ಬೆಲೆಕೇರಿ ಅದಿರು ನಾಪತ್ತೆ ಪ್ರಕರಣ ಶಾಸಕ ಸತೀಶ್ ಸೈಲ್ ಜೈಲ್.! ನಿವೃತ್ತ ನ್ಯಾ. ಸಂತೋಷ್ ಹೆಗಡೆ ಹೇಳಿದ್ದು ಹೀಗೆ.!
ಬೆಂಗಳೂರು : ಲೋಕಾಯುಕ್ತ ನಿವೃತ್ತ ನ್ಯಾ. ಸಂತೋಷ್ ಹೆಗಡೆ ಅವರು ಬೆಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಏಳು ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಿದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ಹೇಳಿದ್ದು ಹೀಗೆ ಈ ಒಂದು ಪ್ರಕರಣದಲ್ಲಿ ಇನ್ನೂ ಹಲವರಿದ್ದಾರೆ ಅವರಿಗೂ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ತೀರ್ಪಿನ ಮುಖಾಂತರ ತಪ್ಪು ಮಾಡಿದವರಿಗೆ ಶಿಕ್ಷೆ ಹಾಗೆ ಆಗುತ್ತದೆ ಎಂದು ತೋರಿಸುತ್ತದೆ. ಅಕ್ರಮ ಅದಿರು ಸಾಗಣೆ ಕೇಸ್ನಲ್ಲಿ ಶಿಕ್ಷೆಯಾಗಿದ್ದು ಉತ್ತಮ ಬೆಳವಣಿಗೆ ಶಿಕ್ಷೆ ಆಗಿರುವುದರಿಂದ ನ್ಯಾಯಾಂಗದ ಶಕ್ತಿ ತೋರಿಸಿ ದಂತಾಗುತ್ತದೆ. ನ್ಯಾಯಾಂಗದ ಮೇಲೆ ಜನರಿಗೆ ವಿಶ್ವಾಸ ಬಂದಿದೆ. ಹಾಗೇ ಈ ಪ್ರಕರಣದಲ್ಲಿಇನ್ನೂ ಹಲವರಿದ್ದಾರೆ ಅವರಿಗೂ ಶಿಕ್ಷೆ ಆಗಬೇಕು ಎಂದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.