LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಿಹಾರದಲ್ಲಿ ಆರ್ಕೆಸ್ಟ್ರಾ ಪ್ರದರ್ಶನದ ವೇಳೆ ಛಾವಣಿ ಕುಸಿದು ಹಲವರಿಗೆ ಗಾಯ

ಬಿಹಾರ:ಮಂಗಳವಾರ ಬಿಹಾರದಲ್ಲಿ ಆರ್ಕೆಸ್ಟ್ರಾ ಪ್ರದರ್ಶನದ ವೇಳೆ ತವರದ ಛಾವಣಿ (ಟಿನ್ ರೂಫ್) ಕುಸಿದು ಹಲವರು ಗಾಯಗೊಂಡ ಘಟನೆ ನಡೆದಿದೆ.ಛಪ್ರಾದ ಇಸುಪಾರ್‌ನಲ್ಲಿ ನಡೆದ ಮಹಾವೀರ ಮೇಳದ ವೇಳೆ ಈ ಘಟನೆ ನಡೆದಿದೆ.

ಛಾಪ್ರಾ ನಗರದಲ್ಲಿ ನೂರಾರು ಜನರು ತವರದ ಛಾವಣಿಯ ಮೇಲೆ ನಿಂತು ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾಗ ಟಿನ್ ರೂಫ್ ತುಂಡಾಗಿ ಅದರ ಕೆಳಗೆ ನಿಂತಿದ್ದ ನೂರಾರು ಜನರ ಮೇಲೆ ಬಿದ್ದಿದೆ. ಇದರಿಂದಾಗಿ ಅನೇಕರು ಗಾಯಗೊಂಡಿದ್ದಾರೆ.

ಸಂಗೀತ ಕಾರ್ಯಕ್ರಮವನ್ನು ವೀಕ್ಷಿಸಲು ಸಾವಿರಾರು ಸ್ಥಳೀಯರು ವೇದಿಕೆಯ ಸುತ್ತಲೂ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದರು. ಪ್ರದರ್ಶನವನ್ನು ವೀಕ್ಷಿಸಲು ಜನರು ರಸ್ತೆಯ ಉದ್ದಕ್ಕೂ ಬಾಲ್ಕನಿಗಳು, ಮರಗಳು ಮತ್ತು ಕಟ್ಟಡದ ಛಾವಣಿಗಳನ್ನು ಏರುತ್ತಿರುವ ದೃಶ್ಯಗಳು ಕೂಡಾ ಈಗ ವೈರಲ್ ಆಗಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಎರಡು ಠಾಣೆಗಳ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ. ಗಾಯಗೊಂಡವರಲ್ಲಿ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ತರಬೇತಿಯಲ್ಲಿ ಸಿಕ್ಸ್ ಪ್ಯಾಕ್ ಪ್ರದರ್ಶಿಸಿದ ವಿರಾಟ್ ಕೊಹ್ಲಿಇಂದು ದೆಹಲಿಯಲ್ಲಿ 70 ಕ್ಷೇತ್ರಗಳಿಗೆ ಚುನಾವಣೆಸ್ವೀಡನ್‌ನ ಶಾಲೆಯಲ್ಲಿ ಗುಂಡಿನ ದಾಳಿ - 11 ಜನರ ಮಾರಣಹೋಮನಿಮ್ಮ ಮನೆಯಲ್ಲಿ ಇಂತಹ ಸಂಕೇತಗಳು ಕಂಡುಬಂದರೆ ಅದು ಮಾಟ ಮಂತ್ರದ ಪ್ರಭಾವ..!ಐಪಿಎಸ್ ಅಧಿಕಾರಿ ಪೂಜಾ ಯಾದವ್ ಕಠಿಣ ಪರಿಶ್ರಮದ ಕಥೆಒಣ ಕೆಮ್ಮು, ಕಫದಂತಹ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ..? ಈ ಮನೆಮದ್ದುಗಳನ್ನು ಅನುಸರಿಸಿವಚನ-ಗುಪ್ತ ಮಂಚಣ್ಣ !ಇಂದು ಎಸ್‍ಎಸ್‍ಎಲ್‍ಸಿ ಇಂಗ್ಲೀಷ್ ಭಾಷೆಗೆ ಸಮಬಂಧಿಸಿದಂತೆ ಫೆ.05ರಂದು ಇಂದು ನೇರ ಫೋನ್ ಇನ್ ಕಾರ್ಯಕ್ರಮ.!ದ.ಕ. ಜಿಲ್ಲಾ ಕಾಂಗ್ರೆಸ್ ನಾಯಕ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರ ಮೇಲೆ ಫೈರಿಂಗ್..!ಬ್ಯಾಂಕ್ ಸಹಾಯವಾಣಿ ಹೆಸರಿನಲ್ಲಿ ಬಂದ ಕರೆಗೆ ಒಂದನ್ನು ಒತ್ತಿ 2 ಲಕ್ಷ ಕಳೆದುಕೊಂಡ ಮಹಿಳೆ!