಿ ಆಳದ ನದಿಗೆ ಬಿದ್ದ ವಿದ್ಯಾರ್ಥಿ..!ಕುಡಿಯುವ ನೀರು ಅನಗತ್ಯ ಪೋಲು ಮಾಡಿದರೆ 5000 ದಂಡನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕಕೇವಲ 22 ವರ್ಷಕ್ಕೇ ಮೊದಲ ಪ್ರಯತ್ನದಲ್ಲೇ IFS ಅಧಿಕಾರಿಯಾದ ಮುಸ್ಕಾನ್ ಜಿಂದಾಲ್ಈ ಕಾಯಿಲೆಯನ್ನು ಕಂಟ್ರೋಲ್‌ಗೆ ತರಲು ಟೊಮೆಟೋ ಜ್ಯೂಸ್ ತುಂಬಾ ಪ್ರಯೋಜನಕಾರಿ