LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬೆಂಡೆಕಾಯಿಯ ಕುರುಕಲು ತಿಂಡಿ ಮಾಡುವ ವಿಧಾನ

ಕುರುಕಲು ತಿನಿಸುಗಳು ಯಾವಾಗಲೂ ಗರಿ ಗರಿಯಾಗಿದ್ದರೆ ಮಾತ್ರ ತಿನ್ನಲು ರುಚಿಸುವುದು. ಗರಿಗರಿಯಾದ ಕುರುಕಲು ತಿಂಡಿ ಏನಾದರೂ ಸಂಜೆ ವೇಳೆ ಚಹಾದೊಂದಿಗೆ ಸವಿಯಲು ಇದ್ದರೆ ಬಹಳ ಚೆನ್ನಾಗಿರುತ್ತದೆ.

ಬೇಕರಿಯಿಂದ ನೀವು ಯಾವಾಗಲೂ ಕುರುಕಲು ತಿಂಡಿ ತರೋದಕ್ಕಿಂತ ಮನೆಯಲ್ಲೇ ಏನಾದರೂ ಸಿಂಪಲ್ ಆಗಿ ಟ್ರೈ ಮಾಡಲು ಬಯಸಿದರೆ ಇಲ್ಲಿ ಹೇಳುವ ಬೆಂಡೆಕಾಯಿಯ ಈ ಕುರುಕಲು ತಿಂಡಿ ಟಿಪ್ಸ್‌ ಉಪಯೋಗಿಸಿ. ಚಹಾದೊಂದಿಗೆ ಸವಿಯಲು ಮಜವೆನಿಸುತ್ತದೆ. ಊಟದೊಂದಿಗೆ ಇದನ್ನು ಸೈಡ್ ಡಿಶ್ ಆಗಿಯೂ ಬಳಸಬಹುದು.

ಬೇಕಾಗುವ ಪದಾರ್ಥಗಳು:

ಬೆಂಡೆಕಾಯಿ : 200 ಗ್ರಾಂಅಕ್ಕಿ ಹಿಟ್ಟು :1 ಟೀಸ್ಪೂನ್ಕಡಲೆ ಹಿಟ್ಟು : 2 ಟೀಸ್ಪೂನ್ಕೆಂಪು ಮೆಣಸಿನಪುಡಿ : ಅರ್ಧ ಟೀಸ್ಪೂನ್ಆಮ್ಚೂರ್ ಪುಡಿ : ಕಾಲು ಟೀಸ್ಪೂನ್ಚಾಟ್ ಮಸಾಲಾ : 1 ಟೀಸ್ಪೂನ್ಉಪ್ಪು : ರುಚಿಗೆ ತಕ್ಕಷ್ಟುಎಣ್ಣೆ : ಹುರಿಯಲು ಬೇಕಾಗುವಷ್ಟು.

ಮಾಡುವ ವಿಧಾನ:

ಮೊದಲಿಗೆ ಬೆಂಡೆಕಾಯಿಗಳನ್ನು ಚೆನ್ನಾಗಿ ತೊಳೆದು ಒಣ ಬಟ್ಟೆಯಿಂದ ಒರೆಸಿಕೊಳ್ಳಿ ನೀರಿನ ಅಂಶ ಇಲ್ಲದಾಗೆ ನೋಡಿಕೊಳ್ಳಿ.ಬೆಂಡೆಕಾಯಿಯ ಎರಡೂ ಬದಿಗಳನ್ನು ಕತ್ತರಿಸಿ, ತೆಳ್ಳಗಿನ ಹಾಗೂ ಉದ್ದವಾದ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ.ಬಳಿಕ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕೆಂಪು ಮೆಣಸಿನಪುಡಿ, ಆಮ್ಚೂರ್‌ಪುಡಿಯನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಬೆಂಡೆಕಾಯಿಗಳನ್ನು ಕುರುಕಲಾಗುವಂತೆ ಹಾಗೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಡೀಪ್ ಫ್ರೈ ಮಾಡಿ.ಬಳಿಕ ಅವುಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.ನಂತರ ಅದರ ಮೇಲೆ ಚಾಟ್ ಮಸಾಲಾವನ್ನು ಸಿಂಪಡಿಸಿ.ಇದೀಗ ಬೆಂಡೆಕಾಯಿಯ ಕುರುಕಲು ತಿಂಡಿ ಸವಿಯಲು ಸಿದ್ಧವಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗ್ರಾಹಕನಿಗೆ 50 ಪೈಸೆ ಹಿಂತಿರುಗಿಸದ ಅಂಚೆ ಇಲಾಖೆಗೆ 15 ಸಾವಿರ ರೂ. ದಂಡ..!ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆ ಅಬ್ಬರ - ಜನ ತತ್ತರ8th, SSLC ಪಾಸ್ ಆಗಿದ್ದೀರಾ..? ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ ಜೈಲಿನಲ್ಲಿ ದರ್ಶನ್ ವಿಡಿಯೋ ಕಾಲ್ ಕೇಸ್‌ - ಸಿಮ್ ಮೊಬೈಲ್ ಕೊಟ್ಟ ವ್ಯಕ್ತಿ ಅರೆಸ್ಟ್ಬೆಂಗಳೂರು ಕಟ್ಟಡ ಕುಸಿತ - ಮೃತರ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಘೋಷಿಸಿದ ಪ್ರಧಾನಿಬಾಂಗ್ಲಾ ದೇಶದ ಅಧ್ಯಕ್ಷರ ವಿರುದ್ಧ ಮತ್ತೆ ರೊಚ್ಚಿಗೆದ್ದ ಜನ - ರಾಷ್ಟ್ರಪತಿ ಭವನಕ್ಕೆ ನುಗ್ಗಿ ರಾಜೀನಾಮೆಗೆ ಆಗ್ರಹಪ್ರಿಯಾಂಕಾ ಗಾಂಧಿ  ಅವರು ಆಸ್ತಿ11.99 ಕೋಟಿ.!ಗ್ಯಾಂಗ್‌ಸ್ಟರ್ ಲಾರೆನ್ಸ್ ಹೆಸರಿನಲ್ಲಿ ಸಲ್ಮಾನ್‌ಗೆ ಬೆದರಿಕೆ ಹಾಕಿದ್ದ ತರಕಾರಿ ವ್ಯಾಪಾರಿ ಅರೆಸ್ಟ್..!ಹೆಣ್ಣಿನ ಎದೆ ಸೀಳು ಕಾಣಿಸುವಂತೆ ಡ್ರಸ್ ಹಾಕುತ್ತಾರೆ?ಐದೇ ನಿಮಿಷದಲ್ಲಿ ಗ್ಯಾಸ್ಟ್ರಿಕ್ ಮಾಯ…!